ಬಿಸಿಬೇಳೆಬಾತ್ ಮಾಡುವ ವಿಧಾನ…!!

0
5280

ಬೇಕಾಗುವ ಪದಾರ್ಥಗಳು:

 • ಅರ್ಧ ಕೆಜಿಯಷ್ಟು ಅಕ್ಕಿ,
 • ಅರ್ಧ ಕೆಜಿ ತೊಗರಿ ಬೇಳೆ,
 • ೧೦೦ ಗ್ರಾಂನಷ್ಟು ತುಪ್ಪ,
 • ಎಂಟು ಹತ್ತು ಒಣಮೆಣಸಿನಕಾಯಿ,
 • ಒಂದು ಪುಟ್ಟ ಚಮಚದಷ್ಟು ಇಂಗು,
 • ಚೂರು ಹುಣಸೆ ಹಣ್ಣು,
 • ಒಂದರ್ಧ ಗಿಟುಕು ಕೊಬ್ಬರಿತುರಿ,
 • ಸ್ವಲ್ಪ ತೆಂಗಿನತುರಿ,
 • ಅರಿಶಿನಪುಡಿ,
 • ಎರಡು ಮೂರು ಚೂರು ದಾಲ್ಚಿನ್ನಿ ಚಕ್ಕೆ,
 • ಒಂದೊಂದು ಹಿಡಿ ಕಡಲೆಬೇಳೆ, ಉದ್ದಿನಬೇಳೆ,
 • ಒಂದು ಚಮಚ ಸಾಸಿವೆ,
 • ಕರಿಬೇವು,
 • ರುಚಿಗೆ ತಕ್ಕಷ್ಟು ಉಪ್ಪು.

  ಬಿಸಿಬೇಳೆಬಾತ್ ಮಸಾಲೆ ತಯಾರಿಸುವ ವಿಧಾನ

ಒಣಮೆಣಸಿನಕಾಯಿ, ಕಡಲೆಬೇಳೆ, ಉದ್ದಿನಬೇಳೆ, ದಾಲ್ಚಿನ್ನಿ ಚಕ್ಕೆ, ಕೊತ್ತಂಬರಿಬೀಜ ಹುರಿದು ಪುಡಿ ಮಾಡಿ ತಯಾರಿಸಿದ ಹುಳಿಪುಡಿಗೆ ಕೊಬ್ಬರಿತುರಿ, ಹಾಗೂ ತೆಂಗಿನತುರಿ ಮತ್ತು ಕಿವುಚಿದ ಹುಣಸೆಹಣ್ಣು ನೀರು ಸೇರಿಸಿ ಮಿಕ್ಸರ್‌ನಲ್ಲಿ ರುಬ್ಬಿದರೆ, ಮಸಾಲೆ ತಯಾರಾಗುತ್ತದೆ.

ಮಾಡುವ ವಿಧಾನ

ಒಂದು ಪ್ಯಾನ್‌ಗಳಲ್ಲಿ ಶುದ್ಧವಾಗಿ ತೊಳೆದ ತೊಗರಿಬೇಳೆ, ಹೆಚ್ಚಿದ ತರಕಾರಿ, ಉಪ್ಪು ಹಾಕಿಡಿ, ಮತ್ತೊಂದು ಪ್ಯಾನ್‌ನಲ್ಲಿ ಅನ್ನ ಮಾಡಲು ಅಕ್ಕಿ ಹಾಕಿ ಕುಕ್ಕರ್‌ನಲ್ಲಿ ಹಾಕಿ ಒಲೆಯ ಮೇಲಿಡಿ. ಅದು ಬೆಂದ ಬಳಿಕ, ರುಬ್ಬಿದ ಮಸಾಲೆಯನ್ನು ಬೆಂದ ಬೆಳೆ-ತರಕಾರಿ ಜೊತೆ ಹಾಕಿ ಚೆನ್ನಾಗಿ ಕುದಿಸಿ. ಅದಕ್ಕೆ ಅನ್ನ ಹಾಕಿ ಕಲೆಸಿ, ಮುರಿದ ಕೆಂಪು ಮೆಣಸಿನಕಾಯಿ, ಕರಿಬೇವು, ಇಂಗು -ಸಾಸಿವೆ ಒಗ್ಗರಣೆ ಹಾಕಿದರೆ, ರುಚಿ ರುಚಿಯಾದ ಬಿಸಿಬೇಳೆ ಬಾತ್ ಸಿದ್ಧ.

ಬಿಸಿಬೇಳೆ ಬಾತ್ ಜೊತೆಗೆ ಕರಿದ ಖಾರಾ ಬೂಂದಿಕಾಳು ಅಥವಾ ಚಿಪ್ಸ್ ಇದ್ದರೆ ಅದರ ರುಚಿಯೇ ಬೇರೆ.