ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 24 ಘಂಟೆಯಲ್ಲಿ ರದ್ದು ಮಾಡಿದ ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಆಚರಣೆ ಮಾಡುತ್ತೇವೆ ಎಂದ ಬಿಜೆಪಿ ಅಭ್ಯರ್ಥಿ.!

0
124

ಕಾಂಗ್ರೆಸ್​ ಸರ್ಕಾರ ಜಾರಿಗೆ ತಂದ ಟಿಪ್ಪು ಜಯಂತಿಯನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 24 ಘಂಟೆಯಲ್ಲೇ ರದ್ದು ಮಾಡಿ ಭಾರಿ ವಿವಾದಕ್ಕೆ ಗುರಿಯಾಗಿತ್ತು, ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕರಿಂದ ಹಲವು ಟೀಕೆಗಳು ಕೇಳಿ ಬಂದಿದವು. ಅದರಲ್ಲಿ ಕೆಲವು ಬಿಜೆಪಿ ನಾಯಕರು ಕೂಡ ಟಿಪ್ಪು ಜಯಂತಿ ರದ್ದು ಮಾಡುವುದು ಸರಿಯಲ್ಲ ಎಂದು ಹೇಳಿದರೆ ಇನ್ನೂ ಕೆಲವರು ಈ ನಿರ್ಧಾರವನ್ನು ಗೌರವಿಸಿದರು, ಆದರೆ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿಗೆ ಅವಕಾಶವಿಲ್ಲವೆಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ಹೇಳಿತ್ತು. ಆದರೆ ಬಿಜೆಪಿಯ ಮಾಜಿ ಚುನಾವಣಾ ಅಭ್ಯರ್ಥಿಯೊಬ್ಬರು ಟಿಪ್ಪು ಜಯಂತಿ ಮಾಡುತ್ತೇವೆ ಎಂದು ಹೇಳಿದ್ದು, ಭಾರಿ ವೈರಲ್ ಆಗಿದೆ.

Also read: ಎಲ್ಲ ಅಂಗಡಿ-ಮುಂಗಟ್ಟುಗಳ ಮೇಲೆ ನವೆಂಬರ್ 1ರ ಒಳಗೆ ಕನ್ನಡ ನಾಮಫಲಕ ಹಾಕದಿದ್ದರೆ ಪರವಾನಗಿ ರದ್ದು??

ಬಿಜೆಪಿಯ ಅಭ್ಯರ್ಥಿಯಿಂದ ಟಿಪ್ಪು ಜಯಂತಿ ಆಚರಣೆ?

ಹೌದು ಟಿಪ್ಪು ಜಯಂತಿಯ ವಿಚಾರದಲ್ಲಿ ಬಿಜೆಪಿ ಪಕ್ಷದಲ್ಲೇ ಭಿನ್ನಮತ ಕೇಳಿ ಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈ ಬಾರಿಯ ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಮಾಡ್ತೀವಿ ಎಂದು ಬಿಜೆಪಿ ಸಂಸದ ಬಚ್ಚೇಗೌಡ ಅವರ ಮಗ ಮತ್ತು ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಯಾಗಿ ಶರತ್ ಬಚ್ಚೇಗೌಡ ಹೇಳಿದ್ದಾರೆ. ನಿನ್ನೆ ಹೊಸಕೋಟೆ ಬಳಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶರತ್ ಬಚ್ಚೇಗೌಡ, ‘ಟಿಪ್ಪು ಜಯಂತಿ ಆಚರಣೆ ಮಾಡಬೇಡಿ ಎಂದು ಬಹಳ ಜನ ಹೇಳಿದರು, ಆದರೆ ನಾನು ಅವರ ಮಾತು ಕೇಳುವುದಿಲ್ಲ’
‘ನನ್ನ ಗ್ರಾಮ ಬೆಂಡಿಗಾನಹಳ್ಳಿ, ಆ ಗ್ರಾಮದ ಪಕ್ಕದಲ್ಲಿ ತಮ್ಮರಸನಹಳ್ಳಿ ಇದೆ, ಅದೇ ಗ್ರಾಮದಲ್ಲಿ ನಾನೇ ಮುಂದೆ ನಿಂತು ಟಿಪ್ಪು ಜಯಂತಿ ಆಚರಣೆ ಮಾಡುತ್ತೇನೆ’ ಎಂದು ಶರತ್ ಬಚ್ಚೇಗೌಡ ಹೇಳಿದ್ದಾರೆ. ಶರತ್ ಬಚ್ಚೇಗೌಡ ಹೇಳಿಕೆ ಬಗ್ಗೆ ಡಿಸಿಎಂ ಗೋವಿಂದ ಕಾರಜೋಳ ಅವರ ಪ್ರತಿಕ್ರಿಯೆ ಕೇಳಿದಾಗ, ಶರತ್ ಬಚ್ಚೇಗೌಡ ಯಾರೆಂಬುದು ಸಹ ಗೊತ್ತಿಲ್ಲ ಎಂಬಂತೆ ಗೋಚಿಂದ ಕಾರಜೋಳ ಮಾತನಾಡಿದರು. ಇದರಲ್ಲಿ ಎರಡು ಲಾಭಗಳಿದ್ದು ಹೊಸಕೋಟೆ ಶಾಸಕರಾಗಿದ್ದ ಎಂಟಿಬಿ ನಾಗರಾಜು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾರಣ ಹೊಸಕೋಟೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.

Also read: ಹಬ್ಬದ ಪ್ರಯಕ್ತ ಸುಲಿಗೆಗೆ ನಿಂತ ಬಸ್‍ಗಳು; ಬಿ.ಎಸ್.ಯಡಿಯೂರಪ್ಪ ಅವರಿಗೆ ಬಸ್ ಟಿಕೆಟ್ ಬುಕ್ ಮಾಡಿ ದೀಪಾವಳಿ ಹಬ್ಬಕ್ಕೆ ಆಹ್ವಾನಿಸಿದ ಪ್ರಯಾಣಿಕ.!

ಬಿಜೆಪಿಯು ಎಂಟಿಬಿ ನಾಗರಾಜು ಗೆ ಬಿಜೆಪಿ ಯಿಂದ ಟಿಕೆಟ್ ನೀಡುವ ಸಾಧ್ಯತೆ ಇದೆ. ಹಾಗಾಗಿ ಶರತ್ ಬಚ್ಚೇಗೌಡ ಅವರು ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಈಗಾಗಲೇ ಹಸಕೋಟೆ ಕ್ಷೇತ್ರದಲ್ಲಿ ಸ್ವಾಭಿಮಾನಿ ಯಾತ್ರೆ ಹೆಸರಿನಲ್ಲಿ ಸಮಾವೇಶಗಳನ್ನು ನಡೆಸುತ್ತಿರುವ ಶರತ್ ಎಲ್ಲ ಹಳ್ಳಿಗಳಿಗೂ ಭೇಟಿ ನೀಡುತ್ತಿದ್ದಾರೆ. ಈ ಎಲ್ಲ ವಿಷಯ ಕುರಿತು ಈ ಬಾರಿಯ ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಮಾಡುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಂತೆ ಮುಸ್ಲಿಂ ಯುಕನೋರ್ವ ಶರತ್ ಅವರ ಮೇಲೆ ಹಣವನ್ನು ಸುರಿದಿದ್ದಾನೆ.

ಒಟ್ಟಾರೆಯಾಗಿ ಈ ರಾಜಕೀಯ ನಾಯಕರ ಕೆಲಸಕ್ಕೆ ದೇವರನ್ನು, ಮತ್ತು ದಿನಾಚರಣೆಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಧರ್ಮದ ಜಗಳ ಹಚ್ಚುತ್ತಿರುವುದು ಎಷ್ಟೊಂದು ಸರಿ ಎನ್ನುವುದ್ದನ್ನು ರಾಜ್ಯದ ಜನರೇ ಅರ್ಥ ಮಾಡಿಕೊಳ್ಳಬೇಕು.