ಬೆಂಗಳೂರು ನಮ್ಮ ಮೆಟ್ರೋನಲ್ಲಿ ಖಾಲಿ ಇರುವ 20 ಸೆಕ್ಷನ್ ಇಂಜಿನಿಯರ್ ಹುದ್ದೆಗಳ ನೇಮಕಾತಿ

0
633

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ ಸಿಲ್) ನಲ್ಲಿ ಖಾಲಿ ಇರುವ ಒಟ್ಟು 20 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

source: careersguru.in

ಗುತ್ತಿಗೆ ಆಧಾರದ ಮೇಲೆ ಸೆಕ್ಷನ್ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥೀಗಳು ಆಗಸ್ಟ್ 26, 2017ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ:
ರೋಲಿಂಗ್ ಸ್ಟಾಕ್, ಟ್ರ್ಯಾಕ್ಷನ್, ಎಎಫ್ಸಿ, ಟೆಲಿಕಾಂ, ಸಿಗ್ನಲಿಂಗ್, ಸಿವಿಲ್/ಆರ್ಎಸ್ಎಸ್,ಸಿಸ್ಟಂ ಡಿಸೈನ್, ಲಿಫ್ಟ್ ಅಂಡ್ ಎಸ್ಕಲೇಟರ್, ಟಿವಿಎಸ್ ಅಂಡ್ ಇಸಿಎಸ್ ಮತ್ತು ಡಿಪೊಟ್ ವಿಭಾಗಗಳಲ್ಲಿ 20 ಸೆಕ್ಷನ್ ಇಂಜಿನಿಯರ್ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ವೇತನ ಶ್ರೇಣಿ:
ರೂ.35910/- ವಯೋಮಿತಿ: 31 ಜುಲೈ 2017ಕ್ಕೆ ಅನ್ವಯವಾಗುಂತೆ ಗರಿಷ್ಠ 35 ವರ್ಷ.

ವಿದ್ಯಾರ್ಹತೆ:
ಪದವಿಯಲ್ಲಿ ಅಥವಾ ಡಿಪ್ಲಮೋನಲ್ಲಿ ಮೆಕ್ಯಾನಿಕಲ್, ಎಲೆಕ್ಟ್ರಾನಿಕಲ್. ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ ಕಮ್ಯೂನಿಕೆಷನ್ ಇಂಜಿನಿಯರಿಂಗ್ ಪದವಿ ಜೊತೆಗೆ ಮೂರು ವರ್ಷಗಳ ಸೇವಾ ಅನುಭವ ಇರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಕೆ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿ ಪ್ರಿಂಟ್ ತೆಗೆದುಕೊಂಡು, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಛೇರಿ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸತಕ್ಕದ್ದು. ಅರ್ಜಿ ಲಕೋಟೆ ಮೇಲೆ ಅಭ್ಯರ್ಥಿಗಳು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೇನೆ ಎನ್ನುವುದನ್ನು ದಪ್ಪಾಕ್ಷರದಲ್ಲಿ ನಮೂದಿಸತಕ್ಕದ್ದು. ಈ ಗುತ್ತಿಗೆಯ ಅವಧಿ ಮೂರು ವರ್ಷಗಳದಾಗಿದ್ದು, ಲಿಖಿತ ಪರೀಕ್ಷೆ ಬಳಿಕ ವೈಯಕ್ತಿಕ ಸಂದರ್ಶನ ಮೂಲಕ ಈ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ
General Manager (HR), Bangalore Metro Rail Corporation Limited, III Floor, BMTC Complex, K.H.Road, Shanthinagar, Bangalore 560027