ಬ್ಲೂಟೂತ್-ನಿಂದಾಗಿ ಬ್ಲೂ-ಬೋರ್ನ್ ವೈರಸ್ ಹೆಚ್ಚಾಗಿ ಹರಡುತ್ತಿದೆ, ಇಲ್ಲಿ ಕೊಟ್ಟಿರುವ ಮಾರ್ಗ ಅನುಸರಿಸಿ, ನಿಮ್ಮ ಫೋನ್-ಅನ್ನು ಸಂರಕ್ಷಿಸಿಕೊಳ್ಳಿ..

0
1782

Kannada News | kannada Useful Tips

ತಂತ್ರಜ್ಞಾನ ಬೆಳೆದಂತೆಲ್ಲಾ ಅದರ ಉಪಯೋಗವನ್ನು ಜನ ಹೆಚ್ಚಾಗಿ ಪಡೆಯುತ್ತಿದ್ದಾರೆ. ಈಗಿನ ಯುಗದಲ್ಲಿ ಬ್ಲ್ಯೂ ಟುತ್, ವೈಫೈ (bluetooth and wifi) ಕಾಮನ್ ಆಗಿದೆ. ಆದ್ರೆ ಇದರಿಂದ ಆಗುವ ಪರಿಣಾಮ ಹಾಗೂ ದುಷ್ಪರಿಣಾಮದ ಬಗ್ಗೆ ನಿಮಗೆಷ್ಟು ಗೊತ್ತು..? ನಾವು ನಿಮಗೆ ಇಲ್ಲಿ ತಿಳಿಸುತ್ತೇವೆ ಕೆಲವು ಇಂಟ್ರಸ್ಟಿಂಗ್ ವಿಷಯವನ್ನು.

blueborne antivirus

ಸಾಮಾನ್ಯವಾಗಿ ನಿಮ್ಮ ಮೊಬೈಲ್‌ಗಳಲ್ಲಿ ಅಥವಾ ಲ್ಯಾಪ್‌ ಟಾಪ್‌ಗಳಲ್ಲಾಗಲಿ ವೈರಸ್ ಬರುವುದ ಸಾಮಾನ್ಯ. ನೀವು ಬ್ಲ್ಯೂ ಟುತ್, ವೈಫೈ ಕನೆಕ್ಟ್ ಮಾಡುತ್ತಿದ್ದಂತೆ ನಿಮಗೆ ನಿಮ್ಮ ಡಿವೈಸ್‌ನಲ್ಲಿ ಸುಮಾರು, ಲಿಂಕ್‌ಗಳು ತೆರೆದುಕೊಳ್ಳುತ್ತವೆ. ನಾವು ಇದರ ಮೇಲೆ ಕ್ಲೀಕ್ ಮಾಡಿ ಡೌನಲೋಡ್ ಮಾಡಿದಾಗ ಮಾತ್ರ ಅವು ನಮ್ಮ ಡಿವೈಸ್‌ಗೆ ಸೇರುತ್ತವೆ. ಆದ್ರೆ ಈಗ ಬ್ಲ್ಯೂ ಬಾರ್ನ್ ಕಾಲಿಟ್ಟಿದೆ.

blueborne antivirus

ಬ್ಲ್ಯೂ ಬರ್ನ್ (BlueBorne) ಅಂದ್ರೆ ಸಾಕು ತಂತ್ರಜ್ಞಾನದ ಪರಿಚಯ ಇರೋ ಜನ ಕೊಂಚ ಹೆದರುತ್ತಾರೆ. ಇದು ಒಂದು ಹ್ಯಾಕರ್ ಡಿವೈಸ್ ಆಗಿದೆ. ಇದರ ಸಹಾಯದಿಂದ ನಿಮ್ಮ (computer, laptop, tablet, mobile) ಮೊಬೈಲ್, ಟ್ಯಾಬ್ಲೈಟ್, ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳಿಂದ ಡಾಟ್ ಕದಿಯಲು ಬಹುದು ಇಲ್ಲವೇ ವೈರಸ್ ಹರಡಬಹುದು. ಹೌದು ನೀವು ನಿಮ್ಮ ಬ್ಲ್ಯೂ ಟೂತ್ ಕೆಲಸವಾದ ತಕ್ಷಣ ಅದನ್ನು ಆಫ್ ಮಾಡಿದ್ರೆ, ಉತ್ತಮ. ಇಲ್ಲದಿದ್ದರೆ ಸುಮ್ಮನೆ ನೀವು ತೊಂದರೆಗೆ ಈಡಾಗುತ್ತೀರಿ.

blueborne antivirus

ಇದರ ಕಾರ್ಯ ಹೇಗೆ: ಎಸ್.. ಇದನ್ನು ಹೊಂದಿದ ವ್ಯಕ್ತಿ ನಿಮ್ಮ ಬ್ಲ್ಯೂ ಟುತ್ ರೆಂಜ್‌ನಲ್ಲಿದ್ದು, ನಿಮ್ಮ ಬ್ಲ್ಯೂ ಟುತ್ ಆನ್ ಗಿದ್ದರೆ ಸಾಕು. ಹ್ಯಾಕರ್ ತನ್ನ ಕಾರ್ಯವನ್ನು ಸುಲಭವಾಗಿ ಮಾಡಿ ಮುಗಿಸುತ್ತವೆ. ಬ್ಲ್ಯೂ ಬರ್ನ್ ಸಹಾಯದಿಂದ ನಿಮ್ಮಲ್ಲಿನ ಡಾಟಾಗಳನ್ನು ಕದಿಯಲು ಬಹುದು ಇಲ್ಲ ವೈರಸ್ ಹರಡಲು ಬಹುದು.

blueborne antivirus

ಪರಿಹಾರ: ನಿಮ್ಮ ಕೆಲಸವಾದ ತಕ್ಷಣ ಬ್ಲ್ಯೂ ಟುತ್ ಆಫ್ ಮಾಡಿದ್ರೆ ಉತ್ತಮ.
ಇನ್ನು ನಿಮ್ಮ ಡಿವೈಸ್ ಬ್ಲ್ಯೂ ಬರ್ನ್‌ಗೆ ತುತ್ತಾಗಿದೆಯಾ ಎಂಬುದು ಸುಲಭವಾಗಿ ಗೊತ್ತಾಗುತ್ತದೆ.

https://goo.gl/t5hnRK

ಹೆಚ್ಚಿನ ಟೆಕ್ನಾಲಜಿ ಅಪ್ಡೇಟ್ ಹಾಗು ಮಾಹಿತಿಗಾಗಿ ನಮ್ಮ Facebook Page ಲೈಕ್ ಮಾಡಿ.