ಮೈಸೂರು ದಸರಾದಲ್ಲಿವೂ ರಾಜಕೀಯ? ವೇದಿಕೆ ತೆಗೆದು ಹಾಕದಿದ್ರೆ ಅರಮನೆಯಿಂದ ಓಡಿಸ್ತೀನಿ, ಪೊಲೀಸರಿಗೆ ಪ್ರತಾಪ್ ಸಿಂಹ ಆವಾಜ್

0
219

ಮೈಸೂರು ದಸರಾ ಹತ್ತಿರ ಬರುತ್ತಿದಂತೆ ಹಲವು ವಿವಾದಗಳು ಕೇಳಿ ಬರುತ್ತಿದ್ದು, ನಾಡಹಬ್ಬದಲ್ಲಿವೂ ರಾಜಕೀಯ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ ಏಕೆಂದರೆ ಇಂದು ಮುಂಜಾನೆ ಶಾಮಿಯಾನ ಹಾಕುವ ವಿಷಯಕ್ಕೆ ಬಿಜೆಪಿಯ ಕಾರ್ಯಕರ್ತರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದ್ದು, ಸಂಸದ ಪ್ರತಾಪ್ ಸಿಂಹ ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ. ಶಾಮಿಯಾನ ಹಾಕಿರುವುದಕ್ಕೆ ಕೆಂಡಾಮಂಡಲ ಆಗಿದ್ದಾರೆ. ಮಹಿಷನಿಗೆ ಹುಟ್ಟಿರುವವನು ಅವನ ಮನೆಯಲ್ಲಿ ಕಾರ್ಯಕ್ರಮ ಮಾಡಿಕೊಳ್ಳಲಿ ಎಂದು ಕೂಗಾಡಿ ವೇದಿಕೆ ತೆಗ್ದು ಹಾಕದಿದ್ರೆ ಅರಮನೆಯಿಂದ ಓಡಿಸ್ತೀನಿ ಎಂದು ಹೇಳಿರುವ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Also read: ಇನ್ಮುಂದೆ ATMನಲ್ಲಿ ಹಣ ತೆಗೆಯುವಾಗ ಖಾತೆಯಿಂದ ಡೆಬಿಟ್​ ಆಗಿ ಹಣ ಸಿಗದೆ ಇದ್ದರೇ ಗ್ರಾಹಕರಿಗೆ ದಿನಕ್ಕೆ ಸಿಗಲಿದೆ 100 ರೂ. ಪರಿಹಾರ.!

ಮಹಿಷಾ ದಸರಾಕ್ಕೆ ಪ್ರತಾಪ್ ಸಿಂಹ ಆಕ್ಷೇಪ?

ದಸರಾ ಹೊಸ್ತಿಲಲ್ಲಿ ಮೈಸೂರಿನಲ್ಲಿ ಚಾಮುಂಡಿ ದಸರಾ ವರ್ಸಸ್ ಮಹಿಷ ದಸರಾ ಎಂಬ ಸೈದ್ಧಾಂತಿಕ ಸಮರ ಶುರುವಾಗಿದೆ. ಈ ಕಾರಣಕ್ಕಾಗಿ ಚಾಮುಂಡಿ ಬೆಟ್ಟದಲ್ಲಿ ಪೊಲೀಸರಿಗೆ ಸಂಸದ ಪ್ರತಾಪ್ ಸಿಂಹ ತರಾಟೆ ತೆಗೆದುಕೊಂಡಿದ್ದಾರೆ. ಬೆಟ್ಟದ ಮೇಲಿನ ಮಹಿಷಾಸುರ ಮೂರ್ತಿ ಬಳಿ ಮಹಿಷ ದಸರಾ ನಡೆಸುವ ಸಲುವಾಗಿ ಶಾಮಿಯಾನ, ವೇದಿಕೆ ಹಾಕಿ ತಯಾರಿ ಮಾಡಲಾಗುತ್ತಿತ್ತು. ಈ ಬಗ್ಗೆ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪ್ರತಾಪ್ ಸಿಂಹ, ಇಲ್ಲಿ ವೇದಿಕೆ ಹಾಕೋದಕ್ಕೆ ಯಾರು ನಿಮಗೆ ಅನುಮತಿ ಕೊಟ್ಟರು? ಇದನ್ನು ಮೊದಲು ಇಲ್ಲಿಂದ ತೆಗೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also read: ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವ್ಯಕ್ತಿ ಅನಾಥಾಶ್ರಮಕ್ಕೆ ನೀಡಿದ ದೇಣಿಗೆ ಹಣದಿಂದಲೇ ಅಂತ್ಯಕ್ರಿಯೆ.!

ಅಷ್ಟೇ ಅಲ್ಲದೆ ಶಾಮಿಯಾನ ಹಾಕಿರುವುದಕ್ಕೆ ಕೆಂಡಾಮಂಡಲ ಆಗಿದ್ದಾರೆ. ಮಹಿಷನಿಗೆ ಹುಟ್ಟಿರುವವನು ಅವನ ಮನೆಯಲ್ಲಿ ಕಾರ್ಯಕ್ರಮ ಮಾಡಿಕೊಳ್ಳಲಿ ಎಂದು ಕೂಗಾಡಿದ್ದಾರೆ. ಇದನ್ನು ಹಾಕುವಾಗ ನೀವು ಏನು ಮಾಡುತ್ತಿದ್ರಿ ಪೊಲೀಸರೇ, ನಿಮ್ಮಿಂದ ಇಂತಹ ಕೆಲಸ ನಿರೀಕ್ಷೆ ಮಾಡಿರಲಿಲ್ಲ ಎಂದು ಅಕ್ಷೇಪಾರ್ಹ ಪದ ಬಳಕೆ ಮಾಡಿ. ಪೊಲೀಸ್ ಕಮೀಷನರ್ ಹಾಗೂ ಡಿಸಿಪಿ ವಿರುದ್ಧ ಕೂಗಾಡಿದ್ದಾರೆ. ಆಗ ನಮಗೂ ಇದಕ್ಕೂ ಸಂಬಂಧವಿಲ್ಲ. ಇದು ಗ್ರಾಮ ಪಂಚಾಯಿತಿ ಅವರು ಮಾಡಿರುವ ಕೆಲಸ ಎಂದು ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದರು.

Also read: 13 ವರ್ಷಗಳಿಂದ 300 ಬಡ ಮಕ್ಕಳಿಗೆ ಮೆಟ್ರೋ ಬ್ರಿಡ್ಜ್ ಕೆಳಗೆ ಓಪನ್ ಶಾಲೆ ನಡೆಸುತ್ತಿರುವ ಈ ವ್ಯಕ್ತಿಯ ಸೇವೆ ಎಲ್ಲದಕ್ಕೂ ಮಿಗಿಲಾದ್ದದ್ದು.!

ದಸರಾ ಉತ್ಸವ ಕಾರ್ಯಕ್ರಮಗಳಿಗೆ ವೇದಿಕೆ ಹಾಕುವ ಶಾಮಿಯಾನ ಮಾಲೀಕ ಶಫಿ ನೇತೃತ್ವದಲ್ಲಿ ಈ ವೇದಿಕೆ ಹಾಕಲಾಗಿತ್ತು. ಹೀಗಾಗಿ ಕೂಡಲೇ ಟ್ರಕ್ ತಂದು ಇದನ್ನು ತೆರವುಗೊಳಿಸಬೇಕು. ಇಲ್ಲವಾದರೆ ಅರಮನೆ ಆವರಣದಿಂದ ನಿನ್ನ ಓಡಿಸುತ್ತೇನೆಂದು ಶಾಮಿಯಾನ ಮಾಲೀಕರಿಗೆ ಪ್ರತಾಪ್ ಸಿಂಹ ಅವಾಜ್ ಹಾಕಿದ್ದಾರೆ. ಇದಕ್ಕೆ ವಿರುದ್ಧವಾಗಿ ಮಹಿಷ ದಸರ ಆಚರಣೆಗೆ ಅಡ್ಡಿ ಪಡಿಸಿದ ಆರೋಪದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ಸರಕಾರದ ವಿರುದ್ಧ ದಲಿತರು ಆಕ್ರೋಶ ವ್ಯಕ್ತಪಡಿಸಿ ಮಹಿಷ ದಸರ ಆಚರಣೆಗೆ ಅವಕಾಶ ಕಲ್ಪಿಸಿಲ್ಲ ಎಂದು ಆರೋಪಿಸಿ ಸಂಸದ ಪ್ರತಾಪ್ ಸಿಂಹ ವಿರುದ್ಧ ರೊಚ್ಚಿಗೆದ್ದ ದಲಿತರು ಪ್ರತಾಪ್ ಸಿಂಹ ಅವರ ಬಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ನಗರದ ಅಶೋಕಪುರಂ ಅಂಬೇಡ್ಕರ್ ಪಾಕ್೯ ನಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ರಸ್ತೆಯುದ್ದಕ್ಕೂ ಸಂಸದ ಪ್ರತಾಪ್ ಸಿಂಹ ಹಾಗೂ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.