ಕೇಂದ್ರ ಸರ್ಕಾರದ ಕೊನೆಯ ಬಜೆಟ್ ಕುರಿತು ಪ್ರತಾಪ್ ಸಿಂಹ ಖಡಕ್ ಹೇಳಿಕೆ; ಯುಪಿಎ ಸರ್ಕಾರ ಲೂಟಿ ಹೊಡೆದ ಖಜಾನೆಯನ್ನು ಸರಿಪಡಿಸಲು 4 ವರ್ಷ ಬೇಕಾಯ್ತು..

0
377

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಿದ ಕೊನೆಯ ಬಜೆಟ್ ದೇಶದ ತುಂಬೆಲ್ಲ ಹರ್ಷದ ಬಿರುಗಾಳಿ ಬೀಸಿದೆ. ಇದರಲ್ಲಿ ಮದ್ಯಮ ವರ್ಗದವರಿಗೆ ಮತ್ತು ರೈತರಿಗೆ, ತೆರಿಗೆದಾರರಿಗೆ, ಉದ್ಯೋಗಿಗಳಿಗೆ, ಶಿಕ್ಷಣ ಕ್ಷೆತ್ರಕ್ಕೆ ಸಾಕಷ್ಟು ಅನುಕೂಲಗಳನ್ನು ತಂದಿದೆ. ಇನ್ನು ಈ ಬಜೆಟ್ ಕುರಿತು ಹಲವರು ಟೀಕೆ ಮಾಡಿದ್ದು ಇದು ಚುನಾವಣಾ ಸಮೀಪಿಸುತ್ತಿದ್ದಂತೆ ಮತ ಬ್ಯಾಂಕ್ ಗಳನ್ನು ಸೆಳೆಯುವ ಬಜೆಟ್ ಆಗಿದೆ ಎಂದು ವಿರೋಧ ಪಕ್ಷಗಳು ಆಡಿಕೊಳ್ಳುತ್ತಿವೆ. ಇನ್ನು ಈ ಬಜೆಟ್ ಕುರಿತು ಮಾತನಾಡಿದ ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ಸರ್ಕಾರದ ಮಾಡಿದ ಕಳ್ಳತನವನ್ನು ಮುಚ್ಚಿ ಬಜೆಟ್ ಮಂಡಿಸಲು 4 ವರ್ಷ ಬೇಕಾಯಿತು ಎಂದಿದ್ದಾರೆ.

ಹೌದು ಪ್ರಧಾನಿ ಮೋದಿ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿಯೇ ಹಲವು ಕೊಡುಗೆಗಳನ್ನು ಕೊಡಬೇಕೆಂಬ ಉದ್ದೇಶ ಇದ್ದರೂ ಕೂಡ ಈ ಹಿಂದೆ 10 ವರ್ಷಗಳ ಕಾಲ ಯುಪಿಎ-ದವರು ಲೂಟಿ ಹೊಡೆದು ಖಜಾನೆಯನ್ನು ಬರಿದು ಮಾಡಿ ಹೋಗಿದ್ದರಿಂದಾಗಿ ಅದನ್ನು ಸರಿಪಡಿಸಲು 4 ವರ್ಷ ಬೇಕಾಯಿತು. ಈಗ ಆ ಬಜೆಟ್ ಮಂಡಿಸುವ ಅವಕಾಶ ಕೊನೆಯ ಬಜೆಟ್- ನಲ್ಲಿ ಮಂಡನೆಯಾಗಿದ್ದು, ಈ ಬಜೆಟ್ ಗೋಸ್ಕರ ನಾಲ್ಕು ವರ್ಷಗಳಿಂದ ಜನ ಕಾದಿದ್ದರು. ಅಪಾರ ನಿರೀಕ್ಷೆಯನ್ನು ಕೂಡ ಇಟ್ಟುಕೊಂಡಿದರು ಅದರಂತೆಯೇ ನರೇಂದ್ರ ಮೋದಿಯವರು ಬಜೆಟ್ ಮಂಡಿಸಿ ಎಲ್ಲ ವರ್ಗದ ಜನರಿಗೆ ಬರ್ಜರಿ ಕೊಡುಗೆ ಕೊಟ್ಟಿದ್ದಾರೆ. ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಬಜೆಟ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಖಜಾನೆಯನ್ನು ಸರಿಪಡಿಸಿ, ಜಿಎಸ್‍ಟಿ ತಂದು, ನೋಟು ನಿಷೇಧ ಮಾಡಿ, ತೆರಿಗೆಯಲ್ಲಿ ಸುಧಾರಣೆಗಳನ್ನು ತಂದು, ಬ್ಯಾಂಕ್ ಗಳಲ್ಲಿ ಎನ್ ಪಿಎ(ಕಾರ್ಯನಿರ್ವಹಿಸದ) ಮಾಡುತ್ತಿದ್ದರೋ ಅವರನ್ನು ಕೂಡ ಹಿಡಿದುಕೊಂಡು ಬಂದು 3 ಲಕ್ಷ ರೂ. ಕಕ್ಕಿಸಿ, ಇಂದು ದೇಶ ಅರ್ಥ ವ್ಯವಸ್ಥೆಯನ್ನು ಸರಿಸ್ಥಿತಿಗೆ ತಂದು ರೈತರಿಗೆ, ತೆರಿಗೆದಾರರಿಗೆ, ಮಧ್ಯಮವರ್ಗದವರಿಗೆ, ದೀನ ದಲಿತರಿಗೆ ಹೀಗೆ ಎಲ್ಲರಿಗೂ ಕೂಡ ಏಕಕಾಲಕ್ಕೆ ನ್ಯಾಯಕೊಡುವಂತಹ ಬಜೆಟ್ಟನ್ನು ಇಂದು ಮಂಡಿಸಿದ್ದಾರೆ ಅಂದ್ರು.

ಈ ಹಿಂದೆ 10 ವರ್ಷಗಳ ಕಾಲ ಅಧಿಕಾರದಲ್ಲಿದ ಯುಪಿಎ ಬರಿ ಜನರ ಭರವಸೆ ನೀಡಿ ಜನರ ಕಣ್ಣಿಗೆ ಮಣ್ಣು ಎರಚ್ಚಿವೆ ಅದನ್ನು ಸರಿ ಪಡಿಸಿ ಜನರ ಪರವಾಗಿ ಹಲವು ಯೋಜನೆಗಳನ್ನು ತಂದಿದೆ. ಈ ಹಿಂದೆ ವಿಶೇಷವಾಗಿ ಸಣ್ಣ ಹಿಡುವಳಿದಾರರಿಗೆ ಸಾಲಮನ್ನಾ ಮಾಡುತ್ತೇವೆ ಎಂದು ಮೂಗಿಗೆ ತುಪ್ಪ ಸವರಿದ ಕೆಲಸವನ್ನು ಎಲ್ಲರೂ ಮಾಡಿಕೊಂಡು ಬಂದಿದ್ದರು. ಆದ್ರೆ ಅವರ ಆದಾಯ ಯಾವತ್ತೂ ಸುಸ್ಥಿತಿಯಲ್ಲಿರಬೇಕು ಅನ್ನೋ ದೃಷ್ಟಿಯಲ್ಲಿಟ್ಟುಕೊಂಡು ಒಂದೆಡೆ ಗೊಬ್ಬರ ಬೆಲೆಯಲ್ಲಿ ಕಡಿತಗೊಳಿಸಿರುವ ಜೊತೆಗೆ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ತರುವ ಜೊತೆಗೆ 2 ಹೆಕ್ಟೇರ್ ಗಿಂತ ಕಡಿಮೆ ಹಿಡುವಳಿ ಹೊಂದಿರುವ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ಅವರ ಅಕೌಂಟ್ ಗೆ ನೇರವಾಗಿ ನೀಡುವಂತಹ ಒಂದು ಯೋಜನೆ ತಂದಿದೆ.

ಅಷ್ಟೇ ಅಲ್ಲದೆ ಬಡ ಮತ್ತು ಮಧ್ಯಮ ವರ್ಗದವರು ಕಡಿಮೆ ಬೆಲೆಯಲ್ಲಿ ಆಹಾರ ಧಾನ್ಯಗಳು ಲಭ್ಯವಾಗಲು 2018-19 ಅವಧಿಯಲ್ಲಿ ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರೂ.ಗೂ ಅಧಿಕ ಹಣವನ್ನು ಖರ್ಚು ಮಾಡಿದೆ. 2013-14ರಲ್ಲಿ ಕೇವಲ 92 ಕೋಟಿ ರೂ. ಖರ್ಚು ಮಾಡಲಾಗಿತ್ತು. ಮನರೇಗಾ ಯೋಜನೆಗಾಗಿ 60 ಸಾವಿರ ಕೋಟಿ ರೂ. ಮೀಸಲಿರಿಸಲಾಗಿದೆ. ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಎಸ್‍ಸಿ-ಎಸ್‍ಟಿ ಮತ್ತು ಓಬಿಸಿ ಕೋಟಾದಡಿ ಶೇ.10 ಮೀಸಲಾತಿ ನೀಡಲಾಗಿದೆ. ಎಂದು ಹೇಳಿದರು.

Also read: ಮೋದಿ ಸರ್ಕಾರದಿಂದ ಜನಸಾಮಾನ್ಯರಿಗೆ ಭರ್ಜರಿ ಬಂಪರ್ ಕೊಡುಗೆ, 6.5 ಲಕ್ಷ ವರಮಾನ ಬರುವವರೂ ಆದಾಯ ತೆರಿಗೆ ತೆರುವಂತಿಲ್ಲ!!