ನನ್ನ ಮಗ ನಿಖಿಲ್, ಅಭಿಮನ್ಯು ಚಕ್ರವ್ಯೂಹ ಬಿಡಿಸುತ್ತಾನೆ: ಎಚ್.ಡಿ.ಕೆ; ಈಥರ ಸಿನಿಮಾದಲ್ಲಿ ಆಗೋದು ಎಲೆಕ್ಷನ್-ನಲ್ಲಿ ಆಗುತ್ತಾ??

0
322

ಲೋಕಸಭಾ ಚುನಾವಣೆಯ ರಂಗು ಮಂಡ್ಯದಲ್ಲಿ ಪ್ರತಿದಿನವೂ ಒಂದು ಸುದ್ದಿ ಮಾಡುತ್ತಿದೆ. ನಿನ್ನೆ ಮುಖ್ಯಮಂತ್ರಿ ಪುತ್ರ ನಿಖಿಲ್ ನಾಮಪತ್ರ ಸಲ್ಲಿಸಿ ಸಮಾವೇಶ ನಡೆಯುತು. ಈ ಸಮಾವೇಶದಲ್ಲಿ ಕುಮಾರಸ್ವಾಮಿಯವರು ಸಿನಿಮಾ ರೀತಿಯಲ್ಲಿ ಡೈಲಾಗ್ ಹೊಡೆದು ಮಗನ ಪ್ರಚಾರವನ್ನು ಮಾಡಿದ ಕುಮಾರಸ್ವಾಮಿ, ನಿಖಿಲ್ ಅಭಿಮನ್ಯು ನಾನು ಅರ್ಜುನ ಮಂಡ್ಯದ ರಾಜಕೀಯ ಚಕ್ರವ್ಯೂಹ ಭೇದಿಸಲು ನಾನು ಅರ್ಜುನ ಪಾತ್ರಧಾರಿಯಾಗಿದ್ದೇನೆ. ದರ್ಶನ್-ಯಶ್ ಜೋಡೆತ್ತುಗಳಲ್ಲ ನಾನು ಡಿಕೆಸಿ ಜೋಡೆತ್ತು ಎಂದು ಬಾರಿ ಉದ್ವೇಗದಿಂದ ಹೇಳಿಕೆ ನೀಡಿದ್ದಾರೆ.

Also read: ಚುನಾವಣೆ ಭದ್ರತೆಗಾಗಿ ಬಂದ ಯೋಧರಿಗೆ ಬೆಂಗಳೂರಿಗರು ಹೂ ಮಳೆ ಸುರಿಸಿ ಸ್ವಾಗತ ಕೋರಿ ದೇಶ ಪ್ರೇಮ ಮೆರೆದಿರುವುದು ಎಲ್ಲರಿಗೂ ಮಾದರಿಯಾಗಿದೆ..

ಅರ್ಜುನ ಪಾತ್ರದಲ್ಲಿ ಕುಮಾರಸ್ವಾಮಿ?

ಹೌದು ಮಂಡ್ಯ ಕ್ಷೆತ್ರದಲ್ಲಿ ಮೈತ್ರಿ ಸರ್ಕಾರದ ಕುಸು ನಿಖಿಲ್ ಸ್ಪರ್ಧೆ ಬಾರಿ ಕುಲಾಹಲಕ್ಕೆ ಎಡೆಮಾಡಿದ್ದು. ಅವರು ಈ ಹಿಂದೆ ಕುರುಕ್ಷೆತ್ರ ಸಿನಿಮಾದಲ್ಲಿ ಪಾತ್ರ ಮಾಡಿದ್ದಾರೆ. ಅದನ್ನೇ ಎತ್ತಿಕೊಂಡು ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿಮನ್ಯು ಪಾತ್ರ ಮಾಡಿರುವ ನಿಖಿಲ್, ಮಂಡ್ಯದ ಚಕ್ರವ್ಯೂಹವನ್ನು ಭೇದಿಸಲಾರ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅಂದು ಚಕ್ರವ್ಯೂಹ ಭೇದಿಸಲು ಹೊರಟ ಅಭಿಮನ್ಯು ಜೊತೆ ಅವರಪ್ಪ ಇರಲಿಲ್ಲ, ಇಂದು ಈ ಅಭಿಮನ್ಯು ಜೊತೆ ಅಪ್ಪ ಆದ ನಾನು ಇದ್ದೇನೆ ಮಂಡ್ಯದ ರಾಜಕೀಯ ಚಕ್ರವ್ಯೂಹ ಭೇದಿಸಲು ನಾನು ಅರ್ಜುನ ಪಾತ್ರಧಾರಿಯಾಗಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Also read: ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಸರ್ಕಾರದ ದುರುಪಯೋಗ; ಪಕ್ಷೇತರ ಅಭ್ಯರ್ಥಿ ಸುಮಲತಾ ಚುನಾವಣಾ ಆಯೋಗಕ್ಕೆ ದೂರು..

ಅದೇ ಜೋಷಿನಲ್ಲಿ ಮಾತು ಮುಂದುವರಿಸಿದ ಕುಮಾರಸ್ವಾಮಿ ಮಂಡ್ಯಕ್ಕೆ ಒಟ್ಟು 8750 ಕೋಟಿ ಅನುದಾನವನ್ನು ಈಗಾಗಲೇ ನೀಡಿದ್ದೇನೆ, ಆದರೆ ಬಿಜೆಪಿ ಮುಖಂಡರು ನಾನು ಮಂಡ್ಯ ಅಭಿವೃದ್ಧಿಗೆ ನೀಡಿದ ಕಾರ್ಯಕ್ರಮಗಳನ್ನು ಟೀಕಿಸಿದ್ದಾರೆ, ಮಂಡ್ಯದ ಬಜೆಟ್, ಮಂಡ್ಯದ ಮುಖ್ಯಮಂತ್ರಿ ಎಂದು ವ್ಯಂಗ್ಯ ಮಾಡಿದ್ದಾರೆ, ಅಂತಹವರ ಬೆಂಬಲ ಪಡೆದಿರುವ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡುತ್ತೀರಾ ಎಂದು ಸೇರಿದ್ದ ಭಾರಿ ಜನಸ್ತೋಮವನ್ನು ಕುಮಾರಸ್ವಾಮಿ ಪ್ರಶ್ನಿಸಿ, ಮಂಡ್ಯ ಜನರು ಜೆಡಿಎಸ್ ಮೇಲೆ ಪ್ರೀತಿಯಿಂದ ಎಂಟು ಕ್ಷೇತ್ರದಲ್ಲಿ ಗೆಲ್ಲಿಸಿದ್ದಾರೆ. ಅವರ ಮೇಲಿರುವ ಗೌರವದಿಂದಲೇ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯಕ್ಕೆ ಅಭ್ಯರ್ಥಿ ಮಾಡಿದ್ದೇನೆ, ಮಂಡ್ಯದ ಅಂಗಳಕ್ಕೆ ನಿಖಿಲ್ ಎಂಬ ಸಸಿಯನ್ನು ಹಾಕಿದ್ದೇನೆ, ಅದು ಬೆರೆದು ಬಡವರಿಗೆ ನೆರಳು ನೀಡಲಿದೆ. ಅದನ್ನು ಮರವಾಗಿ ಬೆಳೆಸುವ ಜವಾಬ್ದಾರಿ ನಿಮ್ಮದು ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಡಿಕೆಶಿ-ನಾನು ನಿಜವಾದ ಜೋಡೆತ್ತುಗಳು

Also read: ಜೋಡಿತುಗಳಲ್ಲ, ಕಳ್ಳೆತ್ತುಗಳು ದರ್ಶನ್-ಯಶ್ ವಿರುದ್ಧ ಸಿಎಂ ವಾಗ್ದಾಳಿ; ಈ ರೀತಿ ಹೇಳಿಕೆಗಳು ಸಿಎಂ ಹುದ್ದೆಯ ಘನತೆ ಕಳೆಯುತ್ತಾ??

ಸುಮಲತಾ ಪರ ಪ್ರಚಾರ ಮಾಡಿದ್ದ ಯಶ್-ದರ್ಶನ್ ‘ನಾವಿಬ್ಬರೂ ಜೋಡೆತ್ತು’ ಅಂದಿದ್ದ ಹೇಳಿಕೆಗೆ ಟಾಂಗ್ ನೀಡಿದ ಕುಮಾರಸ್ವಾಮಿ, ‘ನಾನು, ಡಿಕೆ ಶಿವಕುಮಾರ್ ನಿಜವಾದ ಜೋಡೆತ್ತು, ಅವರು ಕಳೆತ್ತುಗಳು, ಅರ್ಧರಾತ್ರಿಯಲ್ಲಿ ಬಂದು ರೈತನ ಬೆಳೆ ತಿಂದು ನಾಶ ಮಾಡುವ ಜೋಡೆತ್ತುಗಳು, ನಾವು ರಾಜ್ಯದ ಸಮಗ್ರ ಅಭಿವೃದ್ಧಿ ಮಾಡುವ ಜೋಡೆತ್ತುಗಳು’ ಎಂದು ಹೇಳಿದ ಕುಮಾರಸ್ವಾಮಿ ಮಾತಿಗೆ ಎಲ್ಲರು ಡಿಕೆಸಿ ಮುಖವನ್ನು ನೋಡುತ್ತಿದರು. ಡಿಕೆಶಿ ಸಹ ನಗುತ್ತಾ ತಮ್ಮ ಸಹಮತ ವ್ಯಕ್ತಪಡಿಸಿದರು.

ನಿಖಿಲ್ ಗೆದ್ದರೆ ಅಂಬರೀಶ್ ಆತ್ಮಕ್ಕೆ ಶಾಂತಿ

Also read: ಮೋದಿ ಈ ಬಾರಿ ಗೆದ್ದರೆ, ಬಿ.ಜೆ.ಪಿ. ಶಾಶ್ವತವಾಗಿ ಅಧಿಕಾರದಲ್ಲಿರುತ್ತೆ: ಕೇಜ್ರಿವಾಲ್; ಕೇಜ್ರಿವಾಲ್ ಗೆ ನಿಮ್ಮ ಬೆಂಬಲ ಇದ್ಯಾ?

ಇದೆ ಸಮಾರಂಭದಲ್ಲಿ ಮಾತನಾಡಿದ ಡಿಕೆಸಿ, ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗಬೇಕು ಎಂದರೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಅವರು ಮಂಡ್ಯ ಮತದಾರರಿಗೆ ಕರೆ ನೀಡಿ ನಿಖಿಲ್ ಎಲ್ಲಿಂದ ಬೇಕಾದರೂ ಸ್ಪರ್ಧಿಸಬಹುದಾಗಿತ್ತು, ಆದರೆ ನಮ್ಮ ಪ್ರತಿನಿಧಿಯಾಗಿ ಅವರು ಸಂಸತ್‌ಗೆ ಹೋಗಬೇಕು ಎಂದು ಮಂಡ್ಯದ ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ. ಅಂಬರೀಶ್ ಅಣ್ಣ ನನ್ನ ಸ್ನೇಹಿತರು, ಕುಮಾರಸ್ವಾಮಿ ಸರ್ಕಾರ ರಚಿಸಿದಾಗ ಅವರು ಬದುಕಿದ್ದರು, ಅವರಿಗೆ ಅಂಬರೀಶಣ್ಣ ಆಶೀರ್ವಾದ ಮಾಡಿದ್ದರು, ಕುಮಾರಸ್ವಾಮಿ ಸರ್ಕಾರ ಕರ್ನಾಟಕಕ್ಕೆ ಬೇಕು ಎಂದು ಹೇಳಿದ್ದು ನಿಮಗೆ ನೆನಪಿಲ್ಲವೇ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದರು.