ಬೆಂಗಳೂರು ಮೆಟ್ರೋ ರೈಲ್ವೆ ಗ್ರಾಜುಯೇಟ್ ಇಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
282

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೋರೇಷನ್ ನಿಗಮ ಗ್ರಾಜುಯೇಟ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಮೇ 6,2019 ರೊಳಗೆ ಅರ್ಜಿ ಸಲ್ಲಿಸಬೇಕು.

Also read: ಎಸ್‌ಎಸ್‌ಬಿ- ಯಲ್ಲಿ ಸಬ್‌ ಇನ್ಸ್‌ಸ್ಟೆಕ್ಟರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು (Name Of The Posts): ಗ್ರಾಜುಯೇಟ್ ಇಂಜಿನಿಯರ್

ಸಂಸ್ಥೆ (Organisation): ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೋರೇಷನ್ ನಿಗಮ

ವಿದ್ಯಾರ್ಹತೆ (Educational Qualification): ಬಿಇ / ಬಿ.ಟೆಕ್ (ಸಿವಿಲ್ )ನಲ್ಲಿ ಶೇ.60%ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ: ಈ ಹುದ್ದೆಗಳಿಗೆ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಗೇಟ್ 2019ರ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: ಅಧಿಕೃತ ವೆಬ್‌ಸೈಟ್‌ http://english.bmrc.co.in/ ನಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ನಂತರ ಅರ್ಜಿಯ ಪ್ರಿಂಟೌಟ್‌ ಅನ್ನು ಕಚೇರಿಯ ವಿಳಾಸಕ್ಕೆ ಮೇ 6,2019ರ ಸಂಜೆ 4 ಗಂಟೆಯೊಳಗೆ ಕಳುಹಿಸಬಹುದು.

ಕಚೇರಿಯ ವಿಳಾಸ: ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್, 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆ.ಹೆಚ್‌ ರೋಡ್, ಶಾಂತಿನಗರ, ಬೆಂಗಳೂರು-560027

ಹೆಚ್ಚಿನ ಮಾಹಿತಿಗಾಗಿ: http://projectrecruit.bmrc.co.in/ ಕ್ಲಿಕ್ ಮಾಡಿ.