ಕಾಂಗ್ರೆಸ್-ನತ್ತ ವಾಲುತ್ತಿದ್ದಾರೆ ಬಿ.ಜೆ.ಪಿ. ಶಾಸಕರು, ಮುಗಿಯಿತಾ ಮೋದಿ- ಅಮಿತ್ ಶಾ ಆಟ???

0
455

ಕಮಲ ಕೈ ಬಿಟ್ಟ ಮಹಾ ಶಾಸಕ ಆಶಿಶ್ ದೇಶಮುಖ್..!

ಪ್ರತ್ಯೇಕ ವಿದರ್ಭ ರಾಜ್ಯದ ಬಲವಾದ ಪ್ರತಿಪಾದಕರಾಗಿದ್ದ ಬಿಜೆಪಿ ಶಾಸಕ ಆಶಿಶ್ ದೇಶಮುಖ್, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಈ ಮೂಲಕ ಮಹಾರಾಷ್ಟ್ರದ ಕಮಲ ಪಾಳಯದಲ್ಲಿ ಭಾರಿ ಸಂಚಲನ ಮೂಡಿದೆ.

Also read: ಮತೊಮ್ಮೆ ವಿಫಲವಾದ ಆಪರೇಷನ್ ಕಮಲ; ಹೆಬ್ಬಾಳ್ಕರ್-ಗೆ ಸಚಿವ ಸ್ಥಾನ ಹಾಗು 30 ಕೋಟಿ ಆಮಿಷ ಒಡ್ಡಿತ್ತಂತೆ ರಾಜ್ಯ ಬಿ.ಜೆ.ಪಿ.!!

ಕಳೆದ ಐದು ವರ್ಷದಿಂದ ಬಿಜೆಪಿ ಸರ್ಕಾರ ರೈತರ ಸಮಸ್ಯೆಗಳನ್ನು ಮತ್ತು ಯುವಕರನ್ನು ಕಡೆಗಣಿಸಿ, ಬಿಜೆಪಿ ಬರಿ ದೇಶದಲ್ಲಿ ವಿಭಜನೆ ಮತ್ತು ಮತ ಬ್ಯಾಂಕ್ ರಾಜಕೀಯ ಮಾಡುತ್ತಿದೆ. ತನ್ನ ಸ್ವಂತ ಬೆಳೆವಣಿಗೆಯನ್ನು ಮಾತ್ರ ಯೋಚಿಸುತ್ತಿದು ದೇಶದದಲ್ಲಿ ಯಾವುದೇ ರೀತಿಯ ಯುವಕರ ಉದ್ಯೋಗದ ಮತ್ತು ರೈತರ ಬಗ್ಗೆ ಎಳ್ಳಷ್ಟು ಯೋಚನೆ ಮಾಡುತ್ತಿಲ್ಲ ಇದರಿಂದ ನನ್ನ ರಾಜಕೀಯ ಜೀವನದಲ್ಲಿ ಈ ಬಿಜೆಪಿಯವರ ಸಹವಾಸವೆ ಬೇಡವಾಗಿದೆ. ಮತ್ತು ಬಿಜೆಪಿ ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿ ಆಶಿಶ್ ದೇಶಮುಖ್, ವಿಧಾನಸಭೆ ಸ್ಪೀಕರ್ ಹರಿಭಾವು ಬಾಗ್ಡೆ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಲಿದ್ದಾರೆ.

Also read: ಮೋದಿಯಿಂದ ಮಹಾ ಮೋಸ; ಜನಸಾಮಾನ್ಯರ ಉಳಿತಾಯದ ಹಣದಿಂದ ಖಾಸಗಿ ಸಂಸ್ಥೆಯ 90 ಸಾವಿರ ಕೋಟಿ ಸಾಲ ತೀರಿಸಿದ ಮೋದಿ ಸರ್ಕಾರ!!

ಸಧ್ಯ ಆಶಿಶ್ ದೇಶಮುಖ್ ಕಾಂಗ್ರೆಸ್ ಸೇರುವ ಸಾಧ್ಯತೆ ಇದ್ದು, ಈ ಸಂಬಂಧ ಇಂದು ವಾರ್ಧಾದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ.
ಆಶಿಶ್ ದೇಶಮುಖ್ ಅವರ ಹೇಳಿಕೆ ಪ್ರಕಾರ ಬಿಜೆಪಿ ದೇಶದ ರೈತರ ಸಮಸ್ಯೆಗಳನ್ನು ಮತ್ತು ಯುವಕರನ್ನು ಕಡೆಗಣಿಸಿದೆ. ಈ ವಿಷಯ ಆಶಿಶ್ ದೇಶಮುಖ್ ಅವರಿಗೆ ನೋವಿನ ಮಾತಗಿದು ಇದಕ್ಕೆ ಪರಿಹಾರವಾಗಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರಸ್ ಸೇರಿ ಮುಂದಿನ ದಿನಗಳಲ್ಲಿ ರೈತರ ಬಗ್ಗೆ ಯುವಕರ ಬಗ್ಗೆ ಒಳ್ಳೆಯ ಅವಕಾಶವನ್ನು ಕೊಡಿಸುವ ಗುರಿಯನ್ನು ದೇಶಮುಖ್ ಹೊಂದಿದ್ದಾರೆ.

ಈ ಎಲ್ಲ ಹಿನ್ನೆಲೆಯಲ್ಲಿ ಬಿಜೆಪಿ ಕುಟುಂಬದಲ್ಲಿ ಭಯದ ವಾತಾವರಣ ಮೂಡಿದು ಈ ಎಲ್ಲ ಬದಲಾವಣೆವು ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬಿರುವ ಸಂಭವವಿದು ಬಿಜೆಪಿಯಲ್ಲಿ ಕೆಲವೊಂದು ಬದಲಾವಣೆಗಳು ಶುರುವಾಗಿವೆ. ಇಂತಹದೆ ಬೇರೆ ಬೇರೆ ಕಾರಣಗಳನ್ನು ಇಟ್ಟುಕೊಂಡು ಇನ್ನೂ ಹಲವು ಶಾಸಕರು ಕಾಂಗ್ರೆಸ್ ಬರುವ ಸಾಧ್ಯತೆಯಿರುವ ಬಗ್ಗೆ ಮೂಲಗಳಿಂದ ತಿಳಿದು ಬಂದಿದೆ.