ಜಾತಕದಲ್ಲಿ ಸಂತಾನ ಯೋಗದ ಫಲ ಯೋಗಗಳು ಇಲ್ಲಿವೆ ನೋಡಿ…

0
2918

Kannada News | kannada Useful Tips

ಸಂತಾನಕ್ಕೆ ಜಾತಕದಲ್ಲಿ ಲಗ್ನದಿಂದ ಅಥವಾ ಚಂದ್ರನಿರುವ ಸ್ಥಾನದಿಂದ ಪಂಚಮ ಭಾವವನ್ನು ಅಂದರೆ ಐದನೇ ಮನೆಯನ್ನು ನೋಡಬೇಕು, ಮೊದಲು ಜಾತಕದಲ್ಲಿ ಗುರುವಿನ ಸ್ಥಾನವನ್ನು ನೋಡಿ ಸಂತಾನದ ಯೋಗವನ್ನು ತಿಳಿಕೊಳ್ಳಬೇಕು, ಗುರು ಗ್ರಹವೇ ಸಂತಾನ ಫಲಕ್ಕೆ ಕಾರಕನಾಗುವನು.

ಪಂಚಮ ಸ್ಥಾನದಲ್ಲಿ ಶುಭ ಅಶುಭ ಗ್ರಹಗಳ ಸ್ಥಾನ, ದೃಷ್ಟಿ, ಮತ್ತು ಪೂರ್ವ ಜನ್ಮದ ಪಾಪ ಪುಣ್ಯ ಫಲಗಳನ್ನು ಪರಿಶೀಲಿಸಿ ಜಾತುಕರಿಗೆ ಸಂತಾನ ಫಲವಿದೆಯೋ ಇಲ್ಲವೋ ಮತ್ತು ಒಳ್ಳೆಯ ಸಂತಾನವಾಗುತ್ತದೆಯೋ ಎಂದು ತಿಳಿದುಕೊಳ್ಳ ಬಹುದು.

ಈ ಕೆಳಗೆ ಜಾತಕದಲ್ಲಿ ಸಂತಾನ ಯೋಗದ ಬಗ್ಗೆ ಕೆಲವು ಅಂಶಗಳನ್ನು ತಿಳಿದುಕೊಳ್ಳೋನ.

1. ಸಂತಾನಕ್ಕೆ ಮುಖ್ಯವಾಗಿ ಪಂಚಮ ಸ್ಥಾನ ಶುದ್ದಿಯಾಗಿರ ಬೇಕು.
2. ಪಂಚಮದಲ್ಲಿ ಶುಭ ಗ್ರಹಗಳಾದ ಗುರು, ಬುಧ, ಶುಕ್ರ, ಪೂರ್ಣಚಂದ್ರರು ಇದ್ದರೆ ಒಳ್ಳೆಯ ಫಲ.
3. ಪಂಚಮ ಸ್ಥಾನಕ್ಕೆ ಗುರುವಿನ ದೃಷ್ಠಿ ಇರಬೇಕು.
4. ಶುಕ್ರನು ಕೂಡ ಪಂಚಮಕ್ಕೆ ದೃಷ್ಠಿ ಇದ್ದರೆ ಒಳ್ಳೆಯದು.
5. ಪಂಚಮಾಧಿಪತಿಯು ಶುಭನಾಗಿರ ಬೇಕು.
6. ಪಂಚಮಾಧಿಪತಿಗೆ ಕೆಟ್ಟ ಗ್ರಹಗಳ ದೃಷ್ಠಿ ಇರಬಾರದು ಮತ್ತು ಶತ್ರುಗ್ರಹಗಳ ಮನೆಯಲ್ಲಿ ಇರಬಾರದು.
7. ಪಂಚಮಾಧಿಪತಿಯು ಕೇಂದ್ರ, ತ್ರಿಕೋಣದಲ್ಲಿದ್ದರೆ ಒಳ್ಳೆಯ ಸಂತಾನ.
8. ಗುರು ಗ್ರಹವು ಸ್ವಕ್ಷೇತ್ರ, ಉಚ್ಚಕ್ಷೇತ್ರ ದಲ್ಲಿ ಇದ್ದರೆ ಶೀರ್ಘ ಫಲ.
9. ಲಗ್ನದಲ್ಲಿ ಗುರು ಶುಭನಾಗಿದ್ದರೆ ಒಳ್ಳೆಯ ಸಂತಾನ.
10. ಪಂಚಮಾಧಿಪತಿ ಲಗ್ನಧಿಪತಿ ಕೂಡಿದರೆ ಶುಭ ಫಲ.
11. ನವಮಾಧಿಪತಿ ಮತ್ತು ಪಂಚಮಾಧಿಪತಿ ಜೊತೆ ಇದ್ದರೆ. ಮಗುವು ಭಾಗ್ಯೋದಯವಾಗುತ್ತದೆ.
12. ಪಂಚಮಕ್ಕೆ ಶುಕ್ರನ ಪ್ರಭಾವವಿದ್ದರೆ ಹೆಚ್ಚು ಹೆಣ್ಣು ಸಂತಾನ .
13. ಪಂಚಮದಲ್ಲಿ ಜಲರಾಶಿಯಾಗಿದ್ದು ಚಂದ್ರ, ಶುಕ್ರ, ಗುರು ಇದ್ದರೆ ಅವಳಿ ಸಂತಾನ.
14. ರವಿ ಮತ್ತು ಗುರು ಗ್ರಹಗಳು ಪಂಚಮದಲ್ಲಿ ಶುಭರಾಗಿದ್ದರೆ ಗಂಡು ಸಂತಾನ ಹೆಚ್ಚು.
15. ಗೋಚಾರದಲ್ಲಿ ನಿಮ್ಮ ರಾಶಿಯಿಂದ ಪಂಚಮ ಸ್ಥಾನಕ್ಕೆ ಶುಭ ಹಾಗು ಪುತ್ರ ಕಾರಕನಾದ ಗುರು ದೃಷ್ಠಿ ಬಿದ್ದರೆ ಸಂತಾನ ಲಾಭ ಮತ್ತು ಒಳ್ಳೆಯ ಸಂತಾನವಾಗುತ್ತದೆ.