ಉದ್ದೇಶ ಒಳ್ಳೆಯದು, ಜಾರಿ ಮಾಡಿದ ರೀತಿ ಕೆಟ್ಟದು: ಬಿಜೆಪಿ ಮಾಜಿ ಕೇಂದ್ರ ಸಚಿವ ಅರುಣ್ ಶೌರಿ

0
641

೫೦೦ ಮತ್ತು ೧೦೦೦ ರೂ. ಮುಖಬೆಲೆಯ ನೋಟು ರದ್ದುಪಡಿಸಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೊಬ್ಬ ಬಿಜೆಪಿ ನಾಯಕ ಅರುಣ್ ಶೌರಿ ತೀವ್ರವಾಗಿ ಖಂಡಿಸಿದ್ದಾರೆ.

ಕಪ್ಪುಹಣ ಮತ್ತು ಕಳ್ಳನೋಟು ತಡೆಯಲು ನೋಟು ರದ್ದುಪಡಿಸಿದ ಉದ್ದೇಶ ಒಳ್ಳೆಯದು. ಆದರೆ ಅದನ್ನು ಜಾರಿ ತಂದ ರೀತಿ ಕೆಟ್ಟದಾಗಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಪತ್ರಕರ್ತರೂ ಆದ ಶೌರಿ ಅಭಿಪ್ರಾಯಪಟ್ಟರು. ಶೇ.೮೫ ಕಪ್ಪುಹಣ ವಿದೇಶದಲ್ಲಿದೆ. ನೋಟು ರದ್ದುಪಡಿಸಿದ ಸರಕಾರ, ದೇಶದಲ್ಲಿ ೬೫ ಹಳ್ಳಿಗಳಿಗೆ ಏಕಕಾಲದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವೇ? ಸಣ್ಣಪುಟ್ಟ ವ್ಯಾಪಾರಿಗಳು, ಪ್ರಯಾಣಿಕರು, ಸಾರಿಗೆ ಸಂಸ್ಥೆಗಳು, ರೈತರು ಇವರ ಬಗ್ಗೆ ಸ್ವಲ್ಪವೂ ಆಲೋಚಿಸದೇ ಏಕಾಏಕಿ ನಿರ್ಧಾರ ಕೈಗೊಂಡಿರುವುದು ಅಕ್ಷಮ್ಯ ಅಪರಾಧ ಎಂದು ಅವರು ಕಿಡಿಕಾರಿದರು.

ಮೋದಿ ಅವರ ಈ ನಿರ್ಧಾರ ಹೇಗಿದೆ ಎಂಬ ಪ್ರಶ್ನೆಗೆ ಬಾವಿಗೆ ಹಾರಿ ಸತ್ತರೂ ಅಪರಾಧವೇ, ಕೊಲೆ ಮಾಡಿದರೂ ಅಪರಾಧವೇ. ಅದೇ ರೀತಿ ಇದು ಕೂಡ. ಸರ್ಜಿಕಲ್ ಸ್ಟ್ರೈಕ್ ಎಂದು ಹೇಳಿಕೊಳ್ಳಲಾಗುತ್ತಿದೆ. ಅದು ಕೆಲವೇ ನಿಮಿಷಗಳ ಕಾರ್ಯಾಚರಣೆ. ಆದರೆ ಇದು ವಾರ ಆದರೂ ಮುಗಿಯುತ್ತಿಲ್ಲ. ತಿಂಗಳು ಆದರೂ ಅಗಬಹುದು. ಜನ ಕೆಲಸ ಬಿಟ್ಟು ಬೀದಿಯಲ್ಲಿ ನಿಲ್ಲುವಂತಾಗಿದೆ. ಜನರ ಸಹನೆಗೂ ಮಿತಿ ಇಲ್ಲವೇ ಎಂದು ಅರುಣ್ ಶೌರಿ ಪ್ರಶ್ನಿಸಿದರು. ಕಳೆದ ೩೫ ವರ್ಷಗಳಿಂದ ನಗದು ರಹಿತ ವ್ಯವಹಾರದ ಕುರಿತು ಬರೆಯುತ್ತಾ ಬಂದಿದ್ದೇನೆ. ಈಗ ಅದು ಅನುಷ್ಟಾನದ ಮಾತು ನಡೆಯಿತ್ತಿದೆ. ನಾನು ಇದರ ವಿರೋಧಿಯಲ್ಲ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು.