ಕಪ್ಪು ದ್ರಾಕ್ಷಿ ತಿನ್ನುವುದರಿಂದ ಹೀಗೆಲ್ಲ ಆಗುತ್ತೆ ಅಂತ ಗೊತ್ತಿದ್ರೆ ನಾನು ಯಾವಾಗ್ಲೂ ಸೇವಸ್ತಿದ್ದೆ ಮತ್ತೆ ನೀವು…?

0
2802

ಹೌದು ಈ ಕಪ್ಪು ದ್ರಾಕ್ಷಿ ನಮ್ಮ ಆರೋಗ್ಯಕ್ಕೆ ತುಂಬ ಸಹಾಯವಾಗುತ್ತೆ ಮತ್ತು ಇದರಿಂದ ನಮಗೆ ತುಂಬ ಲಾಭ ಇದೆ ಗೊತ್ತಾ.
ವೈನ್ ಮಾಡುವುದಕ್ಕೆ ಹೆಚ್ಚಾಗಿ ಬಳಸುವ ಈ ದ್ರಾಕ್ಷಿ ಹಣ್ಣು ಎಲ್ಲರು ಇಷ್ಟ ಪಡುವಂತಹ ಹಣ್ಣಾಗಿದೆ ಮತ್ತು ಇದು ಕೊಂಚ ಹುಳಿಯಾಗಿರುತ್ತೆ. ಮತ್ತು ಹಣ್ಣು ತಿನ್ನಲು ತುಂಬ ರುಚಿಯಾಗಿರುತ್ತೆ. ಮತ್ತು ಇದರಲ್ಲಿರುವ ಬೀಜಗಳು ಮಾನವನ ಆರೋಗ್ಯಕ್ಕೆ ತುಂಬ ಸಕಾರಿಯಾಗಲಿವೆ.

source:avianinfluenza.org.vn

ನೀವು ಕಪ್ಪು ದ್ರಾಕ್ಷಿ ತಿನ್ನುವುದರಿಂದ ಆಗುವ ಲಾಭಗಳು ಇಲ್ಲಿವೆ ನೋಡಿ.

ಆಂಟಿಆಕ್ಸಿಡೆಂಟ್ಸ್:
ದ್ರಾಕ್ಷಿ ಬೀಜದ ಸಾರದಲ್ಲಿ ಆಂಟಿಆಕ್ಸಿಡೆಂಟ್ಸ್ ಗಳು ಹೇರಳವಾಗಿದ್ದು, ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಜೊತೆಗೆ ನಿಮ್ಮ ಜೀವಕೋಶಗಳಿಗೆ ಆಕ್ಸಿಡೇಟಿವ್ ಒತ್ತಡದಿಂದ ರಕ್ಷಣೆ ನೀಡುತ್ತದೆ. ದೇಹದಲ್ಲಿರುವ ವಿಷಕಾರಕ ಮತ್ತು ಹಾನಿಕಾರಕ ಅಂಶಗಳನ್ನು ಹೊರಗೆ ಹಾಕಲು ನೆರವಾಗುತ್ತದೆ.

ಮುಪ್ಪು ತಡೆಗಟ್ಟುತ್ತದೆ:
ಆಂಟಿಆಕ್ಸಿಡೆಂಟ್ ಹೇರಳವಾಗಿರುವುದರಿಂದ ದ್ರಾಕ್ಷಿ ಬೀಜದ ಸಾರವು ವಯಸ್ಸಾಗುವ ಲಕ್ಷಣಗಳನ್ನು ತಡೆಯಲು ಸಹಾಯ ಮಾಡುತ್ತದೆ. ಚರ್ಮದ ಅಕಾಲಿಕೆ ನೆರಿಗೆ ತಡೆಯುತ್ತದೆ. ಈ ಮೂಲಕ ಚರ್ಮವು ಹೊಳಪಿನಿಂದ ಕೂಡುವಂತೆ ಮಾಡುತ್ತದೆ.

ಅಲರ್ಜಿ ತಡೆಗಟ್ಟುತ್ತದೆ:
ದ್ರಾಕ್ಷಿ ಬೀಜಗಳ ಸಾರವು ಪಿಸ್ಟಾಮಿನ್ ಉತ್ಪಾದನೆಯನ್ನು ಕಡಿಮೆ ಮಾಡಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರಿಂದ ಅಲರ್ಜಿಗಳು ದೇಹವನ್ನು ಬಾಸದಂತೆ ರಕ್ಷಣೆ ನೀಡುತ್ತದೆ.

ಹೃದಯ ಮತ್ತು ಮಧುಮೇಹಕ್ಕೆ:
ಈ ದ್ರಾಕ್ಷಿ ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸಿ ಗ್ಲೂಕೋಸ್ ಮತ್ತು ಇನ್ಸುಲಿನ್ ಅಂಶವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಇದು ಹೃದಯಕ್ಕೆ ಅತಿ ಅವಶ್ಯಕ. ಮತ್ತು ಮಧುಮೇಹವನ್ನು ತಡೆಗಟ್ಟುವಲ್ಲೂ ಇದು ಸಹಕಾರಿ.

ಸೋಂಕು ಬರದಂತೆ ತಡೆಗಟ್ಟುತ್ತದೆ:
ಕಪ್ಪು ದ್ರಾಕ್ಷಿಯಲ್ಲಿರುವ ಅತಿ ಹೆಚ್ಚು ವಿಟಮಿನ್, ಬಿ ಕಾಂಪ್ಲೆಕ್ಸ್, ತಾಮ್ರಾಂಶ, ಕಬ್ಬಿಣಾಂಶ ಮತ್ತು ಸೆಲೆನಿಯಂ ಅಂಶಗಳುರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ರಕ್ತಕ್ಕೆ ಕಬ್ಬಿಣಾಂಶ ನೀಡಿ ದೇಹಕ್ಕೆ ಯಾವುದೇ ಸೋಂಕು ತಗುಲದಂತೆ ತಡೆಯುತ್ತದೆ.

 

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840