ಮುಂದಿನ ಚುನಾವಣೆಯಲ್ಲಿ ಬಿ.ಜೆ.ಪಿ ಸೋಲೋ ಭಯ ಹುಟ್ಟಿಕೊಂಡಿದೆ, ಕ್ರಿಕೆಟಿಗರಾದ ಧೋನಿ, ಗಂಭೀರ್-ರನ್ನು ಕಣಕ್ಕೆ ಇಳಿಸುತ್ತಾರಂತೆ…

0
435

ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ಬಿಜೆಪಿ ಸಿದ್ದತೆ ವಿಭಿನ್ನಮಯವಾಗಿದ್ದು ಪಕ್ಕಾ ಗೆಲ್ಲುವ ವಿಶ್ವಾಸವಿರುವ ಅಭ್ಯರ್ಥಿಗಳನ್ನು ಪಕ್ಷದ ಬುಟ್ಟಿಗೆ ಹಾಕಿಕೊಳ್ಳುಲು ಬಲೆಬಿಸಿದೆ. ದೇಶದಲ್ಲಿ ಕ್ರಿಕೆಟ್ ಅಭಿಮಾನಿಗಳು ಹೆಚ್ಚಿದು ಆದಕಾರಣಕ್ಕೆ ಸದ್ಯ ಕ್ರಿಕೆಟ್-ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕ್ರಿಕೆಟ್‌ ದಿಗ್ಗಜರನ್ನು ಸೆಳೆದುಕೊಳ್ಳುಲು ಸಂಚು ನಡೆಸಿದೆ.

ಅಂತಹ ದೊಡ್ಡ ಹೆಸರು ಮಾಡಿದ ಪಕ್ಕಾ ಕಾತ್ರಿಯಿರುವ ಕ್ರಿಕೆಟಿಗರು ಅಂದ್ರೆ ಮಹೇಂದ್ರ ಶಿಂಗ್ ಧೋನಿ ಮತ್ತು ಗಂಭೀರ್‌ ಅವರಿಗೆ ಆಹ್ವಾನ ನೀಡಿ ಭಾರಿ ಉತ್ಸಾಹ ತೋರುತ್ತಿದ್ದು, ಪ್ರಸ್ತುತ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕರಾಗಿರುವ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಜಾರ್ಖಾಂಡ್‌ನಿಂದ ಸ್ಪರ್ಧಿಸುವಂತೆ. ದಿಲ್ಲಿ ಸಂಸದೆ ಮೀನಾಕ್ಷಿ ಲೇಖಿ ಅವರ ಬದಲಾಗಿ ಗಂಭೀರ್‌ ಅವರನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ. ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಗಂಭೀರ್‌ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಲೇಖಿ ಬದಲಾಗಿ ಗಂಭೀರ್‌ಗೆ ಟಿಕೆಟ್‌ ನೀಡಬೇಕು ಎಂದು ಸ್ಥಳೀಯ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಒಂದು ವೇಳೆ ಇಬ್ಬರು ಬಿಜೆಪಿ ಸೇರ್ಪಡೆಗೊಂಡರೆ ಜಾರ್ಖಾಂಡ್‌ನಿಂದ ಎಂಎಸ್‌ ಧೋನಿ ಮತ್ತು ದಿಲ್ಲಿಯಿಂದ ಗಂಭೀರ್‌ ಅಭ್ಯರ್ಥಿಗಳಾಗುವುದು ನಿಶ್ಚಿತ ಎನ್ನಲಾಗಿದೆ. ಧೋನಿ, ಗಂಭೀರ್ ಜತೆಗೆ ಮಾಜಿ “ಆಪ್ ಮುಖಂಡ ಕವಿ ಕುಮಾರ್ ವಿಶ್ವಾಸ್” ಕೂಡ ಬಿಜೆಪಿ ಸೇರ್ಪಡೆ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ನಾಯಕರೇ ಒಬ್ಬರು ಖಚಿತಪಡಿಸಿರುವ ಪ್ರಕಾರ ಧೋನಿ ಜಾರ್ಖಂಡ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಅಲ್ಲದೆ ಅವರು ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಸಹ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಧೋನಿಗೆ ಯಾಕೇ ಬಿಜೆಪಿ ಬಲೆ?

ಇಡಿ ಭಾರತವೇ ಧೋನಿಯನ್ನು ಮೆಚ್ಚುತ್ತಿದೆ ಇವರು ಬರಿ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಕೂಡ ಹೆಸರು ಮಾಡಿದು ಮತ್ತು ಭಾರತೀಯ ಕ್ರಿಕೆಟ್ ತಂಡದಲ್ಲಿ ನಾಯಕನಾಗಿ ಹಲವಾರು ಇತಿಹಾಸವನ್ನೇ ಬರೆದಿದ್ದಾರೆ, ಅಷ್ಟೇ ಅಲ್ಲದೆ ಚೆನ್ನೈ ಸೂಪರ್ ಕಿಂಗ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಮೂಲಕ ಅವರು ದಕ್ಷಿಣ ಭಾರತದಲ್ಲೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇದರಿಂದ ಬಿಜೆಪಿಯಿಂದ ಸ್ಪರ್ಧಿಸುವುದರಿಂದ ಬಿಜೆಪಿಗೆ ಬೇರು ಗಟ್ಟಿಯಾಗುತ್ತದೆ.

ಬಿಜೆಪಿ ಬಲೆ ಗಂಭೀರ್ ಗೆ ಯಾಕೆ?

ಗಂಭೀರ್‌ ಬರಿ ಕ್ರಿಕೆಟ್ ನಲ್ಲಿ ಮಾತ್ರವಲ್ಲದೆ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ಬಾಗಿಯಾಗಿದ್ದು. ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ ಅವರ ಸಾಧನೆಯ ಬಗ್ಗೆ ಬಿಜೆಪಿಗೆ ತೃಪ್ತಿ ಇಲ್ಲದ ಕಾರಣ, ಅವರ ಕ್ಷೇತ್ರದಲ್ಲಿ ಗಂಭೀರ್ ಅವರನ್ನು ಕಣಕ್ಕಿಳಿಸಿಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.

ಬಿಜೆಪಿ ಬಲೆ ಕುಮಾರ್ ವಿಶ್ವಾಸ್ ಗೆ ಯಾಕೆ?

ಉತ್ತಮ ಕವಿ, ವಾಗ್ಮಿಯೂ ಆಗಿರುವ ಕುಮಾರ್ ವಿಶ್ವಾಸ್ ಅವರು ಬಿಜೆಪಿಗೆ ಅತ್ಯುತ್ತಮ ಆಸ್ತಿಯಾಗಬಲ್ಲರು ಎಂಬುದು ಬಿಜೆಪಿಯ ಲೆಕ್ಕಾಚಾರ ಏಕೆಂದರೆ ಆಮ್ ಆದ್ಮಿ ಪಕ್ಷದ ನಾಯಕರಾಗಿದ್ದ ಕುಮಾರ್ ವಿಶ್ವಾಸ್, ಪಕ್ಷದ ನಾಯಕರ ಬಗ್ಗೆ ಅತೃಪ್ತಿ ಹೊಂದಿದು, ಎಎಪಿಯನ್ನು ತೊರೆದಿದ್ದಾರೆ. ಬಿಜೆಪಿ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಅವರಿಗೂ ಟಿಕೆಟ್ ನೀಡಲು ಬಿಜೆಪಿ ಚಿಂತಿಸುತ್ತಿದೆ.
ಒಟ್ಟಾರೆಯಾಗಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರದ ಗದಿಗೆ ಏರುವ ವಿಶ್ವಾಸದಲ್ಲಿರುವ ಬಿಜೆಪಿ ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸುತ್ತಿದೆ. ಅದಕ್ಕಾಗಿ ಕೆಲವು ಸೆಲೆಬ್ರಿಟಿ ಕ್ರಿಕೆಟ್ ಸ್ಟಾರ್ ಗಳನ್ನೂ ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಪ್ರಯತ್ನದಲ್ಲಿ ನಿರತವಾಗಿದೆ.