ಬಿ.ಜೆ.ಪಿ. ಸರ್ಕಾರಕ್ಕೆ ಕನ್ನಡಿಗರ ಹಿತ ಬೇಕಾಗಿಲ್ಲ ಮಹದಾಯಿ, ಕಾವೇರಿ, ಕೃಷ್ಣ ನದಿ ವಿಚಾರಗಳನ್ನು ಮರೆತು ತಮ್ಮವರ ಹಿತವನ್ನು ಮಾತ್ರ ಕಾಯುತ್ತಿದೆ: ಡಿ.ಕೆ.ಶಿವಕುಮಾರ್!!

0
154

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಒಂದೇ ದಿನದಲ್ಲಿ ಮಹದಾಯಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಬಿಜೆಪಿ ನಾಯಕರು ಚುನಾವಣೆ ಸಂದರ್ಭದಲ್ಲಿ ವಿಶ್ವಾಸ ನೀಡಿದ್ದರು. ಆದರೆ, ಈವರೆಗೆ ಈ ಸಮಸ್ಯೆಯನ್ನು ಬಗೆಹರಿಸುವ ಕೆಲಸಕ್ಕೆ ಕೈ ಹಾಕಿಲ್ಲ. ಬದಲಾಗಿ ಸಿಎಎ ಪರ ಭಾಷಣ ಮಾಡಲು ಅಮಿತ್​ ಶಾ ರಾಜ್ಯಕ್ಕೆ ಆಗಮಿಸಿದ್ದಾರೆ. ಬಿಜೆಪಿಯವ್ರಿಗೆ ಮಹದಾಯಿ, ಕಾವೇರಿ, ಕೃಷ್ಣ ನದಿ ವಿಚಾರಗಳು ಬೇಕಾಗಿಲ್ಲ. ಈಗ ಸಿಎಎ ಪರ ಭಾಷಣ ಮಾಡಲು ಬಂದಿದ್ದಾರೆ” ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.

ಹೌದು ಪೌರತ್ವ ತಿದ್ದುಪಡಿ ಕಾಯ್ದೆ ಪರ ಭಾಷಣ ಮಾಡಲು ಕರ್ನಾಟಕಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ನಡೆಯನ್ನು ಕಟುವಾಗಿ ಟೀಕಿಸಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್​, “ಬಿಜೆಪಿಯವ್ರಿಗೆ ಮಹದಾಯಿ, ಕಾವೇರಿ, ಕೃಷ್ಣ ನದಿ ವಿಚಾರಗಳು ಬೇಕಾಗಿಲ್ಲ. ಈಗ ಸಿಎಎ ಪರ ಭಾಷಣ ಮಾಡಲು ಬಂದಿದ್ದಾರೆ” ಕೇವಲ ಅವರ ಪಕ್ಷದ ಶಾಸಕರ ಕ್ಷೇತ್ರದ ಅಭಿವೃದ್ಧಿ ಮಾತ್ರ ಅವರಿಗೆ ಬೇಕು. ಬೇರೆ ಪಕ್ಷದ ಶಾಸಕರ ಕ್ಷೇತ್ರದ ಅಭಿವೃದ್ಧಿ ಅವರಿಗೆ ಬೇಕಾಗಿಲ್ಲ ಎಂದರು. ವಿರೋಧ ಪಕ್ಷಗಳ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕೆಲಸ ತಡೆಹಿಡಿಯಲು ಸೂಚನೆ ಹೋಗಿದೆ. ಮೈತ್ರಿ ಸರ್ಕಾರ ವೇಳೆ ನನ್ನ ಕ್ಷೇತ್ರಕ್ಕೆ ಸೇರಿದಂತೆ ಬೇರೆ ಕ್ಷೇತ್ರಕ್ಕೆ ಮಂಜೂರಾದ ಅಭಿವೃದ್ಧಿ ಕೆಲಸ ತಡೆಹಿಡಿಯಲು ಅಧಿಕಾರಿಗಳಿಗೆ ಸೂಚನೆ ಹೋಗಿದೆ ಎಂದು ಆರೋಪ ಮಾಡಿದರು.

ರಾಜ್ಯದ ಜನರ ಬಗ್ಗೆ ಬಿಜೆಪಿಗರಿಗೆ ಎಷ್ಟೊಂದು ಕಾಳಜಿ ಇದೆ ಎನ್ನುವುದನ್ನು ತೋರಿಸುತ್ತೆ. ಎಂದು ಡಿಕೆಶಿ ಹೇಳಿದ್ದಾರೆ. ಇದೆ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡಿದ ಅವರು. “ಕಾಂಗ್ರೆಸ್ ಸ್ಥಾನಮಾನದ ಬಗ್ಗೆ ನನ್ನ ಬಳಿ ಏನನ್ನೂ ಕೇಳಬೇಡಿ. ಯಾರ್ಯಾರು ಏನೇನು ಹೇಳಿಕೆ ಕೊಡ್ತಿದಾರೆ, ಮಾಧ್ಯಮದಲ್ಲಿ ಏನೇನು ಬರ್ತಿದೆ, ಇದೆಲ್ಲವನ್ನೂ ನಾನು ಗಮನಿಸುತ್ತಿದ್ದೇನೆ. ನಾನು ಯಾವ ಗುಂಪಿಗೂ ಸೇರೋದಿಲ್ಲ. ನಂದು ಕಾಂಗ್ರೆಸ್​ ಬಣ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಗ್ಗೆ ಮಾಧ್ಯಮದಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಯಾರ್ಯಾರು‌ ಇದರ ಬಗ್ಗೆ ಮಾತಾಡ್ತಿದ್ದಾರೋ ಅವರನ್ನೇ ಕೇಳಿ. ನನಗೆ ಈ ಕುರಿತು ಏನೂ ಗೊತ್ತಿಲ್ಲ” ಎಂದು ತಿಳಿಸಿದ್ದಾರೆ.

ನಾಲ್ವರು ಕಾರ್ಯಾಧ್ಯಕ್ಷ ಸ್ಥಾನದ ಬೇಡಿಕೆ;

ಕೆಪಿಸಿಸಿ ಅಧ್ಯಕ್ಷ ಸ್ಥಾನ ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ಪಾಲಿಗೆ ಬಹುತೇಕ ಖಚಿತವಾಗಿದ್ದು ಅಂತಿಮ ಘೋಷಣೆಯಷ್ಟೇ ಬಾಕಿ ಉಳಿಸಿದೆ. ಈ ನಡುವೆ ನಾಲ್ವರು ಕಾರ್ಯಾಧ್ಯಕ್ಷ ಸ್ಥಾನದ ಬೇಡಿಕೆಯನ್ನು ಸಿದ್ದರಾಮಯ್ಯ ಬಣ ಕಾಂಗ್ರೆಸ್ ಹೈಕಮಾಂಡ್‌ ಮುಂದಿಟ್ಟಿರುವುದು ಡಿಕೆಶಿಯನ್ನು ಅಧ್ಯಕ್ಷರನ್ನಾಗಿ ಅಧಿಕೃತ ಘೋಷಣೆ ಮಾಡಲು ಸದ್ಯ ತೊಡಕಾಗಿ ಪರಿಣಮಿಸಿದೆ. ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಬೇಕು ಎಂಬುವುದು ಸಿದ್ದರಾಮಯ್ಯ ಬಣದ ಬೇಡಿಕೆ. ಮುಸ್ಲಿಂ, ಎಸ್‌ಸಿ, ಎಸ್‌ಟಿ ಹಾಗೂ ಲಿಂಗಾಯತ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಕಾರ್ಯಾಧ್ಯಕ್ಷ ಸ್ಥಾನ ನೇಮಕ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.

ಈ ನಾಲ್ವರ ಪೈಕಿ, ಯು.ಟಿ ಖಾದರ್‌, ಸತೀಶ್ ಜಾರಕಿಹೊಳಿ, ಆರ್‌. ಧ್ರವನಾರಾಯಣ ಹಾಗೂ ಈಶ್ವರ್ ಖಂಡ್ರೆಯರನ್ನು ಕಾರ್ಯಾಧ್ಯಕ್ಷರನ್ನಾಗಿರಬೇಕು ಎಂಬುವುದು ಬೇಡಿಕೆ. ನಾಲ್ವರು ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರಾಗಿದ್ದು ಈ ಮೂಲಕ ಡಿಕೆಶಿಗೆ ಅಧ್ಯಕ್ಷರಾದರೂ ಕಾರ್ಯಾಧ್ಯಕ್ಷರ ಮೂಲಕ ಪಕ್ಷವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂಬುವುದು ಸಿದ್ದರಾಮಯ್ಯ ತಂತ್ರಗಾರಿಕೆ. ಸಿದ್ದರಾಮಯ್ಯ ಬೇಡಿಕೆಗೆ ಹೈ ಕಮಾಂಡ್‌ ಒಪ್ಪಿಗೆ ಸೂಚಿಸಿದರೆ, ಅಧಿಕಾರ ಹಂಚಿಕೆ ಮಾಡಿದಂತಾಗುತ್ತದೆ ಅಲ್ಲದೆ ಮತ್ತಷ್ಟು ಗೊಂದಲ, ಗುಂಪುಗಾರಿಕೆಗೆ ಕಾರಣವಾಗುತ್ತದೆ ಎಂಬುವುದು ಡಿ.ಕೆ.ಶಿವಕುಮಾರ್ ಅಭಿಪ್ರಾಯವಾಗಿದೆ.

Also read: ಬಿಗ್ ಬ್ರೇಕಿಂಗ್; ಮಂಗಳೂರು ಏರ್​ಪೋರ್ಟ್​ನಲ್ಲಿ ಪತ್ತೆಯಾಯ್ತು ಸಜೀವ ಬಾಂಬ್; ಇಂಡಿಗೋ ವಿಮಾನದಲ್ಲೂ ಬಾಂಬ್ ಇದೇ ಎನ್ನುವ ಬೆದರಿಕೆ ಕರೆ.!