ಅಸಮಧಾನಗೊಂಡ ಹಳ್ಳಿ ಹಕ್ಕಿಗೆ ಬಿಎಸ್‌ವೈ ಆಫರ್; ಕಚೇರಿಯನ್ನು ಗುಡಿಸಲು ನಾನು ಸಿದ್ಧನಿದ್ದೇನೆಂದು ಹೇಳಿದ ಮತ್ತೊಬ್ಬ ಶಾಸಕರ ಯಾರು.??

0
145

ಉಪಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ಕೊಡುವುದು ಬಹುತೇಕ ಖಚಿತವಾದರೆ ಸೋತವರಿಗೆ ಯಾವುದೇ ಸ್ಥಾನವಿಲ್ಲ ಎನ್ನಲಾಗಿದೆ. ಇದಕ್ಕೆ ಭಾರೀ ವಿರೋದ್ಧ ವ್ಯಕ್ತವಾಗಿದ್ದು, ಎಚ್ ಎಚ್‌.ವಿಶ್ವನಾಥ್ ಬಿಜೆಪಿ ವಿರುದ್ಧ ಪುಸಕ್ತ ಬಿಡುಗಡೆ ಮಾಡುವಂತೆ ಬೆದರೀಕೆ ಹಾಕಿದ್ರು, ನಂತರ ಸಚಿವ ಸ್ಥಾನ ನೀಡದಿರಲು ಕಾನೂನು ಕಾರಣ ನೀಡುವುದು ಸರಿಯಲ್ಲ ಎಂದು ಸೋಮವಾರ ಬೆಂಗಳೂರಿನ ಡಾಲರ್ಸ್‌ ಕಾಲೊನಿಯಲ್ಲಿರುವ ಸಿಎಂ ನಿವಾಸಕ್ಕೆ ಆಗಮಿಸಿದ ಎಚ್‌. ವಿಶ್ವನಾಥ್ ಸುಮಾರು 35 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಆದರೆ ವಿಶ್ವನಾಥ್ ಅವರನ್ನು ಸಮಾಧಾನಗೊಳಿಸಿದ ಸಿಎಂ ಶೀಘ್ರದಲ್ಲೇ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಹಾಗಾದ್ರೆ ಸೋತವರಿಗೂ ಸಚಿವ ಸ್ಥಾನ ಸಿಗುತ್ತಾ ಎನ್ನುವುದು ಪ್ರಶ್ನೆಯಾಗಿದೆ.

ಹೌದು ಫೆಬ್ರವರಿ ಆರ ರಂದು ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ಅಧಿಕೃತವಾಗಿ ಭಾನುವಾರ ಘೋಷಣೆ ಮಾಡಿ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಫೆಬ್ರವರಿ 6ರಂದು ಬೆಳಗ್ಗೆ 10.30ಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ. ಈಗ ಇರುವ ಪ್ರಕಾರ 10+3 ಆಗಲಿದೆ. ಪುನಾರಚನೆ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಈ ಬಗ್ಗೆ ನಾಳೆ ತಿಳಿಸುತ್ತೇನೆ. ಉಪಚುನಾವಣೆಯಲ್ಲಿ ಗೆದ್ದ 10 ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಈಗಾಗಲೇ ಹೇಳಿದ್ದೆ. ಅದೇ ರೀತಿಯಾಗಿ ನೂತನ ಶಾಸಕರು ಮಂತ್ರಿಗಳಾಗುತ್ತಾರೆ,” ಎಂದರು. ಸೋತವರಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ, “ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ಆಗಲ್ಲ. ಸೋತವರನ್ನು ಸಚಿವರನ್ನಾಗಿ ಮಾಡಲು ಬರಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ನೋಡೋಣ,”ಎಂದು ಹೇಳಿದರು. ಆದರೆ ಈಗ ಪರಿಸ್ಥಿತಿ ನೋಡಿದರೆ ಬೇರೆಯೇ ಇದೆ ಎನ್ನಲಾಗಿದೆ.

ಯಡಿಯೂರಪ್ಪ ನೀಡಿದ ಬರವಸೆ ಏನು?

ಅದರಂತೆ ಈ ವೇಳೆ ವಿಶ್ವನಾಥ್ ಅವರನ್ನು ಸಮಾಧಾನ ಪಡಿಸಿದ ಸಿಎಂ, ನೀವು ಹಿರಿಯ ನಾಯಕರು ಯಾವುದೇ ಕಾರಣಕ್ಕೂ ನಿಮಗೆ ನೀಡಿದ್ದ ಭರವಸೆಯನ್ನು ಹುಸಿಗೊಳಿಸುವುದಿಲ್ಲ. ಸದ್ಯ ಕಾನೂನಿನ ತೊಡಕಿದೆ. ಮುಂದಿನ ವರ್ಷದ ಮೇ ಅಥವಾ ಜೂನ್‌ ತಿಂಗಳಲ್ಲಿ ಏಳು ವಿಧಾನಪರಿಷತ್ ಸ್ಥಾನಗಳು ತೆರವಾಗಲಿವೆ. ಈ ಸಂದರ್ಭದಲ್ಲಿ ನಿಮ್ಮನ್ನು ಎಮ್.ಎಲ್‌.ಸಿ ಮಾಡಿ ಸಚಿವರನ್ನಾಗಿ ಮಾಡಲಾಗುವುದು ಎಂಭ ಭರವಸೆಯನ್ನು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದೇ ವೇಳೆ ಜೊತೆಗಿದ್ದ ಸಚಿವ ವಿ. ಸೋಮಣ್ಣ ಕೂಡ ಕೂಡಾ ಸಮಾಧಾನ ಮಾಡಿದ್ದು ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿ, ಯಾವುದೇ ಮುಜುಗರ ಆಗದಂತೆ ಗೌರವದಿಂದ ನೋಡಿಕೊಳ್ಳಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿ ಪಕ್ಷದ ಕಚೇರಿ ಗುಡಿಸಲು ಸಿದ್ಧ:

ಚುನಾವಣೆಯಲ್ಲಿ ಗೆಲುವು ಸಾಧಿಸಿದ 11 ಶಾಸಕರ ಪೈಕಿ 10 ಮಂದಿಗೆ ಸಚಿವ ಸ್ಥಾನ ನೀಡುವುದಾಕಿ ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದು, ರಮೇಶ್ ಜಾರಕಿಹೊಳಿ ಆಪ್ತ ಮಹೇಶ್ ಕುಮಟಳ್ಳಿಯವರಿಗೆ ಸಂಪುಟದಲ್ಲಿ ಸ್ಥಾನ ಸಿಗುವುದು ಬಹುತೇಕ ಅನುಮಾನವಾಗಿದೆ. ಇದರಿಂದ ಸಹಜವಾಗಿಯೇ ಕುಮಟಳ್ಳಿಯವರು ಬೇಸರಗೊಂಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕುಮಟಳ್ಳಿಯವರು, ಎಲ್ಲರೂ ಬನ್ನಿ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಇಂದಿನ ವಾತಾವರಣ ಇದಕ್ಕೆ ವ್ಯತಿರಿಕ್ತವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಮೇಶ್ ಜಾರಕಿಹೊಳಿಯವರೊಂದಿಗೆ ವಿಶ್ವಾಸವನ್ನಿಟ್ಟು ಬಂದಿದ್ದೇನೆ. ಪರಿಸ್ಥಿತಿಯಿಂದ ಇಂದು ಮನಸ್ಸಿಗೆ ನೋವಾಗಿದೆ ಎಂದು ಹೇಳಿದ್ದಾರೆ. ಪಕ್ಷ ಆದೇಶಿಸಿದ್ದೇ ಆದರೆ, ಕಚೇರಿಯನ್ನು ಗುಡಿಸಲು ನಾನು ಸಿದ್ಧನಿದ್ದೇನೆಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ಬಿಜೆಪಿ ಸಚಿವ ಸಂಪುಟದ ಜಟಾಪಟ್ಟಿ ಇನ್ನೂ ಬಗೆಹರಿಯದ ಲಕ್ಷಣಗಳು ಕಂಡು ಬರುತ್ತಿಲ್ಲ.

Also read: ಸಿಎಂ ಯಡಿಯೂರಪ್ಪ ಬ್ಲಾಕ್ ಮೇಲ್? ಸಚಿವ ಸ್ಥಾನ ಕೊಡದಿದ್ದರೆ ಶೀಘ್ರವೇ ಆಪರೇಷನ್ ಕಮಲ ಕುರಿತು ಪುಸ್ತಕ ಬಿಡುಗಡೆ; ಹಳ್ಳಿಹಕ್ಕಿ ಎಚ್ ವಿಶ್ವನಾಥ್