ಮತೊಮ್ಮೆ ವಿಫಲವಾದ ಆಪರೇಷನ್ ಕಮಲ; ಹೆಬ್ಬಾಳ್ಕರ್-ಗೆ ಸಚಿವ ಸ್ಥಾನ ಹಾಗು 30 ಕೋಟಿ ಆಮಿಷ ಒಡ್ಡಿತ್ತಂತೆ ರಾಜ್ಯ ಬಿ.ಜೆ.ಪಿ.!!

0
421

ಹೆಬ್ಬಾಳ್ಕರ್ ಬೆನ್ನು ಬಿಡದ ಆಪರೇಷನ್ ಭೂತ: ಸಚಿವ ಸ್ಥಾನ ಹಾಗೂ 30ಕೋಟಿ ರೂ. ಆಮಿಷ ಹೆಬ್ಬಾಳ್ಕರ್, ಗಂಭೀರ ಆರೋಪ!!

ನನಗೆ ಬಿಜೆಪಿಯವರು ತಮ್ಮ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಮನವೊಲಿಸಲು ಯತ್ನಿಸಿದ್ದರು. ಬಿಜೆಪಿಗೆ ಸೇರ್ಪಡೆಯಾದರೆ ನನಗೆ ಸಚಿವ ಸ್ಥಾನ ಮತ್ತು 30 ಕೋಟಿ ರೂಪಾಯಿ ನೀಜುವುದಾಗಿಯೂ ಆಮಿಷ ಒಡ್ಡಲಾಗಿತ್ತು ಎಂದು ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್‌ಕರ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ. ಆದರೆ ಆಫ‌ರ್‌ ನೀಡಿದ ಬಿಜೆಪಿ ನಾಯಕರ ಹೆಸರು ಹೇಳಲು ನಿರಾಕರಿಸಿದ್ದಾರೆ. ಈ ಆಪರೇಷನ್‌ ಕಮಲ ನಿಸರ್ಗಕ್ಕೆ ವಿರುದ್ಧವಾದದ್ದು. ಈಗಾಗಲೇ ಹಲವು ಶಾಸಕರಿಗೆ ಆಫ‌ರ್‌ ನೀಡಲಾಗಿತ್ತು, ನನ್ನನ್ನು ಸಂಪರ್ಕಿಸಿದ್ದರು. ಈ ವಿಚಾರವನ್ನು ಪಕ್ಷದ ನಾಯಕರ ಗಮನಕ್ಕೆ ತಂದಿದ್ದೆ ಎಂದು ಹೇಳಿದರು.

ಜಾರಕಿಹೊಳಿ ಸಹೋದರರ ನಡುವಿನ ಭಿನ್ನಾಭಿಪ್ರಾಯದ ವಿಚಾರ ಒಂದು ಹಂತಕ್ಕೆ ತಣ್ಣಗಾಯಿತು ಎನ್ನುವ ಹೊತ್ತಿನಲ್ಲೇ ಸತೀಶ್‌ ಜಾರಕಿಹೊಳಿ ಆಪ್ತ ಸಹಾಯಕನ ಮೇಲೆ ಲಕ್ಷ್ಮೀ ಹೆಬ್ಬಾಳ್‌ಕರ್‌ ಬೆಂಬಲಿಗ ಇರಿತ ನಡೆಸಿದ್ದರು. ಇದೀಗ ಹೆಬ್ಬಾಳ್ಕರ್ ನೀಡಿರುವ ಹೇಳಿಕೆ ಆಪರೇಷನ್ ಕಮಲ ಫ್ಲಾಪ್ ಆದಂತಿದೆ.