ಸರಕಾರದ ಆದೇಶಕ್ಕೆ ಮಣಿದ ಬಿಎಂಆರ್‌ಸಿಎಲ್, ಇದು ಕನ್ನಡ ಹೋರಾಟಕ್ಕೆ ಸಂದ ಜಯ..!

0
494

ನಮ್ಮ ಕನ್ನಡಪರ ಹೋರಾಟಗಾರರು ಮತ್ತು ನಮ್ಮ ಕನ್ನಡ ಅಭಿಮಾನಿಗಳು ಸಮಾಜಿಕ ಜಾಲತಾಣಗಲ್ಲಿ ಮತ್ತು ಬೀದಿಗೆ ಬಂದು ನಮ್ಮ ಮೆಟ್ರೋದಲ್ಲಿನ ಹಿಂದಿ ಹೇರಿಕೆ ಬಗ್ಗೆ ನಡೆದ ಹೋರಾಟ ಫಲ ನೀಡಿದೆ. ಸರಕಾರದ ಆದೇಶಕ್ಕೆ ಮಣಿದ ಬಿಎಂಆರ್‌ಸಿಎಲ್. ಮೆಟ್ರೋ ನಿಲ್ದಾಣಗಳಲ್ಲಿನ ಹಿಂದಿ ನಾಮಫಲಕಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಕೈ ಹಾಕಿದೆ.

source: vijaykarnataka.indiatimes.com

ಮೆಜೆಸ್ಟಿಕ್, ಚಿಕ್ಕಪೇಟೆ ಮತ್ತು ಕೆ.ಆರ್.ಮಾರುಕಟ್ಟೆ ಮೆಟ್ರೋ ನಿಲ್ದಾಣಗಳಲ್ಲಿ ಲ್ದಾಣಗಳಲ್ಲಿನ ನಾಮಫಲಕಗಳನ್ನು ಇಂದು ತೆರವು ಮಾಡಲಾಗುತ್ತಿದೆ. ಅವುಗಳಿಗೆ ಪ್ರತಿಯಾಗಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾಹಿತಿ ಇರುವ ಪರ್ಯಾಯ ಫಲಕಗಳನ್ನು ಅಳವಡಿಸಲು ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಹಲವು ನಿಲ್ದಾಣಗಳಲ್ಲಿ ಹಿಂದಿ ನಾಮಫಲಕಗಳನ್ನು ಮುಚ್ಚಲಗಿದೆ. ಇನ್ನು ಕೆಲವುದಿನಗಲ್ಲಿ ಈ ಹಿಂದಿ ನಾಮಫಲಕಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ನಿರ್ದಿಸಿದೆ. ಇನ್ನು ಕೆಲವೆಡೆ ಒಂದೇ ಫಲಕದಲ್ಲಿದ್ದ ಮೂರೂ ಭಾಷೆಯ ಮಾಹಿತಿಯಲ್ಲಿ ಹಿಂದಿ ಭಾಷೆಯಲ್ಲಿರುವ ಮಾಹಿತಿ ಮೇಲೆ ಸ್ಟಿಕ್ಕರ್ ಅಂಟಿಸಿರುವುದು ಕಂಡುಬಂದಿದೆ.

source: bcdn.newshunt.com

ಹಿಂದಿ ಹೇರಿಕೆಯನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ರಾಜ್ಯದಲ್ಲಿ ಇಂಗ್ಲಿಷ್ ಮತ್ತು ಕನ್ನಡ ಭಾಷಾ ಸೂತ್ರ ಅಳವಡಿಸಿಕೊಳ್ಳಲಾಗಿದ್ದು, ಅದರಂತೆ ನಮ್ಮ ಮೆಟ್ರೋಗೂ ಇದೇ ನೀತಿ ಅನ್ವಯಿಸುತ್ತದೆ. ಹಾಗಾಗಿ ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಬಳಕೆ ಮಾಡದಂತೆ ಪತ್ರ ಬರೆದಿದ್ದರು.