ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಹುಟ್ಟಿದ ತಿಂಗಳು ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ ಎಂಬುವುದು ನಿಮಗೆ ತಿಳಿದಿದೆಯೇ..?

0
4984

Kannada News | Karnataka Temple History

ಜ್ಯೋತಿಷ್ಯ ಶಾಸ್ತ್ರವನ್ನು ಬಲ್ಲವರು ಒಬ್ಬರ ಹುಟ್ಟಿದ ದಿನ, ತಿಂಗಳು ಮತ್ತು ವಾರವನ್ನು ಇಟ್ಟುಕೊಂಡು ಆ ವ್ಯಕ್ತಿಯ ಸ್ವಬಾವ, ಗುಣ, ನಡತೆ ಮೊದಲಾದವುಗಳನ್ನು ತಿಳಿದುಕೊಳ್ಳುತ್ತಾರೆ. ಈ ಜ್ಯೋತಿಷ್ಯ ಶಾಸ್ತ್ರವನ್ನು ಆಧಾರವಾಗಿಟ್ಟುಕೊಂಡು ಅತ್ಯಾಶ್ಚರ್ಯಕರವಾದ ರೀತಿಯಲ್ಲಿ ಭೂತ, ಭವಿಷ್ಯ, ವರ್ತಮಾನ ಕಾಲಗಳ ಫಲಗಳನ್ನು ತಿಳಿಸುತ್ತಾರೆ. ಇಂತಹ ವಿಷಯಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂಬುದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳದೇ ಇದ್ದರೂ ವಾಸ್ತವಾಂಶಗಳನ್ನು ಗಮನಿಸಿ ನಿಜ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. ಅನೇಕ ಸಾಂಸ್ಕೃತಿಕ ಭಿನ್ನತೆಗಳೊಂದಿಗೆ ಈ ಪದ್ಧತಿ ಜಗತ್ತಿನಾದ್ಯಂತ ಕಾಣಸಿಗುತ್ತದೆ.

ನಿಮ್ಮ ಹುಟ್ಟಿದ ತಿಂಗಳು ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ ಎಂಬುದನ್ನ ನೋಡೋಣ ಬನ್ನಿ

ಜನವರಿ

ಅಸಾಧಾರಣ ಮಹತ್ವಾಕಾಂಕ್ಷಿ ಮತ್ತು ಶಕ್ತಿಯುತರಾಗಿರುತ್ತಾರೆ. ಜನವರಿ ತಿಂಗಳಿನಲ್ಲಿ ಜನಿಸಿದವರು ಗಂಭೀರ ವ್ಯಕ್ತಿಗಳು ಮತ್ತು ನಾಯಕರಾಗಿರುತ್ತಾರೆ. ಮೊಂಡುತನದ ಸ್ವಭಾವವುಳ್ಳವರಾಗಿರುತ್ತೀರಾ. ನೀವು ಯಾವಾಗಲೂ ಜನಸಂದಣಿಯಲ್ಲಿ ನಿಲ್ಲಲು ಬಯಸುವಿರಿ. ಒಳ್ಳೆಯ ಜೀವನವನ್ನು ನೀವು ಪ್ರೀತಿಸುವಿರಿ. ಹೃದಯದಲ್ಲಿ ರೋಮ್ಯಾಂಟಿಕ್. ಆಳವಾದ ಚಿಂತಕ. ಸ್ನೇಹಿತರಿಗೆ ನಿಷ್ಠಾವಂತರು. ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಮತ್ತು ಪ್ರಯತ್ನಿಸಲು ಎಂದೆಂದಿಗೂ ಸಿದ್ಧವಾಗಿರುತ್ತಿರ. ಜೀವನದ ಬಗ್ಗೆ ಗಂಭೀರ. ಇತರರನ್ನು ಸಂತೋಷಪಡಿಸಲು ಇಷ್ಟಪಡುತ್ತೀರಾ. ತುಂಬಾ ಅಂತರ್ಮುಖಿಯಾಗಿಲ್ಲ, ತುಂಬಾ ಬಹಿರ್ಮುಖವಾಗಿಲ್ಲ. ಸ್ಮಾರ್ಟ್ ಮತ್ತು ಮೊಂಡುತನವನ್ನು ಹೊಂದುವರು, ಹೆಚ್ಚು ಕೆಲಸ ಮಾಡುವರು, ಮತ್ತು ತುಂಬಾ ಸೂಕ್ಷ್ಮ ವಾಗಿರುತ್ತೀರಾ.

ಫೆಬ್ರವರಿ

ಈ ತಿಂಗಳಲ್ಲಿ ಹುಟ್ಟಿದವರು ಸಹಜವಾಗಿ ಬುದ್ದಿವಂತರು ಮತ್ತು ಚತುರರು ಆಗಿರುತ್ತಾರೆ. ಪರಹಿತಚಿಂತನೆ, ಶಾಂತಿ ಪ್ರೇಮಿ, ನಿಮ್ಮ ಹತ್ತಿರ ಮತ್ತು ಪ್ರಿಯರಿಗೆ ನಂಬಿಗಸ್ತರಾಗಿ. ಬಹಳ ಸೂಕ್ಷ್ಮ ಮತ್ತು ಪ್ರಾಮಾಣಿಕರಾಗಿರುತ್ತಾರೆ. ಇವರಿಗೆ ನಾಚಿಕೆ ಹೆಚ್ಚು, ಆದರೆ ಬದ್ಧತೆ ಕೂಡ ಜಾಸ್ತಿ. ಇವರನ್ನು ಕಟ್ಟಿ ಹಾಕಲು ಯಾರಾದರೂ ಪ್ರಯತ್ನಿಸಿದರೆ, ಇವರು ಆಕ್ರಮಣಶಾಲಿಗಳಾಗುತ್ತಾರೆ. ಫೆಬ್ರವರಿಯಲ್ಲಿ ಜನಿಸಿದವರು ತುಂಬಾ ರೋಮ್ಯಾಂಟಿಕ್ ಆಗಿದ್ದು, ಇವರ ಕಣ್ಣು ಸದಾ ಅವರ ಗುರಿಯ ಮೇಲಿರುತ್ತದೆ. ಇತರರಿಗಿಂತ ಇವರು ಕನಸುಗಳು ಬಹಳ ದೊಡ್ಡದಿರುತ್ತವೆ.

ಮಾರ್ಚ್

ಈ ತಿಂಗಳಲ್ಲಿ ಹುಟ್ಟಿದವರು ಅಕ್ಕರೆ, ನಾಚಿಕೆ ಮತ್ತು ತಮ್ಮ ಪಾಡಿಗೆ ತಾವು ಇರುವುದು. ಇವರು ಶಾಂತಿ, ನೆಮ್ಮದಿ ಮತ್ತು ಪ್ರಶಾಂತತೆಯನ್ನ ಹೆಚ್ಚು ಇಷ್ಟ ಪಡುತ್ತಾರೆ ಹಾಗು ಇವರು ಬಹಳಾನೇ ವಿಶ್ವಾಸಾರ್ಹ ವ್ಯಕ್ತಿಗಳು ಆಗಿರುತ್ತಾರೆ. ಇವರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಮತ್ತು ಜನರನ್ನು ಸರಿಯಾಗಿ ಅರ್ಥೈಸಿಕೊಳ್ಳುತ್ತಾರೆ. ಇವರು ತಮ್ಮ ಭಾವನೆಗಳನ್ನೆಲ್ಲಾ ತಮ್ಮ ಒಳಗೇನೇ ಮುಚ್ಚಿಟ್ಟುಕೊಳ್ಳುವುದಕ್ಕೆ ಮತ್ತು ಬಹಳ ವಿರಳವಾಗಿ ಅವುಗಳನ್ನ ವ್ಯಕ್ತಪಡಿಸುವುದಕ್ಕೆ ಹೆಸರುವಾಸಿ. ಇವರದು ಆಕರ್ಷಕ ವ್ಯಕ್ತಿತ್ವ. ರಹಸ್ಯವನ್ನು ಕಾಪಾಡುವರು. ಸಾಮಾನ್ಯವಾಗಿ ಇವರು ಪ್ರಾಮಾಣಿಕರಾಗಿರುವರು. ಬೇಗ ಕೋಪಗೊಳ್ಳುವರು.

ಏಪ್ರಿಲ್

ಇವರ ಮುಖ್ಯ ಗುಣಗಳು ಎಂದರೆ – ಮಾತುಗಾರಿಕೆ, ಆತ್ಮವಿಶ್ವಾಸ, ಸೂಕ್ಷ್ಮತೆ. ಇವರು ಜೀವನದ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಹೊಂದಿರುತ್ತಾರೆ ಮತ್ತು ಹೈಪರ್ ಆಕ್ಟಿವ್ ಆಗಿರುತ್ತಾರೆ. ಇವರು ಸ್ವಲ್ಪ ಗುಟ್ಟುಗಳನ್ನ ಕಾಪಾಡಿಕೊಳ್ಳುವುದು ಹೆಚ್ಚು. ಇಷ್ಟೆಲ್ಲಾ ಗುಣಗಳಿರುವ ವ್ಯಕ್ತಿಯು ಯಾವಾಗಲು ಜನರಲ್ಲಿ ಆಸಕ್ತಿ ಮೂಡಿಸುವಂತಹ ವ್ಯಕ್ತಿ ಆಗಿರುತ್ತಾನೆ. ಇವರು ನಿಷ್ಠಾವಂತ ಪ್ರೇಮಿ. ಆಶಾದಾಯಕ ನಿರ್ಣಯಗಾರ ಮತ್ತು ಬುದ್ಧಿವಂತರಾಗಿರುತ್ತಾರೆ.

ಮೇ
ಇವರು ತುಂಬಾ ಆಕರ್ಷಕ ವ್ಯಕ್ತಿತ್ವ. ಒಳ್ಳೆಯವರು. ಇವರು ಹೊಸ ಹೊಸ ಸ್ನೇಹಿತರನ್ನ ಮಾಡಿಕೊಳ್ಳಲು ಇಚ್ಛಿಸುವರು ಮತ್ತು ಎಲ್ಲರೊಡನೆ ಬೆರೆಯುವರು. ಇಷ್ಟೇ ಅಲ್ಲದೆ, ಇವರು ಶ್ರಮಜೀವಿಗಳು ಆಗಿರುತ್ತಾರೆ ಮತ್ತು ಇವರಲ್ಲಿ ಎಂದಿಗೂ ಬತ್ತದ ಉತ್ಸಾಹ ಇರುತ್ತದೆ. ಜೀವನದ ಬಗ್ಗೆ ಸಂತೋಷದ ವರ್ತನೆ, ಸ್ವತಂತ್ರ, ರಹಸ್ಯ, ಬುದ್ಧಿವಂತಿಕೆಯ ಮನಸ್ಸು ಉಳ್ಳವರು. ಇವರು ಬೇಗ ಕೋಪಗೊಳ್ಳುತ್ತಾರೆ. ಭಾವನಾತ್ಮಕಕ್ಕಿಂತ ಹೆಚ್ಚು ತಾರ್ಕಿಕ. ಕ್ರಿಯಾತ್ಮಕ ಮತ್ತು ಸಕ್ರಿಯವಾಗಿರುತ್ತಾರೆ.

ಜೂನ್
ಇವರು ತುಂಬಾ ಕುತೂಹಲಕಾರಿ ಯಾಗಿರುತ್ತಾರೆ, ಜೊತೆಗೆ ರಚನಾತ್ಮಕ ಮತ್ತು ಅಭಿವ್ಯಕ್ತಿಶೀಲ ವ್ಯಕ್ತಿಗಳು. ಆದರೆ ಇವರು ಯೋಚಿಸುವ ಮೊದಲೇ ಮಾತನಾಡುವರು. ಇವರು ನೇರವಾಗಿ ಸತ್ಯ ಹೇಳುವುದನ್ನು ಬಯಸುವರು, ಬೆನ್ನ ಹಿಂದೆ ಮಾತನಾಡುವುದನ್ನು ಇವರು ಇಚ್ಛಿಸುವುದಿಲ್ಲ. ಇವರ ಸಂಗಾತಿ ಇವರ ಕೈ ಗೊಂಬೆ ಆಗುತ್ತಾರೆ. ಸಾಕಷ್ಟು ಚರ್ಚೆ, ಸ್ನೇಹಪೂರ್ವಕ, ಸ್ಟೈಲಿಶ್ ಮತ್ತು ಸೊಗಸುಗಾರ ಗುಣಗಳುಳ್ಳವರು. ಇದರ ಜೊತೆ ನಿಷ್ಠಾವಂತ ಪ್ರೇಮಿಯಾಗಿರುತ್ತಾರೆ.

ಜೂಲೈ

ಇವರು ತುಂಬಾ ಪ್ರಾಮಾಣಿಕರು, ನಿಗೂಢ, ಬುದ್ದಿವಂತರು ಮತ್ತು ಸುಂದರ ಚೆಲುವೆಯರು. ಇವರಿಗೆ ಗಲಭೆ ಅಥವಾ ಜಗಳ ಇಷ್ಟವಾಗುವುದಿಲ್ಲ, ಮತ್ತು ಇವರು ಎಲ್ಲರ ಜೊತೆ ಸೌಮ್ಯವಾಗಿರುವರು. ಇವರಿಗೆ ಮೋಸಮಾಡುವುದರಿಂದ ಇವರನ್ನು ನೀವು ಸುಲಭವಾಗಿ ಕಳೆದುಕೊಳ್ಳುವಿರಿ. ಇವರು ಸೌಹಾರ್ದ, ಶಾಂತಿಯುತ ಮತ್ತು ಸಂಯಮದ ಸ್ವಭಾವದವರು. ಪ್ರೀತಿಯ ಪಾತ್ರರಾಗಿರುತ್ತಾರೆ. ಇವರ ಮನಸ್ಸು ಸೂಕ್ಷ್ಮ, ವಿನೋದ ವ್ಯಕ್ತಿ, ಕ್ಷಮಿಸುವ ಪ್ರಕೃತಿ ಮತ್ತು ಕೆಲವೊಮ್ಮೆ ಆಧ್ಯಾತ್ಮಿಕ ಕಡೆ ಒಲವನ್ನು ತೋರಿಸುತ್ತಾರೆ.

ಆಗಸ್ಟ್
ಈ ತಿಂಗಳಲ್ಲಿ ಜನಿಸಿದವರು ತುಂಬಾ ಮಹತ್ವಾಕಾಂಕ್ಷೆಯ. ಬ್ರೇವ್ ಮತ್ತು ಧೈರ್ಯಶಾಲಿ ವರ್ತನೆ ಉಳ್ಳವರಾಗಿರುತ್ತಾರೆ. ಇವರು ಯಾವುದೇ ರಿಸ್ಕ್ ಅನ್ನು ತೆಗೆದುಕೊಳ್ಳುವುದಕ್ಕೆ ಮತ್ತು ಎಲ್ಲರ ಗಮನವನ್ನ ಸೆಳೆಯಲು ಇಷ್ಟ ಪಡುತ್ತಾರೆ. ಇವರಿಗೆ ತಮ್ಮ ಮೇಲೆ ತಮಗೆ ಬಹಳ ನಿಯಂತ್ರಣ ಇರುವುದಿಲ್ಲ. ಆದರೆ ಬಹಳಷ್ಟು ಆತ್ಮವಿಶ್ವಾಸ ಹೊಂದಿರುತ್ತಾರೆ, ಜೋರಾಗಿ ಮಾತಾಡುತ್ತಾರೆ. ಇವರ ಮನಸ್ಸು ಬಹಳ ದಯಾಳು ಆಗಿದ್ದರೂ, ಕೆಲವೊಮ್ಮೆ ಸೇಡಿನ ಕಿಚ್ಚು ಆರುವವರೆಗೂ ಬಿಡುವುದಿಲ್ಲ. ಅದು ಬಿಟ್ಟರೆ, ಇವರ ಜೊತೆ ಬೆರೆಯುವುದಾಗಲಿ ಅಥವಾ ಮಾತನಾಡುವುದಾಗಲಿ ಕಷ್ಟವೇ ಅಲ್ಲ.

ಸೆಪ್ಟೆಂಬರ್
ಈ ತಿಂಗಳಲ್ಲಿ ಜನಿಸಿದವರು ಸಾಮಾನ್ಯವಾಗಿ ಅವರ ಎಲ್ಲಾ ವಿಷಯದಲ್ಲೂ ಯಶಸ್ಸನ್ನು ಕಾಣುತ್ತಾರೆ. ಅವರು ಎಲ್ಲಾ ಸಮಯದಲ್ಲೂ ರಕ್ಷಿಸಿಕೊಳ್ಳಬೇಕಾದ ಸ್ವಾಭಿಮಾನವನ್ನು ಹೊಂದಿರುವರು. ಬುದ್ಧಿವಂತ ಮತ್ತು ವಿನಮ್ರ, ಸ್ಪೂರ್ತಿದಾಯಕ ಪಾತ್ರ. ಕಷ್ಟದ ಸಂದರ್ಭಗಳಲ್ಲಿ ಕೂಲ್. ಪರಹಿತಚಿಂತನೆ ಮತ್ತು ಸಹಾನುಭೂತಿ ಉಳ್ಳವರಾಗಿರುತ್ತಾರೆ. ಇಂತಹವರು ದೂರದ ಪ್ರಯಾಣವನ್ನು ಇಷ್ಟಪಡುತ್ತಾರೆ. ಮತ್ತು ಇತರರಿಗೆ ಸಹಾಯ ಮಾಡಲು ಇಷ್ಟಪಡುತ್ತಾರೆ. ನಿಷ್ಠಾವಂತ ಪ್ರೇಮಿ. ಉತ್ತಮ ವೀಕ್ಷಕ ಮತ್ತು ಉತ್ತಮ ವಿನ್ಯಾಸಕ. ವಿಶ್ವಾಸಕ್ಕೆ ಅರ್ಹರು.

ಅಕ್ಟೋಬರ್

ಅತ್ಯಂತ ಧೈರ್ಯಶಾಲಿ ಮತ್ತು ಸಾಹಸ ವ್ಯಕ್ತಿತ್ವವುಳ್ಳ ವ್ಯಕ್ತಿಗಳಾಗಿರುತ್ತಾರೆ. ಇವರು ಮಾತಾಡಲು ಇಷ್ಟ ಪಡುತ್ತಾರೆ ಮತ್ತು ತಮ್ಮನ್ನು ಇಷ್ಟಪಡುವವರನ್ನು ತುಂಬಾ ಪ್ರೀತಿಸುತ್ತಾರೆ. ಇವರು ಬಾಹ್ಯದಿಂದ ಅಷ್ಟೇ ಅಲ್ಲದೆ ಒಳಗಿನಿಂದಲೂ ಬಹಳ ಸುಂದರ ವ್ಯಕ್ತಿಗಳು. ಇವರು ಕೆಲವೊಮ್ಮೆ ಸುಳ್ಳು ಹೇಳಬಹುದು ಆದರೆ ನಾಟಕ ಮಾಡುವುದಿಲ್ಲ. ಇವರು ಬೇಗ ಸಿಟ್ಟಾಗುವ ಗುಣ ಹೊಂದಿದ್ದರು, ತಮ್ಮ ಸ್ನೇಹಿತರಿಗೆ ತುಂಬಾ ಬೆಲೆ ಕೊಡುತ್ತಾರೆ. ಅವರನ್ನು ಇಷ್ಟ ಪಡುವ ಪ್ರತಿಯೊಬ್ಬರನ್ನು ಇವರು ಪ್ರೀತಿಸುತ್ತಾರೆ. ಸುಳ್ಳು ಹೇಳುತ್ತಾರೆ, ಆದರೆ ನಾಟಕ ಆಡುವುದಿಲ್ಲ ಮತ್ತು ತುಂಬಾ ಭಾವನಾತ್ಮಕವಾಗಿರುತ್ತಾರೆ.

ನವೆಂಬರ್
ಇವರು ಆಕರ್ಷಕ ವ್ಯಕ್ತಿತ್ವ ಉಳ್ಳವರು. ಇವರು ಪ್ರಾಮಾಣಿಕರು, ನಿಷ್ಠಾವಂತರು ಜೊತೆಗೆ ಅಪಾಯದ ವ್ಯಕ್ತಿ ಕೂಡ ಹೌದು. ಇವರು ಹೆಚ್ಚು ಜನರೊಂದಿಗೆ ಬೆರೆಯುತ್ತಾರೆ ಆದರೆ ರಹಸ್ಯವನ್ನು ಕಾಪಾಡಿಕೊಳ್ಳುವರು. ಪ್ರೀತಿ ಅಥವಾ ಕೋಪದಲ್ಲಿ ಅವರು ತುಂಬಾ ಭಾವುಕರಾಗಿರಬಹುದು. ಇವರ ಮನಸ್ಸನ್ನು ಬೇಗನೆ ಪರಿವರ್ತಿಸಬಹುದು. ಇವರು ನಿಷ್ಠಾವಂತ ಸ್ನೇಹಿತ. ಸರಿಯಾದ ಚಿಂತಕ, ಭಾವನಾತ್ಮಕ ಪ್ರೇಮಿ, ರಹಸ್ಯ, ಸಕ್ರಿಯ, ಮತ್ತು ಜೀವನವನ್ನು ಪೂರ್ಣವಾಗಿ ಆನಂದಿಸಲು ಇಷ್ಟಪಡುತ್ತಾರೆ.

ಡಿಸೆಂಬರ್

ಈ ತಿಂಗಳಲ್ಲಿ ಹುಟ್ಟಿದವರು ತುಂಬಾ ಪ್ರಾಮಾಣಿಕರು ಮತ್ತು ದಯಾಳು ಸ್ವಭಾವದವರು ಆಗಿರುತ್ತಾರೆ. ಅಲ್ಲದೆ ಇವರದ್ದು ಸಣ್ಣ ಮನೋಭಾವ. ತಾಳ್ಮೆ. ಭಾವನಾತ್ಮಕಕ್ಕಿಂತ ಹೆಚ್ಚು ತಾರ್ಕಿಕ. ಆಕರ್ಷಕವಾದ ನೋಟ ಮತ್ತು ಆಹ್ಲಾದಕರ ವ್ಯಕ್ತಿತ್ವ ಮತ್ತು ಸ್ಪರ್ಧಾತ್ಮಕ ಮನೋಭಾವದವರು. ಇವರು ನಾಡು, ನಾಡಿನ ಜನರ ಬಗ್ಗೆ ಕಾಳಜಿ ಹೊಂದಿರುತ್ತಾರೆ. ಇವರು ಆಟಗಳಲ್ಲಿ ಮತ್ತು ಚಟುವಟಿಕೆಗಳಲ್ಲಿ ಬಹಳ ಸಕ್ರಿಯರಾಗಿರುತ್ತಾರೆ, ಆದರೆ ಕೆಲವೊಮ್ಮೆ ಬಹಳ ಅಸಹನೆ ಮತ್ತು ಆತುರ ವ್ಯಕ್ತ ಪಡಿಸುತ್ತಾರೆ. ಇವರ ಸಾಂಗತ್ಯ ಬಹಳ ಮಜವಾಗಿರುತ್ತದೆ ಮತ್ತು ಇವರ ಆಳವಾದ ದೂರದೃಷ್ಟಿಯು ಕೆಲವೊಂದು ಬಾರಿ ಜನರಿಗೆ ಇವರನ್ನ ಅರ್ಥ ಮಾಡಿಕೊಳ್ಳಲು ಕಷ್ಟ ಆಗುವಂತೆ ಮಾಡುತ್ತದೆ.

Also Read: ಜ್ಯೋತಿಷ್ಯದ ಪ್ರಕಾರ ನಿಮ್ಮ ರಾಶಿ ಈ ನಾಲ್ಕರಲ್ಲಿ ಇದ್ದರೆ, ನಿಮ್ಮ ಜೀವನದಲ್ಲಿ ಪ್ರೀತಿ ಸಿಗುವುದಿಲ್ಲ ಒಂದು ವೇಳೆ ಸಿಕ್ಕರೂ ತುಂಬಾ ಕಷ್ಟ ಪಡಬೇಕಾಗುತ್ತದೆ..!!