ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ 110 ಕೋಟಿ ರೂ. ಸಹಾಯ ಮಾಡಿದ ಅಂಧ ವಿಜ್ಞಾನಿ..

0
591

ದೇಶದಲ್ಲಿ ಆತಂಕ ಮೂಡಿಸಿದ ಪುಲ್ವಾಮ ದಾಳಿವು 44 ಯೋಧರನ್ನು ಬಲಿ ತೆಗೆದುಕೊಂಡಿತ್ತು. ಈ ದಾಳಿಯಲ್ಲಿ ಪ್ರಾಣಕಳೆದುಕೊಂಡ ಸೈನಿಕರಿಗೆ ದೇಶದ ಹಲವು ಜನರು ಧನ ಸಹಾಯ ಮಾಡಿದರು ಇನ್ನೂ ಮಾಡುತ್ತಲ್ಲಿದ್ದಾರೆ. ಅದರಂತೆ 110 ಕೋಟಿ ಧನ ಸಹಾಯವನ್ನು ಮಾಡಲು ಒಬ್ಬ ವ್ಯಕ್ತಿ ಮುಂದೆ ಬಂದಿದ್ದಾರೆ. ಅದರಲ್ಲಿ ಏನು ವಿಶೇಷ ಎಲ್ಲರಂತೆ ಇವರು ಸಹಾಯಕ್ಕೆ ಬಂದಿರಬಹುದು ಎನ್ನಬಹುದು. ಆದರೆ ಸಹಾಯ ಮಾಡಲು ಮುಂದೆ ಬಂದ ವ್ಯಕ್ತಿ ಒಬ್ಬ ಅಂಧ ವಿಜ್ಞಾನಿಗಳು ಇವರು ಇಷ್ಟೊಂದು ದೊಡ್ಡ ಮೊತ್ತದ ಧನ ಸಹಾಯಕ್ಕೆ ದೇಶವೇ ಆಶ್ಚರ್ಯ ಒಳಗಾಗಿದೆ.

Also read: ಪುಲ್ವಾಮ ದಾಳಿ ಮಾಡಿಸಿದ್ದು ಬಿಜೆಪಿಯ ನಾಯಕರು ಎನ್ನುವ ಆಡಿಯೋ ಹಿಂದೆ ಇರುವ ಸತ್ಯ ಏನು ಗೊತ್ತಾ?

ಹೌದು ಎಲ್ಲರಲ್ಲೂ ಮೂಡುವ ಪ್ರಶ್ನೆಗಳು ಅಂದರೆ ಕಣ್ಣಿಲ್ಲದವರು ಎಷ್ಟೊಂದು ಹಣ ಗಳಿಸಲು ಸಾದ್ಯ? ಎಷ್ಟೊಂದು ಸಾಧನೆ ಮಾಡಲು ಸಾದ್ಯ ಎನ್ನುವ ವಿಚಾರವು ತಿಳಿದಿರುತ್ತದೆ. ಕಣ್ಣಿಲ್ಲದೆ ಸಾಧನೆ ಮಾಡಿ ಹಣ ಗಳಿಸಿ ನೂರಾರು ಕೋಟಿ ಧಾನ ಮಾಡುತ್ತಿರುವ ವಿಜ್ಞಾನಿ ರಾಜಸ್ಥಾನದ ಕೋಟಾ ಪ್ರದೇಶದವರಾದ ಮುರ್ತಾಜಾ.ಎ.ಹಮೀದ್ ಅವರು ಸಂಶೋಧಕ ಹಾಗೂ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹುಟ್ಟಿದಾಗಿನಿಂದಲೂ ಇವರಿಗೆ ಕಣ್ಣು ಕಾಣಿಸುತ್ತಿಲ್ಲ. ಆದರೇ ಇವರು ಅಂಗವೈಫಲ್ಯವನ್ನು ಮರೆತು ಸಾಧನೆ ಮಾಡಿ ಯೋಧರಿಗೆ ಸಹಾಯ ಮಾಡುತ್ತಿದ್ದಾರೆ.

Also read: ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್- ಗೆಲಿವರ್ ಕ್ಯಾನ್ಸರ್; ರಕ್ತಕಾರಿ ಸತ್ತ ಪಾಪಿ ಉಗ್ರ ಎನ್ನುವ ಸುದ್ದಿ ISI ಹರಡಿಸಿದ ಸುಳ್ಳು ಸುದ್ದಿ??

ತಾಯ್ನಾಡಿಗಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಕುಟುಂಬಕ್ಕೆ ಸಹಾಯ ಹಸ್ತ ಚಾಚುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಪ್ರಧಾನಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ 110 ಕೋಟಿ ನೀಡುವುದಾಗಿ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ. ಈ ಕುರಿತು ಈಗಾಗಲೇ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಇ ಮೇಲ್ ಮೂಲಕ ತಮ್ಮ ನೆರವು ನೀಡುವುದಾಗಿ ಸಂದೇಶ ರವಾನಿಸಿದ್ದಾರೆ.

ಹಾಗೆಯೇ ಯೋಧರ ಕುಟುಂಬಗಳ ಮಾಹಿತಿಗಳನ್ನು ಮತ್ತು ದೇಣಿಗೆ ನೀಡುವ ಬಗ್ಗೆಗಿನ ವಿವರಗಳನ್ನು ಕಳುಹಿಸಿಕೊಡುವಂತೆ ರಾಷ್ಟ್ರೀಯ ಪರಿಹಾರ ನಿಧಿ ಉಪಕಾರ್ಯದರ್ಶಿ ಅಗ್ನಿ ಕುಮಾರ್ ದಾಸ್ ಅವರಲ್ಲಿ ಕೇಳಿಕೊಂಡಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಸಮಯವಕಾಶ ಕೋರಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹಮೀದ್ ಅವರು `ಇಂಧನ ಉರಿತ ವಿಕಿರಣ ತಂತ್ರಜ್ಞಾನ’ (Fuel Burn Radiation Technology)ವನ್ನು ಸಂಶೋಧಿಸಿದ್ದಾರೆ. ಜಿಪಿಎಸ್ ಹಾಗೂ ಕ್ಯಾಮೆರಾ ಸೌಲಭ್ಯವಿಲ್ಲದ ವಾಹನಗಳನ್ನು ಈ ತಂತ್ರಜ್ಞಾನದ ಮೂಲಕ ಪತ್ತೆ ಮಾಡಬಹುದು. ಹಮೀದ್ ಈ ತಂತ್ರಜ್ಞಾನವನ್ನು 2016ರಲ್ಲಿಯೇ ಕೇಂದ್ರ ಸರ್ಕಾರಕ್ಕೆ ಉಚಿತವಾಗಿ ನೀಡಿದ್ದರು. ಎರಡು ವರ್ಷಗಳ ಬಳಿಕ 2018ರಲ್ಲಿ ಈ ತಂತ್ರಜ್ಞಾನವನ್ನು ಬಳಸಲು ಸರ್ಕಾರ ಅನುಮೋದನೆ ನೀಡಿತ್ತು.

Also read: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ CRPF ಯೋಧರ ಸಾಲ ಮನ್ನಾ ಮಾಡಿದ ಭಾರತೀಯ ಸ್ಟೇಟ್‌ ಬ್ಯಾಂಕ್‌..

ಈ ಕುರಿತು ಮಾತನಾಡಿದ ವಿಜ್ಞಾನಿ ಮುರ್ತಾಜಾ.ಎ.ಹಮೀದ್ ದೇಶಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಡುವ ಯೋಧರ ಕುಟಂಬಗಳ ಬೆಂಬಲಕ್ಕೆ ನಿಲ್ಲಬೇಕೆಂಬ ಆಸೆ ಇದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಯೋಧರ ನೆರವಿಗೆ ನಿಲ್ಲಬೇಕು. ದೇಶಕ್ಕಾಗಿ ತಮ್ಮ ಕುಟುಂಬವನ್ನು ಬಿಟ್ಟು ಗಡಿಯಲ್ಲಿ ನಿಂತು ನಮ್ಮೆಲ್ಲರ ಕುಟುಂಬವನ್ನು ಯೋಧರು ಕಾಯುತ್ತಾರೆ ಎಂದು ಹಮೀದ್ ತಿಳಿಸಿದ್ದಾರೆ.