ಎರಡನೇ ಬಾರಿಗೆ ಪ್ರಧಾನಿಯಾದ ಮೋದಿಯವರ ಗೆಲುವನ್ನು ಸಾರ್ವಜನಿಕರ ಶೂ ಪಾಲಿಷ್ ಮಾಡಿ ಸಂಭ್ರಮಿಸಿದ ಬಿಜೆಪಿಗರು..

0
236

ನರೇಂದ್ರ ಮೋದಿಯವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮೋದಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ವಿಭಿನ್ನ ರೀತಿಯಲ್ಲಿ ಸಂಭ್ರಮವನ್ನು ಆಚರಣೆ ಮಾಡುತ್ತಿದ್ದು ಇದೇನಾ ಬಿಜೆಪಿಯ ನೀಜ ಸೇವೆ ಎನ್ನುವ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಗುರುವಾರ ಮೋದಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಮೊದಲು ರ್ಯಾಡಿಸನ್ ಚೌಕ್ ನಲ್ಲಿ ಬಿಜೆಪಿಯ ಕಾರ್ಪೋರೇಟರ್ಸ್ ಸೇರಿದಂತೆ ಹಲವು ಕಾರ್ಯಕರ್ತರು ಸಾರ್ವಜನಿಕರ ಶೂ ಪಾಲಿಷ್ ಮಾಡಿದ್ದಾರೆ ಸಂಭ್ರಮಾಚರಣೆ ಮಾಡಿದ್ದಾರೆ.

Also read: ಚುನಾವಣೆಯಲ್ಲಿ ಗೆಲುವು ಸಾಧಿಸಿದ ಈ ಸಂಸದ ತಮಗೆ ಹೂವಿನ ಬುಕ್ಕೆ, ಸಿಹಿತಿಂಡಿ ಬದಲು ನೋಟ್ಸ್ ಬುಕ್ಸ್ ನೀಡಿ ಎಂದು ಮನವಿ ಮಾಡಿದ್ದಾರೆ..

ಹೌದು ಚೌಕಿದಾರ್ ತೋರಿಸಿದ ಮಾರ್ಗದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕರ್ತರು ದೇಶದಲ್ಲಿ ಯಾರು ಮಾಡದ ರೀತಿಯಲ್ಲಿ ತಮ್ಮ ಕುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಅದಕ್ಕೆ ಸಾಕ್ಷಿಯಂತೆ ರ್ಯಾಡಿಸನ್ ಚೌಕ್ ನಲ್ಲಿ ಸಾರ್ವಜನಿಕರ ಶೂ ಪಾಲಿಷ್ ಮಾಡಿದ. ಕಾರ್ಪೋರೇಟರ್ ಸಂಜಯ್ ಕಠಾರಿಯಾ ನೇತೃತ್ವದ ತಂಡ ಈ ರೀತಿ ಜನ ಸೇವೆ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದ್ದು ಎಲ್ಲರ ಗಮನ ಸೆಳೆದಿದೆ. ಅಷ್ಟೇ ಅಲ್ಲದೆ ಭರ್ಜರಿ ಜಯಗಳಿಸಿ ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಮೋದಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಉಚಿತ ಬಸ್, ಆಟೋ ಸೇವೆ, ಉಚಿತ ಊಟದ ವ್ಯವಸ್ಥೆ ಹೀಗೆ ವಿಧವಿಧವಾಗಿ ಸಂಭ್ರಮವನ್ನು ಆಚರಿಸುತ್ತಿದ್ದಾರೆ.

Also read: ಗುಡಿಸಲ್ಲಿ ಸನ್ಯಾಸಿ ಜೀವನ ಸೈಕಲ್ ಮೇಲೆ ಚುನಾವಣೆ ಪ್ರಚಾರ; ಈಗ ಮೋದಿ ಸರ್ಕಾರದ ಮಂತ್ರಿಯಾದ ಸರಳ ವ್ಯಕ್ತಿಯ ರಾಜಕೀಯ ಬೆಳೆವಣಿಗೆಗೆ ಏನು ಕಾರಣ ಗೊತ್ತಾ??

ಈ ವೇಳೆ ವಿಭಿನ್ನವಾಗಿ ಬಿಜೆಪಿ ಗೆಲುವನ್ನು ಸಂಭ್ರಮಿಸಿದ ಕಠಾರಿಯಾ ಅವರು, ಮಾತನಾಡಿ ಮೋದಿಯವರು ಹೇಳಿದ ಮಾತಿನಂತೆ ನಾವು ನಡೆದುಕೊಳ್ಳುತ್ತಿದೇವೆ. ಈ ಹಿಂದೆ ಮೋದಿಯವರು ಪ್ರತಿಯೊಂದು ಕೆಲಸವನ್ನು ಸಮಾನವಾಗಿ ನೋಡಬೇಕು ಎಂದು ಮೋದಿ ಅವರು ಹೇಳಿದ್ದಾರೆ. ಸ್ವತಃ ಅವರೇ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛತೆ ಕಾರ್ಯವನ್ನು ಮಾಡಿದ್ದಾರೆ. ಹೀಗಾಗಿ ನಾವು ಮೋದಿ ಅವರ ಹಾದಿಯಲ್ಲೇ ಸಾಗುತ್ತಿದ್ದೇವೆ. ನಾವು ಈ ರೀತಿ ಕೆಲಸ ಮಾಡುವ ಮೂಲಕ ಎಲ್ಲರೂ ಒಂದೇ ಎನ್ನುವ ಸಂದೇಶ ಸಾರುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದೆ ರೀತಿಯಲ್ಲಿ ಹಲವರು ತಾವು ಮಾಡುವ ಕೆಲಸವನ್ನು ಒಂದು ದಿನ ಉಚಿತವಾಗಿ ಜನರಿಗೆ ಸೇವೆ ಎಂದು ಮಾಡಿ ಮೋದಿಯವರ ಗೆಲುವನ್ನು ಸಭ್ರಮಿಸಿದ್ದಾರೆ. ಅದರಂತೆ ಬಾಗಲಕೋಟೆಯ ಚೌರಿಕನೊಬ್ಬ ಉಚಿತವಾಗಿ ಕಟಿಗ್ ಸೇವಿಂಗ್ ಮಾಡಿ ಆಚರಣೆ ಮಾಡಿದರೆ. ಪಶ್ಚಿಮ ಬಂಗಾಳದ ಚಾಯ್‍ವಾಲಾ ಒಬ್ಬರು ಗುರುವಾರ ಉಚಿತವಾಗಿ ಟೀ ಹಂಚಿದ್ದಾರೆ. ನನ್ನ ನಾಯಕ ಪ್ರಧಾನಿಯಾಗುತ್ತಿದ್ದಾರೆ ಎನ್ನುವ ಕಾರಣಕ್ಕೆ ಈ ರೀತಿ ಉಚಿತ ಟೀ ಹಂಚಿದ್ದೇನೆ ಎಂದಿದ್ದಾರೆ.

Also read: ಮೋದಿ ಸರ್ಕಾರದಲ್ಲಿ ಕರ್ನಾಟಕದ ಮೂವರಿಗೆ ಮಂತ್ರಿ ಸ್ಥಾನ; ಯಾರಿವರು ಅದೃಷ್ಟವಂತರು ಇಲ್ಲಿದೆ ನೋಡಿ ಮಾಹಿತಿ..

ಹಾಗೆಯೇ ಇನ್ನೂ ಸೂರತ್ ಮೂಲದ ಐಸ್ ಕ್ರೀಂ ವ್ಯಾಪಾರಿಯೊಬ್ಬರು `ಮೋದಿ ಸೀತಾಫಲ್ ಕುಲ್ಫಿ’ ಹೆಸರಿನ ಐಸ್ ಕ್ರೀಂ ಪರಿಚಯಿಸಿದ್ದಾರೆ. ಈ ಕುಲ್ಫಿಯ ವಿಶೇಷತೆ ಏನೆಂದರೆ ಮೋದಿ ಅವರ ಮೂಖದ ಆಕಾರದಲ್ಲಿ ಈ ಕುಲ್ಫಿ ತಯಾರಿಸಲಾಗಿದ್ದು, ಸುಮಾರು 200 ಮೋದಿ ಸೀತಾಫಲ್ ಕುಲ್ಫಿ ತಯಾರಿಸಲು 24 ಗಂಟೆ ಸಮಯ ಬೇಕಾಯ್ತು ಎಂದು ವ್ಯಾಪಾರಿ ತಿಳಿಸಿದ್ದಾರೆ. ಹೀಗೆ ದೇಶದ ಹಲವು ಕಡೆಯಲ್ಲಿ ಸಂಭ್ರಮಿಸಿದ್ದು ಹಾವೇರಿಯ ನಗರದಲ್ಲಿ ಕೊಳಕು ನಗರಗಳನ್ನು ನೂರಾರು ಬಿಜೆಪಿ ಕಾರ್ಯಕರ್ತರು ಸೇರಿ ಸ್ವಚಗೊಳಿಸಿ ಸಂಭ್ರಮಿಸಿದ್ದಾರೆ.