ನರೇಂದ್ರ ಮೋದಿ ಪ್ರಣಾಳಿಕೆ ಬಿಡುಗಡೆ; ಮತ್ತೆ ರಾಮಮಂದಿರದ ಭರವಸೆ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ 1 ಲಕ್ಷ ರೂ ಸಾಲ, ಸೇರಿದಂತೆ ಪ್ರಣಾಳಿಕೆಯ ಹೈಲೈಟ್ಸ್​ ಇಲ್ಲಿದೆ ನೋಡಿ..

0
311

ದೇಶದಲ್ಲಿ ಮೋದಿ ಅಲೆ ಎದಿದ್ದು ಐದು ವರ್ಷ ಮೋದಿ ಏನು ಮಾಡಿದರು ಎನ್ನುವುದು ಚುನಾವಣೆಗೆ ಪ್ಲಸ್ ಪಾಯಿಂಟ್ ಆಗಿದ್ದು, ಈಗ ಮತ್ತೆ ಚುನಾವಣೆ ಹಿನ್ನೆಲೆಯಲ್ಲಿ ‘ಸಂಕಲ್ಪ ಪತ್ರ’ ಎಂಬ ಹೆಸರಿನಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಭಾರತೀಯ ಸಂವಿಧಾನದ 370ನೇ ವಿಧಿಯನ್ನು ರದ್ದು ಪಡಿಸಲಾಗುವುದು, ರಾಮ ಮಂದಿರ ನಿರ್ಮಾಣದ ಭರವಸೆ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ 1 ಲಕ್ಷ ರೂ ಸಾಲ| ಗ್ರಾಮೀಣ ವಿಕಾಸಕ್ಕೆ 25 ಲಕ್ಷ ಕೋಟಿ ರೂ.ಮೀಸಲು ಸೇರಿದಂತೆ ಹಲವು ಮಹತ್ವದ ಭರವಸೆಗಳನ್ನು ಹೊತ್ತು ಪ್ರಧಾನಿ ನರೇಂದ್ರ ಮೋದಿ, ಅಮಿಯತ್ ಶಾ| ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.

ಏನಿದೆ ಬಿಜೆಪಿ ಪ್ರಣಾಳಿಕೆಯಲ್ಲಿ?

Also read: ಪ್ರಧಾನಿ ಮೋದಿಗೆ ಮತ್ತೊಂದು ಪ್ರಶಸ್ತಿ; ಯುಎಇ ಅತ್ಯುನ್ನತ ನಾಗರಿಕ ಪ್ರಶಸ್ತಿ, ಯುಎಇ ಅಧ್ಯಕ್ಷ ಝಾಯದ್ ಮೆಡಲ್’ ಘೋಷಣೆ..

ಅಭಿವೃದ್ಧಿ ಮತ್ತು ರಾಷ್ಟ್ರೀಯ ಭದ್ರತೆಯನ್ನೇ ಮೂಲಮಂತ್ರವನ್ನಾಗಿಸಿಕೊಂಡು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಚುನಾವಣೆಯ ದೃಷ್ಟಿಯಿಂದ ಬಿಜೆಪಿ ಮತದಾರನಿಗೆ ಭರಪೂರ ಭರವಸೆಯನ್ನೇನೂ ನೀಡಿಲ್ಲ. ಆದರೆ ರಾಷ್ಟ್ರದ ಭದ್ರತೆಗೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದೆ. ಕಾಂಗ್ರೆಸ್ ಪಕ್ಷವು ಏಪ್ರಿಲ್ 2 ರಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಕಡುಬಡವರಿಗೆ ತಿಂಗಳು 6000 ರೂ.ಗಳನ್ನು ನೀಡುವ ಮೂಲಕ ಬಡತನ ನಿರ್ಮೂಲನೆ ಮಾಡುವ ‘ನ್ಯಾಯ್’ ಯೋಜನೆಯನ್ನು ತಾನು ಅಧಿಕಾರಕ್ಕೆ ಬಂದರೆ ಜಾರಿಗೆ ತರುವುದಾಗಿ ಅದು ಹೇಳಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿ ಯಾವ ಯೋಜನೆಯನ್ನೂ ಘೋಷಿಸಿಲ್ಲ.

45 ಪುಟಗಳ ‘ಸಂಕಲ್ಪ ಪತ್ರ’ ಹೆಸರಿನ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಭದ್ರತೆಗೆ ಮೊದಲ ಸ್ಥಾನವನ್ನು ನೀಡಲಾಗಿದೆ. 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ. ರಾಮ ಮಂದಿರವನ್ನು ನಿರ್ಮಾಣ ಮಾಡುತ್ತೇವೆ ಎಂದು ಬಿಜೆಪಿ ತಿಳಿಸಿದೆ. ಭಯೋತ್ಪಾದನೆ ನಿರ್ಮೂಲನೆ ನಮ್ಮ ಪ್ರಮುಖ ಗುರಿಯಾಗಿದ್ದು, ಸ್ವದೇಶಿ ಶಸ್ತ್ರಾಸ್ತ್ರಗಳ ನಿರ್ಮಾಣಕ್ಕೆ ಒತ್ತು ನೀಡುತ್ತೇವೆ. ಏಕರೂಪದ ನಾಗರಿಕ ಸಂಹಿತೆ, ನಾಗರಿಕತ್ವ ತಿದ್ದುಪಡಿ ಮಸೂದೆ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ 2022ಕ್ಕೆ ಒಂದು ಕುಟುಂಬಕ್ಕೆ ಒಂದು ಮನೆಯನ್ನು ನಿರ್ಮಿಸಿ ಕೊಡುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಿದೆ.

Also read: ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಮುಂದಿದ್ದಾರೆ; ಚುನಾವಣೆ ಮುಗಿಯುವ ಒಳಗೆ ರಾಹುಲ್ ಗಾಂಧಿ ಮುಂದೆ ಬರಲು ಸಾಧ್ಯವಾ?

ಪ್ರಣಾಳಿಕೆಯ ಹೈಲೈಟ್ಸ್​-ನಲ್ಲಿ ಏನಿದೆ?.. ಏನಿಲ್ಲ ?

1. ಸಂವಿಧಾನದ ವಿಧಿ 370, 35 A, ರದ್ದುಗೊಳಿಸುವ ಭರವಸೆ. ಕಾಶ್ಮೀರಕ್ಕೆ ವಿಶೇಷ ಸವಲತ್ತುಕೊಡುವ ವಿಧಿ ರದ್ದು.
2. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ.
3. ರೈತರಿಗೆ ಶೂನ್ಯ ಬಡ್ಡಿದರದಲ್ಲಿ 1 ಲಕ್ಷ ರೂ. ವರೆಗೆ ಸಾಲ.
4. ಕಿಸಾನ್​ ಕ್ರೆಡಿಟ್​ ಕಾರ್ಡ್​ ಮೂಲಕ ಕೃಷಿ ಸಾಲ.
5. ಸಣ್ಣ ರೈತರಿಗೆ ಪಿಂಚಣಿ ಯೋಜನೆ.
7. 60 ವರ್ಷ ಮೀರಿದ ರೈತರಿಗೆ ಪಿಂಚಣಿ.
8. ಏಕರೂಪದ ನಾಗರಿಕ ಸಂಹಿತೆ ಜಾರಿಗೆ ಕ್ರಮ.
9. 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ.
10. ಕಿಸಾನ್​ ಸಮ್ಮಾನ್​ ನಿಧಿ ಯೋಜನೆ.
11. ಭೂ ದಾಖಲೆಗಳ ಡಿಜಿಟಲೀಕರಣ.
12. ಮೀನುಗಾರರಿಗೆ ಮತ್ಸ್ಯ ಸಂಪದ ಯೋಜನೆ.
13. ಉನ್ನತ ಶಿಕ್ಷಣಕ್ಕೆ 1 ಲಕ್ಷ ಕೋ. ಅನುದಾನ.
14. ವೃತ್ತಿ ಶಿಕ್ಷಣದಲ್ಲಿ ಶೇ.50ರಷ್ಟು ಸೀಟು ಹೆಚ್ಚಳ.
15. ದೇಶದ ಪ್ರತಿ ಕುಟುಂಬಕ್ಕೂ ಮನೆ ಖಾತ್ರಿ.
16. ಎಲ್ಲ ಬಡ ಕುಟುಂಬಕ್ಕೂ ಎಲ್​ಪಿಜಿ ಸೌಲಭ್ಯ.
17. ದೇಶದ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ.
18. ಎಲ್ಲ ನಾಗರಿಕರಿಗೂ ಬ್ಯಾಂಕ್​ ಖಾತೆ ಓಪನ್.
19. ಪ್ರತಿ ಮನೆಯಲ್ಲೂ ಶೌಚಾಲಯ ವ್ಯವಸ್ಥೆ.
20. ಎಲ್ಲರಿಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯ.
21. ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ.
22. ಜಿಎಸ್​ಟಿ ವ್ಯವಸ್ಥೆಯ ಸರಳೀಕರಣ.
23. ರಕ್ಷಣಾ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬಿ.
24. ಕೃಷಿ, ಗ್ರಾಮೀಣ ಅಭಿವೃದ್ಧಿಗಾಗಿ 25 ಲಕ್ಷ ಕೋಟಿ ಅನುದಾನ.
25. ರಾಷ್ಟ್ರೀಯ ವ್ಯಾಪಾರಿ ಆಯೋಗ ರಚನೆ.
26. 75 ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ.
27. 5 ಕಿ.ಮೀ. ಅಂತರದಲ್ಲಿ ಬ್ಯಾಂಕಿಂಗ್​ ವ್ಯವಸ್ಥೆ.
28. ನ್ಯಾಯಾಲಯಗಳ ಸಂಪೂರ್ಣ ಡಿಜಿಟಲೀಕರಣ.
30. ಡಿಜಿಟಲ್​ ಬ್ಯಾಂಕಿಂಗ್​ಗೆ ಉತ್ತೇಜನ.