ಮೈತ್ರಿಯಲ್ಲಿ ಮಹಾ ಕಂಟಕ; ಸಂಜೆವೇಳೆಗೆ ದೋಸ್ತಿ ಸರ್ಕಾರ ಪತನ ಸಾಧ್ಯತೆ? ಸರ್ಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿಯ 7 ಹೊಸ ಸೂತ್ರಗಳು..

0
215

ಬಹುದಿನಗಳಿಂದ ಮೈತ್ರಿ ಸರ್ಕಾರದಲ್ಲಿ ಕೇಳಿ ಬರುತ್ತಿದ್ದ ಬಂಡಾಯಕ್ಕೆ ಲೋಕಸಭಾ ಚುನಾವಣೆಯ ಫಲಿತಾಂಶದಿಂದ ಮತ್ತೆ ಬಿರುಗಾಳಿ ಎದಿದ್ದು, ಮೈತ್ರಿ ಬಿಳಿಸಲು ಕಾಂಗ್ರೆಸ್ ನ 20 ಶಾಸಕರು ತಯಾರಾಗಿದ್ದಾರೆ. ಈಗಾಗಲೇ ಇವರೆಲ್ಲ ಬಿಎಸ್ ಯಡಿಯೂರಪ್ಪನವರಿಗೆ ಸಂಪರ್ಕ ಮಾಡಿದ್ದು, ಸಂಜೆವೇಳೆಗೆ ಸತ್ಯಾಂಶ ತಿಳಿಯಲಿದೆ. ಅದರಂತೆ ಕಾಂಗ್ರೆಸ್ ಅತೃಪ್ತ ಶಾಸಕರನ್ನು ಒಂದು ಗೂಡಿಸುವ ಹೊಣೆ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹೊತ್ತಿದ್ದು ಗೋವಾ ಅಥವಾ ಮುಂಬೈಯಲ್ಲಿ ಮೀಟಿಂಗ್ ನಡೆಸುವ ಸಾದ್ಯತೆ ಇದೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

Also read: ಮೈತ್ರಿಯಲ್ಲಿ ಹೊಸ ಬಾಂಬ್ ರಾಜೀನಾಮೆಗೆ ಪ್ರಜ್ವಲ್ ನಿರ್ಧಾರ; ಒಂದು ವೇಳೆ ಮತ್ತೆ ದೇವೇಗೌಡರು ಸ್ಪರ್ಧೆ ಮಾಡಿದರೆ ತುಮಕೂರಿನ ಪರಿಸ್ಥಿತಿ ಹಾಸನದಲ್ಲಿ ಬರುತ್ತಾ?

ಹೌದು ಕರ್ನಾಟಕದಲ್ಲಿ ಪಕ್ಷ 22 ಸ್ಥಾನಗಳಲ್ಲಿ ಗೆಲುವು ಸಾಧಿಸಿದಲ್ಲಿ ಅಧಿಕಾರ ತಾನಾಗಿಯೇ ಬರುತ್ತದೆ ಎಂದು ಚುನಾವಣಾ ಪೂರ್ವದಲ್ಲಿ ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್‌ ಶಾ ಅವರು ಪಕ್ಷದ ಸಭೆಯಲ್ಲಿ ಹೇಳಿದ್ದರು. ಇದೀಗ ಅವರ ಗುರಿ ಮೀರಿ 25 ಸ್ಥಾನಗಳನ್ನು ಬಿಜೆಪಿ ಗಳಿಸಿದೆ. ಹೀಗಾಗಿ, ಪಕ್ಷದ ವರಿಷ್ಠರೂ ರಾಜ್ಯದಲ್ಲಿ ಪರ್ಯಾಯ ಸರ್ಕಾರ ರಚಿಸುವ ಪ್ರಯತ್ನಕ್ಕೆ ಹಸಿರು ನಿಶಾನೆ ತೋರಬಹುದು ಎಂಬ ಮಾತು ಗಂಭೀರವಾಗಿ ಕೇಳಿಬರುತ್ತಿದೆ. ಅದರಂತೆ ಕಾಂಗ್ರೆಸ್ಸಿನ ಹಲವು ಶಾಸಕರು ತಮ್ಮ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದರು. ಇದಕ್ಕೆ ಪೂರಕವಾಗಿ ಹಲವು ಬೆಳವಣಿಗೆಗಳೂ ನಡೆದಿದ್ದವು. ಇದಕ್ಕೆ ಬಿಜೆಪಿ ಹೈಕಮಾಂಡ್‌ ತಡೆ ಒಡ್ಡಿತ್ತು. ಇದೀಗ ಚುನಾವಣೆ ಮುಗಿದಿರುವುದರಿಂದ ಮತ್ತೆ ಬಂಡಾಯದ ಶಾಸಕರು ತಯಾರಿ ನಡೆಸಿದ್ದಾರೆ.

Also read: ಮಂಡ್ಯದಲ್ಲಿ ಬಾರಿ ಅಂತರದಿಂದ ಗೆಲುವು ಸಾಧಿಸಿರುವ ಸುಮಲತಾ ಗೆದ್ದ ತಕ್ಷಣ ಮತದಾರರಿಗೆ ಏನು ಹೇಳಿದರು ಗೊತ್ತಾ??

ಇದಕ್ಕೆ ಮುಖ್ಯವಾದ ರೂವಾರಿ ಕಾಂಗ್ರೆಸ್ಸಿನ ಮಾಜಿ ಸಚಿವ ಹಾಗೂ ಶಾಸಕ ರಮೇಶ್‌ ಜಾರಕಿಹೊಳಿ. ಈಗಾಗಲೇ ಹಲವು ಬಾರಿ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಜೊತೆಗೆ ತಮ್ಮೊಂದಿಗೆ ಹಲವು ಶಾಸಕರಿದ್ದಾರೆ ಎಂದೂ ಅವರು ಪುನರುಚ್ಚರಿಸುತ್ತಲೇ ಬಂದಿದ್ದಾರೆ. ಅವರ ನೇತೃತ್ವದ ತಂಡ ಈಗ ರಾಜೀನಾಮೆಗೆ ಮುಂದಾದಲ್ಲಿ ಮತ್ತೆ ಸರ್ಕಾರದ ಮಟ್ಟದಲ್ಲಿ ಗೊಂದಲ ನಿರ್ಮಾಣವಾಗುವುದು ನಿಶ್ಚಿತವಾಗಿದೆ. ಇವೆಲ್ಲ ಬೆಳವಣಿಗೆಗಳನ್ನು ನೋಡಿದ ಮೈತ್ರಿಯ ನಾಯಕರು ಹೇಗಾದರೂ ಮಾಡಿ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಹೊಸ ಸೂತ್ರವನ್ನು ಕುಮಾರಸ್ವಾಮಿ ಹೊರಡಿಸಿದ್ದಾರೆ ಎನ್ನುವುದು ತಿಳಿದುಬಂದಿದೆ.

ಏನವು ಸಿಎಂ 7 ಸೂತ್ರಗಳು?

Also read: ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿ.ಜೆ.ಪಿ.ಗೆ ಭಾರಿ ಜಯ, ಬಿ.ಜೆ.ಪಿ.ಯ ಪ್ರಣಾಳಿಕೆಯಂತೆ ಭಾರತವನ್ನು ಇನ್ನಷ್ಟು ಎತ್ತರಕ್ಕೆ ಹೇಗೆ ತೆಗೆದುಕೊಂಡು ಹೋಗ್ತಾರೆ ಅಂತ ಓದಿ!!

ಅಪರೇಷನ್ ಕಮಲವನ್ನು ತಡೆಯುವ ಸಲುವಾಗಿ ಕುಮಾರಸ್ವಾಮಿ ಈ ಏಳು ಸೂತ್ರದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಎಂದು ತಿಳಿದುಬಂದಿದೆ.

1. ಜೆಡಿಎಸ್ ಹಾಗೂ ಕಾಂಗ್ರೆಸ್ ಉಳಿದ ನಾಲ್ಕು ವರ್ಷದ ಅಧಿಕಾರವನ್ನು ಸಮನಾಗಿ ಹಂಚಿಕೊಳ್ಳಲಿದೆ. 2 ವರ್ಷ ಜೆಡಿಎಸ್​ ಗೆ ಮುಖ್ಯಮಂತ್ರಿ ಸ್ಥಾನ, ಎರಡು ವರ್ಷ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನ.
2. ಕಾಂಗ್ರೆಸ್ ಸಚಿವರ ಸ್ಥಾನದಲ್ಲಿ ಸಿಎಂ ಹಸ್ತಕ್ಷೇಪವಿಲ್ಲ, ಇನ್ನೂ ಯಾವ ಸಚಿವರ ಖಾತೆಗೂ ತಾವು ಹಸ್ತಕ್ಷೇಪ ಮಾಡುವುದಿಲ್ಲ. ಅವರವರ ಖಾತೆಗಳಿಗೆ ಅವರವರೇ ಕಿಂಗ್ ಎಂದು ಘೋಷಿಸಲಿದ್ದಾರೆ.
3. ಹೆಚ್​.ಡಿ. ರೇವಣ್ಣ ಬೇರೆ ಇಲಾಖೆಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದರು ಇನ್ನೂ ಸರ್ಕಾರದಲ್ಲಿ ಅವರ ಆಟ ಬ್ರೇಕ್.
4. ಪ್ರಮುಖ ಅಧಿಕಾರಿಗಳ ವರ್ಗಾವಣೆ ಹಾಗೂ ಸರ್ಕಾರದ ಪ್ರಮುಖ ನಿರ್ಧಾರಗಳು ಇನ್ನು ಏಕಪಕ್ಷೀಯವಾಗಿ ಇರಲ್ಲ ಸಮನ್ವಯ ಸಮಿತಿಯಲ್ಲಿ ಒಪ್ಪಿಗೆ ಪಡೆದೆ ತೀರ್ಮಾನ.
5. ಕೈ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುಧಾನ, ಕೈ ಶಾಸಕರ ಕ್ಷೇತ್ರಗಳಲ್ಲಿ ಸೋತ ಜೆಡಿಎಸ್ ನಾಯಕರ ಹಸ್ತಕ್ಷೇಪಕ್ಕೆ ಬ್ರೇಕ್,
6. ಸರ್ಕಾರ ಮತ್ತು ನಾಯಕರ ವಿರುದ್ಧ ಯಾರೂ ಇನ್ನು ಮುಂದೆ ಬಹಿರಂಗ ಹೇಳಿಕೆ ನೀಡಬಾರದು. ಎರಡೂ ಪಕ್ಷಗಳೂ ಇದನ್ನು ಚಾಚೂ ತಪ್ಪದೆ ಪಾಲಿಸಬೇಕು.
7. ಅತೃಪ್ತರ ಮನವೊಲಿಸಿ ಪಕ್ಷದಲ್ಲೇ ಇಟ್ಟುಕೊಳ್ಳುವುದು ಹಾಗೂ ಸಾಧ್ಯವಾದರೆ ರಿವರ್ಸ್ ಆಪರೇಷನ್ ಮಾಡೋದು. ಎನ್ನುವ ಕುರಿತು ಕುಮಾರಸ್ವಾಮಿ ಸೂತ್ರವನ್ನು ಹೆಣೆದಿದ್ದಾರೆ.