ಕಪ್ಪುಹಣವನ್ನು ಬದಲಾಯಿಸಲು ಬೇರೆಯವರ ಖಾತೆಗೆ ಹಣ ಹಾಕಿದ್ದೀರಾ? ಹಾಗಾದ್ರೆ ಜೈಲ್ ಗೆ ಹೋಗ್ತೀರಾ… ಎಚ್ಚರ !!

0
792

ಹೌದು. ಕಪ್ಪು ಹಣ ಹೊಂದಿದ್ದ ವ್ಯಕ್ತಿಗಳು ಬೇನಾಮಿ ವ್ಯಕ್ತಿಗಳ ಖಾತೆಗೆ ಹಣ ಜಮೆ ಮಾಡಿ ಸಿಕ್ಕಿಬಿದ್ದರೆ ಅವರ ವಿರುದ್ಧ ಬೇನಾಮಿ ವರ್ಗಾವಣೆ ತಡೆ ಕಾಯ್ದೆ 1998 ಅಡಿ ಪ್ರಕರಣ ದಾಖಲಿಸಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ. ಈ ಕಾಯ್ದೆ ಅಡಿ ಪ್ರಕರಣ ದಾಖಲಾದರೆ ಗರಿಷ್ಟ 7 ವರ್ಷ ಜೈಲು ಶಿಕ್ಷೆ ಆಗುವ ಸಾಧ್ಯತೆಯಿದೆ.ಕಮಿಷನ್ ಆಸೆಗೆ ಬೇರೆಯವರ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಿದಲ್ಲಿ ನಿಮಗೆ ಜೈಲು ಶಿಕ್ಷೆ ಗ್ಯಾರಂಟಿ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಎಲ್ಲರಿಗೂ ಗೊತ್ತಿರುವ ಹಾಗೆ ನೋಟ್ ಬ್ಯಾನ್ಗೂ ಮೊದಲೇ ಕೇಂದ್ರ ಸರ್ಕಾರ ಕಾಳಧನಿಕರಿಗೆ ಕಪ್ಪು ಹಣವನ್ನೂ ಕೂಡ ಅಕೌಂಟ್ಗೆ ಜಮಾ ಮಾಡಿ, ಸರಿಯಾದ ತೆರಿಗೆ ಕಟ್ಟಲು ಅವಕಾಶವನ್ನ ನೀಡಿತ್ತು. ಆದರೆ ಇದನ್ನ ಕಪ್ಪುಕುಳಗಳು ಗಣನೆಗೆ ತೆಗೆದುಕೊಂಡಿರಲಿಲ್ಲ.ಅದರ ಪರಿಣಾಮ ಈಗ ಅನುಭವಿಸುವಂತಾಗಿದೆ. ದಂಡದಿಂದ ತಪ್ಪಿಸಿಕೊಳ್ಳೋಕೆ ಕೆಲವರು ಬೇರೆಯವರಿಂದ ಹಣ ಜಮಾ ಮಾಡಿಸುವ ದಂಧೆಗೆ ಇಳಿದಿದ್ದಾರೆ. ಆದರೆ, ಇನ್ನು ಮುಂದೆ ಮತ್ತೊಬ್ಬರ ಅಕೌಂಟ್ನಲ್ಲಿ ಜಮಾ ಮಾಡಿ, ಅವರಿಗೆ ಪರ್ಸೆಂಟೇಜ್ ಲೆಕ್ಕದಲ್ಲಿ ಹಣ ನೀಡೋ ವ್ಯವಹಾರಗಳಿಗೂ ಬ್ರೇಕ್ ಬಿಳಲಿದೆ.

ಯಾರ ಖಾತೆಗಳಿಗೆ ಹೆಚ್ಚು ಹಣ ಜಮಾ ಆಗಿದೆ ಎಂಬುದನ್ನು ತಿಳಿಯಲು ಈಗಾಗಲೇ ಬ್ಯಾಂಕ್, ಪೋಸ್ಟ್ ಆಫೀಸ್ ಗಳಿಗೆ ಮಾಹಿತಿ ಕೇಳಲಾಗಿದೆ. ಬೇರೆಯವರ ಖಾತೆಯಲ್ಲಿ ಹಣ ಜಮಾ ಆಗಿ ಖಾತೆ ದುರ್ಬಳಕೆ ಆಗಿರುವುದು ಕಂಡು ಬಂದರೆ, ಖಾತೆದಾರನಿಗೆ ಮತ್ತು ಹಣ ಕೊಟ್ಟವನಿಗೆ ಶೇ. 25 ರವರೆಗೆ ದಂಡ, 1 ರಿಂದ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು.

500, 1 ಸಾವಿರ ರೂ. ಚಲಾವಣೆ ನಿಷೇಧವಾದ ಬಳಿಕ ದೇಶದ ಹಲವು ಕಡೆ 200 ಕೋಟಿ ರೂ. ಹಣ ಅಕ್ರಮವಾಗಿ ಬೇನಾಮಿ ಖಾತೆಗೆ ಜಮೆ ಆಗಿದೆ. ಈ ಖಾತೆಯನ್ನು ಆದಾಯ ಇಲಾಖೆ ಪರಿಶೀಲಿಸಿದಾಗ 30 ಪ್ರಕರಣಗಳು ಸಂಶಯಾಸ್ಪದವಾಗಿದ್ದು ಮತ್ತಷ್ಟು ತನಿಖೆ ಆರಂಭವಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ಬಹಳಷ್ಟು ಜನರು ಬೇರೊಬ್ಬರ ಖಾತೆಗೆ ಹಣವನ್ನು ಜಮೆ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ತನಿಖೆ ವೇಳೆ ಜಮೆಯಾದ ಹಣದ ಮೂಲದ ಬಗ್ಗೆ ಸರಿಯಾದ ಮಾಹಿತಿ ಸಿಗದೇ ಇದ್ದರೆ ಹಣವನ್ನು ಜಮೆ ಮಾಡಿದ ವ್ಯಕ್ತಿಗೂ ಖಾತೆಯನ್ನು ಹೊಂದಿದ ವ್ಯಕ್ತಿಗೆ 1 ರಿಂದ 7 ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸಲು ಈ ಕಾಯ್ದೆ ಅಡಿ ಅವಕಾಶವಿದೆ ಎಂದು ತಿಳಿಸಿದ್ದಾರೆ.