ರಾಜ್ಯದ ಬಿಜೆಪಿ ನಾಯಕರಿಗೆ ದೊಡ್ಡ ಗೌಡರ ಬಗ್ಗೆ ಉಡಾಫೆಯಿಂದ ಮಾತನಾಡದಿರಿ ಎಂದು ಎಚ್ಚರಿಕೆ ನೀಡಿದ ಕೇಂದ್ರದ ನಾಯಕರು..

0
472

ರಾಜ್ಯ ಬಿಜೆಪಿ ನಾಯಕರಿಗೆ ದೆಹಲಿಯ ಪಕ್ಷದ ಹೈಕಮಾಂಡ್ ಒಂದು ವಿಶೇಷ ಹಾಗು ಖಡಕ್ ಸೂಚನೆಯನ್ನು ರವಾನಿಸಿದೆ. ಕಮಲ ಪಾಳಯದ ಈ ನಡೆ ಎಲ್ಲ ರಾಜಕೀಯ ಪಕ್ಷಗಳಿಗೆ ಅದರಲ್ಲೂ ವಿಶೇಷವಾಗಿ ವಿರೋಧ ಪಕ್ಷ ಕಾಂಗೆಸ್ಸಿಗೆ ತಲೆ ಕೆಡಿಸಿಕೊಳ್ಳುವ ಹಾಗೆ ಮಾಡಿದೆ. ಏನದು ವಿಶೇಷ ಸಂದೇಶ, ನೀವೇ ನೋಡಿ.

ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ಪಕ್ಷದ ಹೈಕಮಾಂಡ್ ಪ್ರಚಾರದಲ್ಲಿ ಆಗಲಿ ವೈಯಕ್ತಿಕವಾಗಲಿ ಜೆಡಿಎಸ್ ಪಕ್ಷದ ಸ್ಥಾಪಕ ಹಾಗು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಹಾಗು ಅವರ ಕುಟುಂಬದವರ ವಿರುದ್ಧ ಯಾವುದೇ ಟೀಕೆಗಳನ್ನು ಮತ್ತು ಅವಹೇಳನಕಾರಿ ಮಾತುಗಳನ್ನು ಬಳಸಬಾರದೆಂದು ಸೂಚಿಸಿದೆ. ರಾಜಕೀಯವಾಗಿ ಜೆಡಿಎಸ್ ಪಕ್ಷವನ್ನು ಎಷ್ಟು ಎದುರಿಸಬೇಕೋ ಅಷ್ಟು ಎದುರಿಸಿ ಸಾಕು ಎಂದಿದೆ.

ಇದೇನು ಆಶ್ಚರ್ಯ ಅಂತೀರ, ಬಿಜೆಪಿ ಹೈಕಮಾಂಡ್ ಹೀಗೆ ಹೇಳಿರುವುದಕ್ಕೂ ಕಾರಣ ಇದೆ. ಬಿಜೆಪಿಗೆ ತನ್ನ ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್-ಗೆ ಕರ್ನಾಟಕ ಚುನಾವಣೆಯಲ್ಲಿಯೂ ಬುದ್ದಿ ಕಲಿಸುವ ಮತ್ತು ಕಾಂಗ್ರೆಸ್ ಮುಕ್ತ ಭಾರತ ಯೋಜನೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಈ ರೀತಿ ಮಾಡುತ್ತಿದೆ. ಅಲ್ಲದೆ ಜೆಡಿಎಸ್ ಪಕ್ಷದವರನ್ನು ಟೀಕಿಸಿದಲ್ಲಿ ಅದು ಕಾಂಗೇಸ್-ಗೆ ಸುಲಭ ಪ್ರಚಾರದ ವಿಷಯವಾಗಿ ಬಿಡುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರ.

ಇತ್ತೀಚಿಗೆ ದೆಹಲಿಯಲ್ಲಿ ದೇವೇಗೌಡರ ನಿವಾಸಕ್ಕೆ ಕೇಂದ್ರ ರೈಲ್ವೇ ಸಚಿವ ಹಾಗೂ ರಾಜ್ಯ ಚುನಾವಣಾ ಸಹ ಉಸ್ತುವಾರಿ ಪಿಯೂಶ್ ಗೋಯಲ್ ಸ್ವಯಂಪ್ರೇರಿತರಾಗಿ ಭೇಟಿ ನೀಡಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಈ ಹಿಂದೆ ಪ್ರಧಾನಿ ಮೋದಿಯನ್ನು ಟೀಕಿಸಬೇಡಿ ಎಂದು ಜೆಡಿಎಸ್ ಶಾಸಕರಿಗೆ ದೇವೇಗೌಡರು ಸೂಚಿಸಿದ್ದರು, ಈ ಎಲ್ಲ ಘಟನೆಯನ್ನು ನೋಡಿದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್-ಗೆ ದೊಡ್ಡ ಆಪತ್ತು ಕಾದಿದೆ ಎಂಬುದು ನಿಶ್ಚಯವಾಗಿದೆ.

ಒಟ್ಟಿನಲ್ಲಿ ಕಾಂಗ್ರೆಸನ್ನು ಬಗ್ಗು ಬಡಿಯಲು ಮತ್ತು ಅದಕ್ಕೆ ಯಾವುದೇ ರೀತಿಯ ಅವಕಾಶಗಳನ್ನು ನೀಡದಿರಲು ಬಿಜೆಪಿಯವರು ಬುದ್ದಿವಂತಿಗೆಯಿಂದ ಯೋಜನೆ ರೂಪಿಸುತ್ತಿರುವುದಂತು ನಿಜ…!