ಕಣ್ಣಿಲ್ಲದ ಇಲಿಗೆ ದೃಷ್ಟಿ ನೀಡಿದ ವಿಜ್ಞಾನಿಗಳು

0
489

ಇದೇ ಮೊದಲ ಬಾರಿಗೆ ಗ್ಲುಕೊಮದಂತಹ ಸಮಸ್ಯೆಯಿಂದ ಕುರುಡಾಗಿದ್ದ ಇಲಿಯೊಂದಕ್ಕೆ ದೃಷ್ಟಿ ಮರಳಿ ಬರುವಂತೆ ಮಾಡುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ‘ಭವಿಷ್ಯದಲ್ಲಿ ಈ ಸಂಶೋದನೆಯನ್ನು ಮಾನವರ ಮೇಲೂ ಕೈಗೊಳ್ಳಬಹುದು’ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದು ಜಗತ್ತನಾದ್ಯಂತ ಗ್ಲುಕೊಮಾದಿಂದ ಬಳಲುವ 70 ದಶಲಕ್ಷಕ್ಕೂ ಹೆಚ್ಚು ಜನರಲ್ಲಿ ಆಶಾವಾದ ಮೂಡಿಸಿದೆ.

ಹಾನಿಗೀಡಾದ ಆಪ್ಟಿಕ್ ನರ್ವ್ ಕೇಬಲ್’ಗಳನ್ನು ಮರುರೂಪಿಸಿ ಅದನ್ನು ಮಿದುಳಿಗೆ ಮರುಸಂಪರ್ಕಿಸುವ ತಂತ್ರದಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಸ್ಟಾನ್’ಫೋರ್ಡ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಮೆಡಿಸಿನ್ ವಿಭಾಗದ ಸಂಶೋಧಕರು ಈ ಮಹತ್ವದ ಸಂಶೋಧನೆ ಮಾಡಿದ್ದಾರೆ.

ಒತ್ತದ ಕಾರಣ: ಗ್ಲುಕೊಮಾಕ್ಕೆ ಕಣ್ಣಿನಲ್ಲಿ ಉಂಟಾಗುವ ಒತ್ತಡ ಪ್ರಮುಖ ಕಾರಣ. ಕಣ್ಣಿನ ಒಳಗಿನ ಅವಯವಗಳನ್ನು ಕ್ಲೀನ್ ಮಾಡಲು ದ್ರವವಸ್ತು ಉತ್ಪತ್ತಿಯಾಗುತ್ತದೆ. ಇದು ಕಣ್ಣುಗುಡ್ಡೆಯ ಆರೋಗ್ಯಕ್ಕೆ ಜೀವದ್ರವ. ಆರೋಗ್ಯವಂತ ಕಣ್ಣುಗಳಲ್ಲಿ ಗ್ಲುಕೊಮಾ ರೋಗಿಗಳಲ್ಲಿ ಇಂತಹ ವ್ಯವಸ್ಥೆ ಸಮರ್ಪಕ ವಾಗಿರುವುದಿಲ್ಲ. ಇದರಿಂದ ಕಣ್ಣಿನಲ್ಲಿ ದ್ರವದ ಒತ್ತಡ ಹೆಚ್ಚುತ್ತದೆ. ದೃಷ್ಟಿನರ ಉಬ್ಬಲು ಆರಂಭವಾಗುತ್ತದೆ. ಇದರಿಂದ ದೃಷ್ಟಿದೋಷ ಉಂಟಾಗುತ್ತದೆ.

ಏನಿದು ಗ್ಲುಕೊಮಾ?: ಇದು ಒಂದು ರೀತಿಯ ಸೈಲೆಂಟ್ ಕ್ಕಿಲ್ಲರ್. ಗ್ಲುಕೊಮಾದಿಂದ ಉಂಟಾದ ದೃಷ್ಟಿನಾಶವನ್ನು ಗುಣಪಡಿಸಲು ಸಾಧ್ಯವಿಲ್ಲ. ದೇಶದಲ್ಲಿ ಸದ್ಯ 1.2.2020ರ ವೇಳೆಗೆ ಈ ಸಮಸ್ಯೆಯು 1.6 ಕೋಟಿಗೆ ಏರಿಕೆ ಕಾಣುವ ಸಾಧ್ಯತೆ ಇದೆ. ಮಾರ್ಚ್ 12 ವಿಶ್ವ ಗ್ಲುಕೊಮಾ ದಿನವಾಗಿದೆ.