ರಕ್ತ ಶುದ್ಧಿ, ಕರುಳಿನ ಹುಣ್ಣು, ಮೂಲವ್ಯಾಧಿ ಹಾಗೂ ಕೆಮ್ಮು ನಿವಾರಣೆಗೆ ದಿವ್ಯಔಷಧಿ ಈ ಹಾಗಲಕಾಯಿ ಗೊಜ್ಜು!

0
2429

Kannada News | Recipe tips in Kannada

ಹಾಗಲಕಾಯಿಯೆಂದರೆ ಅದು ಕಹಿ ಎಂದು ಮೂಗು ಮುರಿಯುವವರೆ ಹೆಚ್ಚು. ಆದರೆ ಮಧುಮೇಹದಿಂದ ನರಳುತ್ತಿರುವ ರೋಗಿಗಳು ಹಾಗಲಕಾಯಿಯನ್ನು ಹಸಿಯಾಗಿ ತಿಂದರೆ ರೋಗ ಉಲ್ಬಣಿಸದೆ ಬಹುಪಾಲು ಗುಣವಾಗುವುದು. ಹಾಗಲಕಾಯಿಯ ಗೊಜ್ಜು ಮಾಡಿಕೊಂಡು ಕ್ರಮವಾಗಿ ಸೇವಿಸುತ್ತಿದ್ದರೆ ರಕ್ತ ಶುದ್ಧಿಯಾಗುವುದು. ಕರುಳಿನ ಹುಣ್ಣು, ಮೂಲವ್ಯಾಧಿ ಹಾಗೂ ಕೆಮ್ಮು ನಿವಾರಣೆಯಾಗುವುದು. ಮತ್ತು ಹಾಗಕಾಯಿ ಗೊಜ್ಜು ಕಹಿ ಮಾಡದೆ ಸುಲಭವಾಗಿ ರುಚಿಯಾಗಿ ಅಡುಗೆ ಮಾಡಬಹುದು.

ಹಾಗಾದರೆ ಬನ್ನಿ ಹಾಗಲಕಾಯಿ ಗೊಜ್ಜು ಮಾಡುವ ವಿಧಾನವನ್ನು ತಿಳಿಯೋಣ….

ಬೇಕಾಗುವ ಸಾಮಗ್ರಿಗಳು

 • ಹಾಗಲಕಾಯಿ – 3
 • ಉದ್ದಿನ ಬೇಳೆ – 1 ಚಮಚ
 • ಮೆಂತ್ಯೆ – 1/4 ಚಮಚ
 • ಎಳ್ಳು – 2 ಚಮಚ
 • ಒಣ ಕೊಬ್ಬರಿ – 1 ಬಟ್ಟಲು
 • ಒಣಗಿನ ಮೆಣಸಿನಕಾಯಿ
 • ಹುಣಸೆ ಹಣ್ಣಿನ ರಸ 1 ಬಟ್ಟಲು
 • ಸ್ವಲ್ಪ ಬೆಲ್ಲ
 • ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

 • ಮೊದಲು ಉದ್ದಿನಬೇಳೆ, ಮೆಂತ್ಯೆ, ಎಳ್ಳು, ಒಣಕೊಬ್ಬರಿ, ಒಣಗಿದ ಮೆಣಸಿನಕಾಯಿ ಎಲ್ಲವನ್ನು ಬೇರೆಬೇರೆಯಾಗಿ ಹುರಿದುಕೊಳ್ಳಿ.
 • ಈಗ ಹುರಿದ ಪದಾರ್ಥಗಳನ್ನು ಒಂದು ಮಿಕ್ಸಿ ಜಾರ್ ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು.
 • ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು, ಒರೆಸಿ, ಅದರ ಬೀಜ ತೆಗೆದು ಸಣ್ಣ ಹೋಳುಗಳಾಗಿ ಹೆಚ್ಚಿಕೊಂಡು ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಹಾಕಿ ಕರಿದುಕೊಳ್ಳಬೇಕು.
 • ನಂತರ ಕರಿದ ಹಾಗಲಕಾಯಿ, ಹುಣಸೆರಸ, ಮಿಕ್ಸಿ ಮಾಡಿಕೊಂಡ ಮಿಶ್ರಣ, ಉಪ್ಪು, ಚಿಟಿಕೆ ಅರಿಶಿನ, ಇಂಗು ಎಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು.
 • 1 ಚಮಚ ಎಣ್ಣೆ ಕಾಯಿಸಿ, ಸಾಸಿಸವೆ ಹಾಕಿ ಒಗ್ಗರಣೆ ಮಾಡಿದರೆ ಹಾಗಲಕಾಯಿ ಗೊಜ್ಜು ರೆಡಿ..

ಸೂಚನೆ:
ಹಾಗಲಕಾಯಿ ಬಳಸಿ ಅಡುಗೆ ಮಾಡುವ ಮುನ್ನ ಅದಕ್ಕೆ ಅರಿಶಿಣ, ಉಪ್ಪು ಸವರಿ ಸ್ವಲ್ಪ ಸಮಯದ ನಂತರ ಬಳಸುವುದರಿಂದ ಅದರ ಕಹಿ ರುಚಿಯನ್ನು ಕಡಿಮೆ ಮಾಡಬಹುದು. ಅಥವಾ ಹಾಗಲಕಾಯಿಯನ್ನು ಸಣ್ಣದಾಗಿ ಕತ್ತರಿಸಿ ಬೆಲ್ಲದೊಂದಿಗೆ ಮಿಶ್ರಮಾಡಿ ಎಣ್ಣೆಯಲ್ಲಿ ಹುರಿದು ಅಡುಗೆಗೆ ಬಳಸಬಹುದು.

Also Read: ಹೃದ್ರೋಗ ತಡೆಗಟ್ಟಬೇಕು ಅಂದ್ಕೊಳ್ಳೋವ್ರು ಈ ಆರ್ಟಿಕಲ್ ಓದ್ಲೇ ಬೇಕು…