ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ ಬಿಜೆಪಿ ನಾಯಕರು; ಅರ್ಧದಲ್ಲೇ ಭಾಷಣ ನಿಲ್ಲಿಸಿ ಸದನದಿಂದ ಹೊರನಡೆದ ರಾಜ್ಯಪಾಲ ವಾಜುಬಾಯಿ ವಾಲ..

0
313

ಇಂದು ವಿಧಾನಮಂಡಲದ ವರ್ಷದ ಮೊದಲ ಅಧಿವೇಶನದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಆರಂಭಿಸುತ್ತಿದ್ದಂತೆ ಪ್ರತಿಪಕ್ಷದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಅಪರೂಪದ ಪ್ರಸಂಗ ನಡೆದಿದೆ. ಈ ವೇಳೆ ಶಾಸಕರ ಧರಣಿ ನಡೆಸುವ ಮೂಲಕ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದರು. ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ” ಕೂಗಿದರು. ಇದರಿಂದಾಗಿ ಸರ್ಕಾರದ ಸಾಧನೆ ಕುರಿತು 22 ಪುಟಗಳ ಭಾಷಣ ಓದಲು ಸಜ್ಜಾಗಿದ್ದ ರಾಜ್ಯಪಾಲರು ಬೇಸರಗೊಂಡ ಸದನದಿಂದ ಹೊರನಡೆದರು.

ಹೌದು ಕೈ-ದಳ ಮತ್ತು ಕಮಲದ ಜಗಳ ತಾರಕಕ್ಕೇರಿ ರಾಜ್ಯದಲ್ಲಿ ಹಲವು ಗೊಂದಲಗಳನ್ನು ಸೃಷ್ಟಿಸಿದೆ. ಇದು ಅಲ್ಲಿಗೆ ನಿಲ್ಲದೆ ರಾಜ್ಯಪಾಲರ ಗೌರವಕ್ಕೆ ದಕ್ಕೆ ತಂದಿದೆ. ಇಂದು ವರ್ಷದ ಮೊದಲ ಅಧಿವೇಶನದಲ್ಲಿ ಮೊದಲ ದಿನ ಜಂಟಿ ಸದನವನ್ನು ಏರ್ಪಡಿಸಿದೆ ಈ ವೇಳೆ ರಾಷ್ಟ್ರ ಗೀತೆ ಮುಗಿಯುತ್ತಿದ್ದಂತೆ ರಾಜ್ಯಪಾಲರು ಭಾಷಣ ಓದಲು ಆರಂಭಿಸುತ್ತಿದ್ದಂತೆ ಬಿಜೆಪಿಯ ವಿಧಾನಸಭೆ ಮತ್ತು ವಿಧಾನಪರಿಷತ್‍ನ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಕೋಲಾಹಲದ ನಡುವೆಯೇ ರಾಜ್ಯಪಾಲರು ಭಾಷಣ ಮುಂದುವರೆಸಿದರು. ಆದರೆ, ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಶಾಸಕರ ಗಲಾಟೆ ಹೆಚ್ಚಾದ ಹಿನ್ನಲೆ ಗೊಂದಲಕ್ಕೆ ಒಳಗಾದ ರಾಜ್ಯಪಾಲರು ಭಾಷಣ ಮೊಟಕುಗೊಳಿಸಿ ಸದನದಿಂದ ಹೊರನಡೆದರು. ಸದನದಲ್ಲಿ ತಮ್ಮ ಜಂಟಿ ಅಧಿವೇಶನದ ಭಾಷಣಕ್ಕೆ ಏಕಾಏಕಿ ಅಡ್ಡಿಪಡಿಸಿದ ಬಿಜೆಪಿ ನಾಯಕರ ನಡೆಗೆ ರಾಜ್ಯಪಾಲರು ಬೇಸರ ವ್ಯಕ್ತಪಡಿಸಿದರು. ಬಿಜೆಪಿ ನಾಯಕರ ಗದ್ದಲದಿಂದ ಭಾಷಣ ಮೊಟುಕುಗೊಳಿಸಿದ ಅವರನ್ನು ಸ್ಪೀಕರ್​, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಬಿಳ್ಕೋಡಲು ಬಂದರು ಈ ವೇಳೆ ಅವರ ಮುಂದೆ ಬೇಸರ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಸದನದಲ್ಲಿ ಬಿಜೆಪಿ ಈ ನಡೆಗೆ ಕಾರಣ?

ಇದೊಂದು ರೈತ ವಿರೋಧಿ ಸರ್ಕಾರ. ಬಹುಮತವಿಲ್ಲದೆ ಬಜೆಟ್ ಮಂಡಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಈ ಹಿಂದೆ ಬಿಜೆಪಿ ಆಡಳಿತವಿದ್ದ ಸಂದರ್ಭದಲ್ಲಿ ಅಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಕೂಡ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ದ ವೇಳೆ ಅಡ್ಡಿಪಡಿಸಿದ್ದರು. ಈಗ ಬಿಜೆಪಿಯವರು ರಾಜ್ಯಪಾಲರು ಸದನದಿಂದ ಹೊರನಡೆಯುವಂತೆ ವರ್ತಿಸಿದ್ದು ಪ್ರತಿಪಕ್ಷದಲ್ಲಿ ಬೇಸರ ತಂದಿದೆ.

ಬಿಜೆಪಿ ಪ್ರತಿಭಟನೆಗೆ ಪ್ರತಿಪಕ್ಷ ಗರಂ:

ಬಜೆಟ್​ ಅಧಿವೇಶನಕ್ಕೆ ಬಿಜೆಪಿ ಅಡ್ಡಿ ಮಾಡಲಿದೆ ಎಂಬ ಆಂತಕ ಮೈತ್ರಿ ನಾಯಕರಲ್ಲಿ ಇತ್ತು. ಆದರೆ, ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಮಾಡುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ಈ ರೀತಿ ಕ್ರಮಕ್ಕೆ ಬಿಜೆಪಿ ಮುಂದಾಗುವ ಮೂಲಕ ಮೈತ್ರಿ ಶಾಸಕರಲ್ಲಿ ಗೊಂದಲ ಉಂಟು ಮಾಡಿದೆ, ಆಪರೇಷನ್​ ಕಮಲದ ಆತಂಕದ ನಡುವೆಯೇ ತಮ್ಮ ಶಾಸಕರಿಗೆ ವಿಪ್​ ಜಾರಿ ಮಾಡಿತ್ತು. ಕಳೆದೆರಡು ದಿನಗಳ ಹಿಂದೆ ಮಾತನಾಡಿದ ಕೋಟಾ ಶ್ರೀನಿವಾಸ್​ ಪೂಜಾರಿ ನಾವು ಯಾವುದೇ ಕಾರಣಕ್ಕೂ ಅಧಿವೇಶನಕ್ಕೆ ಅಡ್ಡಿಮಾಡುವುದಿಲ್ಲ ಎಂದಿದ್ದರು.

ಈ ಹಿನ್ನೆಲೆಯಲ್ಲಿ ಅಧಿವೇಶನಕ್ಕೂ ಯಾವುದೇ ಅಡ್ಡಿ ಮಾಡುವುದಿಲ್ಲ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತಿಗೆ ತಪ್ಪಿದ್ದಾರೆ. ಇಂದು ಆರಂಭವಾದ ಅಧಿವೇಶನದಲ್ಲಿ ಗದ್ದಲ ಮಾಡುವ ಮೂಲಕ ವಚನ ಭ್ರಷ್ಟರಾಗಿದ್ದಾರೆ. ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ್ದ ಬಿಜೆಪಿ ನಾಯಕರ ನಡೆ ರಾಜ್ಯದ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿದೆ. ಇದು ನಿಜಕ್ಕೂ ದುರ್ದೈವದ ಸಂಗತಿ ಎಂದು ಜೆಡಿಎಸ್​ ನಾಯಕ ಬಸವರಾಜ್​ ಹೊರಟ್ಟಿ ಬಿಜೆಪಿ ನಾಯಕರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದರು.

Also read: ಎಸ್ಎಸ್ಎಲ್ ಸಿ ಪಾಸಾದವರಿಗೆ 1763 ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ..