13,000 ಕೋಟಿ ಕಪ್ಪುಹಣ ಘೋಷಿಸಿಕೊಂಡ ಗುಜರಾತ್ ಉದ್ಯಮಿ: ಈ ರೀತಿ ಘಟನೆ ದೇಶದಲ್ಲೇ ಮೊದಲು!

0
543

ನಾಟಕೀಯ ತಿರುವು ಕಂಡ ಅತ್ಯಂತದ ಅಪರೂಪದಲ್ಲೇ ಅಪರೂಪದ ಘಟನೆಯಲ್ಲಿ ಗುಜರಾತ್‌ನ ಉದ್ಯಮಿಯೊಬ್ಬರು ತೆರಿಗೆ ಪಾವತಿಸದೇ ಶೇಖರಿಸಿಟ್ಟುಕೊಂಡಿದ್ದ ಸುಮಾರು 13 ಸಾವಿರ ಕೋಟಿ ರೂ.ವನ್ನು ಕಪ್ಪುಹಣ ಎಂದು ಒಪ್ಪಿಕೊಂಡಿದ್ದಾರೆ. ದೇಶದ ಇತಿಹಾಸದಲ್ಲೇ ವ್ಯಕ್ತಿಯೊಬ್ಬರು ಕಪ್ಪುಹಣ ಎಂದು ಘೋಷಿಸಿಕೊಂಡ ಅತೀ ದೊಡ್ಡ ಮೊತ್ತ ಇದಾಗಿದೆ.

ಉದ್ಯಮಿ ಮಹೇಶ್ ಶಾ ಅವರ ಚಾರ್ಟೆಡ್ ಅಕೌಂಟೆಂಟ್ ಶುಕ್ರವಾರ ಅಹಮದಾಬಾದ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿ ಯಲ್ಲಿ ಸರಕಾರಕ್ಕೆ ತೆರಿಗೆ ಪಾವತಿಸಲು ಇರಲಿಸಲಾಗಿದ್ದ ಮೊತ್ತ ಎಂದು ಹೇಳಿಕೊಂಡಿದ್ದಾರೆ. ಆದರೆ ಸರಕಾರ ನೀಡಿದ್ದ ಗಡುವು ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡಿದ್ದು, ಈ ಅವಧಿಯಲ್ಲಿ ಮೊದಲ ಕಂತಿನ ರೂಪದಲ್ಲಿ 976 ಕೋಟಿ ಪಾವತಿಸಿಲ್ಲ. ಆದ್ದರಿಂದ ತೆರಿಗೆ ಅಧಿಕಾರಿಗಳು ಈ ಬೃಹತ್ ಮೊತ್ತವನ್ನು ಕಪ್ಪುಹಣ ಎಂದು ಘೋಷಿಸಿದ್ದಾರೆ.

ಈ ಘಟನೆ ಬೆನ್ನಲ್ಲೇ ಮಹೇಶ್ ಶಾ ಅವರ ಕಚೇರಿ ಹಾಗೂ ನಿವಾಸಗಳ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ಮುಂದುವರಿಸಿದ್ದು, ಇನ್ನಷ್ಟು ಕಪ್ಪುಹಣ ಪತ್ತೆಹಚ್ಚುವ ವಿಶ್ವಾಸ ವ್ಯಕ್ತಪಡಿಸಿದೆ.

ಮಹೇಶ್ ಶಾ ಅವರ ತೆರಿಗೆ ಬಾಕಿ ಮೊತ್ತ 975 ಕೋಟಿಯನ್ನು ತೆರಿಗೆ ರೂಪದಲ್ಲಿ ಪಡೆಯಲಾಗುವುದು. ಉಳಿದ ೧೩ ಸಾವಿರ ಕೋಟಿ ರೂ.ವನ್ನು ಕಪ್ಪುಹಣ ಎಂದು ಪರಿಗಣಿಸಲಾಗುವುದು ಎಂದು ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.