ರಾಜ್ಯದಲ್ಲಿ ರಂಗೇರುತ್ತಿರುವ ಚುನಾವಣೆ; ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಕೈ ತಪ್ಪಿದ ಟಿಕೆಟ್.!

0
244

ಕರ್ನಾಟಕ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, 17 ಕ್ಷೇತ್ರಗಳಲ್ಲಿ ಬಿಜೆಪಿ ಗುರುವಾರ 13 ಅಭ್ಯರ್ಥಿಗಳ ಪಟ್ಟಿ ಮಾತ್ರ ಬಿಡುಗಡೆ ಮಾಡಿತ್ತು. ಉಳಿದ ಕ್ಷೇತ್ರಗಳಲ್ಲಿ ಭಾರಿ ಪೈಪೋಟಿ ಇತ್ತು, ಆದರೆ ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರಿಗೆ ಪಕ್ಷದ ಟಿಕೆಟ್ ಕೈ ತಪ್ಪಿದ್ದು, ಅನರ್ಹ ಶಾಸಕ ಮಹೇಶ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದ್ದು, ರಾಣೆಬೆನ್ನೂರು ಕ್ಷೇತ್ರದಲ್ಲಿ ಅನರ್ಹ ಶಾಸಕ ಆರ್.ಶಂಕರ್ ಅವರಿಗೆ ಟಿಕೆಟ್ ಕೈ ತಪ್ಪಿದ್ದು ಬಿಜೆಪಿ ಅಭ್ಯರ್ಥಿಯಾಗಿ ಅರುಣ್‍ಕುಮಾರ್ ಪೂಜಾರ್ ಆಯ್ಕೆಯಾಗಿದ್ದಾರೆ.

Also read: ಇಂದಿರಾ ಕ್ಯಾಂಟೀನ್-ಗೆ ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರ ಹೆಸರನ್ನಿಡಲು ಮುಂದಾದ ಸರ್ಕಾರ, ಈ ನಡೆಗೆ ನೀವು ಒಪ್ಪುತ್ತೀರಾ??

ಬಿಜೆಪಿ ಅಭ್ಯರ್ಥಿಗಳ ಪಟ್ಟಿ

1 ಗೋಕಾಕ್ : ರಮೇಶ್ ಜಾರಕಿಹೊಳಿ,
2 ಅಥಣಿ: ಮಹೇಶ್ ಕುಮಟಳ್ಳಿ
3 ಯಶವಂತಪುರ : ಎಸ್. ಟಿ. ಸೋಮಶೇಖರ್
4 ಮಹಾಲಕ್ಷ್ಮೀ ಲೇಔಟ್ : ಕೆ. ಗೋಪಾಲಯ್ಯ
5 ಕೆ. ಆರ್. ಪುರ : ಬೈರತಿ ಬಸವರಾಜ
6 ಹೊಸಕೋಟೆ : ಎಂಟಿಬಿ ನಾಗರಾಜ್
7 ಹುಣಸೂರು: ಎಚ್ ವಿಶ್ವನಾಥ್
8 ಹಿರೇಕೆರೂರು : ಬಿ. ಸಿ. ಪಾಟೀಲ್
9 ಕಾಗವಾಡ : ಶ್ರೀಮಂತ ಪಾಟೀಲ್
10. ಯಲ್ಲಾಪುರ : ಶಿವರಾಂ ಹೆಬ್ಬಾರ್
11. ಕೆ. ಆರ್. ಪೇಟೆ : ನಾರಾಯಣ ಗೌಡ
12 ವಿಜಯನಗರ: ಆನಂದ್ ಸಿಂಗ್
13. ಚಿಕ್ಕಬಳ್ಳಾಪುರ: ಡಾ. ಕೆ. ಸುಧಾಕರ್
14. ರಾಣಿಬೆನ್ನೂರು: ಅರುಣ್‍ಕುಮಾರ್ ಪೂಜಾರ್

Also read: ಅಮ್ಮನಿಗಾಗಿ ವರ ಬೇಕೆಂದು ಫೇಸ್ಬುಕ್-ನಲ್ಲಿ ಮಗನ ಪೋಸ್ಟ್; ಒಂಟಿಯಾಗಿರುವ ತಂದೆ-ತಾಯಿಗಳಿಗೆ ಮಕ್ಕಳೇ ಮದುವೆ ಮಾಡುತ್ತಿರುವುದಕ್ಕೆ ನೀವೇನ್ ಅಂತಿರಾ.?

ಗುರುವಾರ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದ್ದ ಬಿಜೆಪಿ ರಾಣಿಬೆನ್ನೂರು ಕ್ಷೇತ್ರದ ಅಭ್ಯರ್ಥಿ ಘೋಷಣೆ ಬಾಕಿ ಉಳಿಸಿಕೊಂಡಿತ್ತು. ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಗಳ ಸಿದ್ದವಾಗಿದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರ ಪುತ್ರ ಕೆ.ಇ.ಕಾಂತೇಶ್, ಬಿಜೆಪಿಗೆ ಸೇರ್ಪಡೆಗೊಂಡಿದ್ದ ಮಾಜಿ ಸಚಿವ ಆರ್.ಶಂಕರ್, ಮಾಜಿ ಶಾಸಕರಾದ ಹಾವೇರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ್ ಸಜ್ಜನ್,ರಾಜ್ಯ ಬಿಜೆಪಿ ಕಾರ್ಯದರ್ಶಿ ಭಾರತಿ ಜಂಬಗಿ ಅವರುಗಳ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಕ್ಷೇತ್ರದ ಅಭ್ಯರ್ಥಿ ಆಯ್ಕೆ ದೊಡ್ದ ಸಮಸ್ಯೆಯಾಗಿ ಪರಿಣಮಿಸಿದ್ದ ಕಾರಣ ರಾಜ್ಯ ಬಿಜೆಪಿ ಘಟಕ ಸಚಿವರುಗಳಾದ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಮಾಜಿ ಸಚಿವ ಸಿ.ಎಂ.ಉದಾಸೀ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿ ನೀಡಿದ ವರದಿಯ ಅನುಸಾರ ಅರುಣ್‍ಕುಮಾರ್ ಪೂಜಾರ ಅವರಿಗೆ ಟಿಕೆಟ್ ಲಭ್ಯವಾಗಿದೆ.

Also read: ತೀವ್ರ ಕುಸಿತ ಕಾಣುತ್ತಿರುವ ದೆಹಲಿ ವಾಯು ಗುಣಮಟ್ಟ; ಬಾರ್‌ನಲ್ಲಿ ಏಳು ವಿವಿಧ ಫ್ಲೇವರ್‌ನ ಆಮ್ಲಜನಕ ಮಾರಾಟ.!

ನಿರೀಕ್ಷೆಯಂತೆ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರು ಕಣಕ್ಕಿಳಿಯಲಿದ್ದಾರೆ. ಹುಣಸೂರು ಕ್ಷೇತ್ರಕ್ಕಾಗಿ ಮಾಜಿ ಸಚಿವರುಗಳಾದ ಜಿಟಿ ದೇವೇಗೌಡ ಮತ್ತು ಸಿಪಿ ಯೋಗೇಶ್ವರ್ ತೆರೆಮರೆಯಲ್ಲಿ ನಡೆಸಿದ ಕಸರತ್ತುಗಳು ವಿಫಲವಾಗಿವೆ. ಮತ್ತೊಂದೆಡೆ ಅತೃಪ್ತ ಶಾಸಕರನ್ನು ಮುಂಬಯಿಗೆ ಕರೆದೊಯ್ದಪ ಲಾಕ್ ಮಾಡಿದ್ದ ಮಾಜಿ ಶಾಸಕ ಯೋಗೇಶ್ವರ್ ಕೂಡ ಹುಣಸೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಹೀಗಾಗಿ ಮೈಸೂರು ಹಾಗೂ ಹುಣಸೂರು ಒಕ್ಕಲಿಗ ನಾಯಕರ ಜೊತೆ ಸಭೆ ನಡೆಸಿದ್ದರು, ತಮ್ಮನ್ನು ಹುಣಸೂರು ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದರು. ಹೀಗಾಗಿ ಸ್ಥಳೀಯ ನಾಯಕರು ಯೋಗೇಶ್ವರ್ ಮತ್ತು ಹರೀಶ್ ಗೌಡ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು. ಆದರೆ ಕೊನೆಯಲ್ಲಿ ಟಿಕೆಟ್ ಕೈ ತಪ್ಪಿದೆ. ಒಟ್ಟಾರೆಯಾಗಿ ಈ ಭಾರಿ ಬಿಜೆಪಿ ಎಷ್ಟೊಂದು ಕ್ಷೇತ್ರದಲ್ಲಿ ಗೆಲ್ಲಲಿದೆ ಎನ್ನುವುದು ಕಾದು ನೋಡಬೇಕಿದೆ.