ಗೆದ್ದ ಬಿಜೆಪಿ ಪಕ್ಷದಲ್ಲಿ ಸಚಿವ ಸ್ಥಾನಕ್ಕಾಗಿ ಶುರುವಾದ ಗುದ್ದಾಟ; ಸೋತ ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ನಡೆಯುತ್ತಿದ್ದೆ ರಂಪಾಟ!!

0
162

ರಾಜ್ಯರಾಜಕೀಯದಲ್ಲಿ ಮತ್ತೊಂದು ಎರಡು ಪಕ್ಷಗಳ ನಡುವೆ ಮತ್ತೆ ಅಧಿಕಾರದ ದಾಹ ಹೆಚ್ಚಾಗಿದ್ದು, ಒಂದು ಕಡೆ ಸಿಎಂ ಪಟ್ಟಕ್ಕೆರಿದ ಬಿಜೆಪಿ ಪಕ್ಷದಲ್ಲಿ ಸಚಿವ ಸ್ಥಾನಕ್ಕಾಗಿ ಬೇಡಿಕೆಗಳು ಕೇಳಿಬರುತ್ತಿದ್ದು, ರಾಜ್ಯದ ಹಲವು ಜಿಲ್ಲೆಯಲ್ಲಿ ಇಷ್ಟೇ ಸಚಿವರು ಆಗಲೇ ಬೇಕು ಎನ್ನುವ ಅಧಿಕೃತ ಹೇಳಿಕೆಗಳು ಬಿಜೆಪಿಯ MLA-ರಿಂದ ಕೇಳಿಬರುತ್ತಿವೆ, ಇದೊಂದು ಹೈ ಡ್ರಾಮಾವಾದರೆ ಬಹುಮತ ಸಾಬೀತು ಪಡಿಸಲು ಆಗದೆ ಪ್ರತಿಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಪಕ್ಷದಲ್ಲಿ ವಿರೋದ್ಧ ಪಕ್ಷದ ನಾಯಕರ ಸ್ಥಾನಕ್ಕೆ ಜಟಾಪಟಿ ನಡೆಯುತ್ತಿದೆ. ಇದೆಲ್ಲವೂ ನೋಡಿದರೆ ಮತ್ತೆ ರಾಜಕೀಯ ಬೆಂಕಿ ಆರುವ ಲಕ್ಷಣಗಳು ಕಾಣುತ್ತಿಲ್ಲ.

Also read: ಕೇಂದ್ರ ಸರ್ಕಾರದಿಂದ ಮತ್ತೆ ಬಿಗ್ ಶಾಕ್; ವಾಹನಗಳ ನೋಂದಣಿ ಶುಲ್ಕ ಹೆಚ್ಚಿಸಲು ಮುಂದಾದ ಸರ್ಕಾರ, ಯಾವ ವಾಹನಗಳಿಗೆ ಎಷ್ಟು ಹೆಚ್ಚಳ??

ಹೌದು ಬಿ.ಎಸ್​. ಯಡಿಯೂರಪ್ಪ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಲ್ಲದೆ, ಸೋಮವಾರ ನೂತನ ಸರ್ಕಾರದ ಬಹುಮತ ಸಾಬೀತುಪಡಿಸಬೇಕಾದ ಒತ್ತಡ ಅವರ ಮೇಲಿದೆ. ಈ ಹಿನ್ನೆಲೆ ಕರೆಯಲಾಗಿರುವ ಅಧಿವೇಶನದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕಾಂಗ್ರೆಸ್​ ಕೂರಲಿದ್ದು, ಸಿದ್ದರಾಮಯ್ಯ ಪ್ರತಿಪಕ್ಷ ನಾಯಕನಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಅದರಂತೆ ಯಡಿಯೂರಪ್ಪ ವಿಶ್ವಾಸಮತದ ಸಾಬೀತಿನ ವೇಳೆ ಅಧಿಕೃತ ಪ್ರತಿಪಕ್ಷ ಹಾಗೂ ಆ ಪಕ್ಷದ ನಾಯಕ ಇರಲೇಬೇಕಿರುವುದು ವಿಧಾನಮಂಡಲ ಅಧಿವೇಶನದ ಸಂಪ್ರದಾಯ. ಆದರೆ, ಈ ವರೆಗೆ ಕಾಂಗ್ರೆಸ್​ ಆ ಸ್ಥಾನಕ್ಕೆ ಯಾರನ್ನು ನೇಮಿಸಲಿದೆ? ಎಂಬ ಕುರಿತು ಕಳೆದ ಎರಡು ಮೂರು ದಿನಗಳಿಂದ ಚರ್ಚಾಸ್ಪದ ವಿಚಾರವಾಗಿದೆ. ಇನ್ನೂ ಕೆಲವು ಕಾಂಗ್ರೆಸ್ ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರನ್ನೇ ವಿಪಕ್ಷ ನಾಯಕನನ್ನಾಗಿ ಮಾಡಲು ಹೈ ಕಮಾಂಡ್​​ ಸೂಚಿಸಿದೆ ಎನ್ನಲಾಗುತ್ತದೆಯಾದರೂ ಈ ಕುರಿತು ಈವರೆಗೆ ಯಾವುದೇ ಸ್ಪಷ್ಟತೆ ದೊರಕಿಲ್ಲ.

Also read: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಬಿಎಸ್ ವೈ; ಎಚ್.ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಗೆ ಆಹ್ವಾನ ನೀಡಿದ್ದು ಯಾಕೆ ಗೊತ್ತಾ??

ಆದರೆ, ಈ ರೇಸ್​ನಲ್ಲಿ ಮಾಜಿ ಉಪಮುಖ್ಯಮಂತ್ರಿಯಾಗಿದ್ದ ಡಾ.ಜಿ. ಪರಮೇಶ್ವರ್​ , ಡಿಕೆಶಿ, ದಿನೇಶ್ ಗುಂಡುರಾವ್ ಅವರ ಹೆಸರು ಕೇಳಿ ಬರುತ್ತಿವೆ. ಇದು ಕಾಂಗ್ರೆಸ್ ಪಕ್ಷದ ಡ್ರಾಮಾ ಆದರೆ. ಇನ್ನೂ ಬಿಜೆಪಿಯಲ್ಲಿ ದೊಡ್ಡ ಅಲೆಗಳು ಶುರುವಾಗಿದ್ದು, ಈ ನಡುವೆ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕ್ಲೀನ್ ಸ್ವೀಪ್ ಮಾಡಿರುವ ಬಿಜೆಪಿ ನಾಯಕರಲ್ಲಿ ಯಾರು ಮಂತ್ರಿಯಾಗಬಹುದು, ಯಾರಿಗೆ ನಿಗಮ ಮಂಡಳಿ ಸಿಗಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ. ಮೈತ್ರಿ ಸರ್ಕಾರದ 13 ತಿಂಗಳಿಗೆ ವಿಶ್ವಾಸ ಕಳೆದ ಬೆನ್ನಲ್ಲೇ ಬಿಜೆಪಿ ನಾಯಕರು ಸರ್ಕಾರ ರಚನೆ ಮಾಡುವ ಓಡಾಟದಲ್ಲಿದ್ದಾರೆ. ಜಿಲ್ಲೆಯಲ್ಲಿ ಐದಕ್ಕೈದು ಬಿಜೆಪಿ ಶಾಸಕರೇ ಇರುವುದರಿಂದ, ಅದರಲ್ಲೂ ಎಲ್ಲ ನಾಯಕರು ಹಿರಿಯರೇ ಆಗಿರುವುದರಿಂದ ರಾಜ್ಯ ನಾಯಕರಿಗೆ ತಲೆ ಬಿಸಿ ಶುರುವಾಗಿದೆ.

ಹಿಂದುಳಿದ ವರ್ಗದ ಪ್ರಬಲ ನಾಯಕ ಪೂಜಾರಿ, ಸಚಿವರಾಗಬಹುದು ಎಂಬ ಮಾತು ಜಿಲ್ಲೆಯ ರಾಜಕೀಯ ವಲಯದಿಂದ ಕೇಳಿ ಬರುತ್ತಿದೆ. ಅದರಂತೆ ಮೂರು ಸಾರಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಗೆದ್ದ ಯುವ ನಾಯಕರಾಗಿದ್ದ ಹಿಂದೂ ಫೈರ್ ಬ್ರ್ಯಾಂಡ್ ವಿ.ಸುನೀಲ್ ಕುಮಾರ್ ಕರಾವಳಿಯ ಪ್ರಬಲ ಬಿಲ್ಲವ ಜಾತಿ ಬಲ ಕೂಡ ಇರೋದರಿಂದ ಸಂಪುಟಕ್ಕೆ ಹೊಸಮುಖವನ್ನು ತರ್ತಾರೆ ಎಂಬ ಲೆಕ್ಕಾಚಾರವೂ ಇದೆ. ಅಷ್ಟೇ ಅಲ್ಲದೆ. ಐದು ಬಾರಿ ಶಾಸಕರಾಗಿದ್ದ ಹಾಲಾಡಿಯವರಿಗೆ ಕಳೆದ ಬಾರಿ ಸಚಿವ ಸ್ಥಾನ ಕೈತಪ್ಪಿತ್ತು. ಅದಕ್ಕಾಗಿ ಇವರಿಗೆ ಸಚಿವ ಸ್ಥಾನ ಪಕ್ಕಾ ಎನ್ನುವ ಮಾತುಗಳು ಕೇಳಿಬರುತ್ತಿವೆ.

Also read: ಬರಿ ದಂಡ ಹಾಕೋದ್ರಿಂದ ಬುದ್ದಿ ಕಲಿಯೋದಿಲ್ಲ ಅಂತ ಒನ್ ವೇ-ಯಲ್ಲಿ ಬೈಕ್ ಸವಾರಿ ಮಾಡಿದ 6 ಜನರಿಗೆ 2 ದಿನ ಜೈಲು ಶಿಕ್ಷೆ ನೀಡಿದ ಪೋಲಿಸ್!!

ಅದರಂತೆ ಬೆಳಗಾವಿ ಜಿಲ್ಲೆಗೆ 6. ಸಚಿವ ಸ್ಥಾನ ನೀಡಬೇಕು ಎಂದು ಸಚಿವ ಸುರೇಶ ಅಂಗಡಿ‌ ಹೇಳಿದ್ದಾರೆ. ಆದರೆ ಹಾವೇರಿಯಲ್ಲಿ ನೆಹರು ಒಲೇಕಾರ್ ನನಗೆ ಸಚಿವ ಸ್ಥಾನ ನೀಡಲೇ ಬೇಕು ಎಂದು ಪಟ್ಟು ಹಿಡಿದಿದ್ದು ಮಾಧ್ಯಮದವರ ಜೊತೆಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೆಲ್ಲ ಬೆಳವಣಿಗೆ ನೋಡಿದರೆ ಬಂಡಾಯದ 13 ಶಾಸಕರನ್ನು ಸಮಾಧಾನ ಪಡಿಸಿ ನಂತರ ಬಿಜೆಪಿಯವರಿಗೆ ಸಚಿವ ಸ್ಥಾನ ನೀಡಿದರೆ ಪತ್ತೆ ಬಿಜೆಪಿಯಲ್ಲಿ ಬಂಡಾಯ ಏಳುವುದು ಪಕ್ಕಾ ಎನ್ನುವ ಮಾತುಗಳು ಕೇಳಿಬರುತ್ತಿವೆ.