80-90 ದಶಕಗಳಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ರಾರಾಜಿಸುತ್ತಿದೆ ಡಬಲ್ ಡೆಕ್ಕರ್ ಬಸ್-ಗಳಿಗೆ ಮತ್ತೆ ಜೀವ ಬಂದಿದೆ!!!

0
578

ಮೂರು ದಶಕಗಳ ಹಿಂದೆ ಬೆಂಗಳೂರಿನಲ್ಲಿ ಪ್ರವಾಸಿಗರ ಮತ್ತು ಪ್ರಯಾಣಿಕರ ಆಕರ್ಷಣೆಯ ಬಸ್-ಗಳಾಗಿ ಡಬಲ್ ಡೆಕ್ಕರ್ ಬಸ್-ಗಳು ತಮ್ಮದೇ ಹವಾ ಸೃಷ್ಟಿಮಾಡಿದವು. ಹಾಗೆಯೇ ಬೆಂಗಳೂರಿಗೆ ಬಂದ ಪ್ರತಿಯೊಬ್ಬರೂ ಮಹಡಿ ಬಸ್ ಗಳ ಮೇಲೆ ಕೂತು ಪ್ರಯಾಣ ಮಾಡದೆ ಮರಳಿದ ಇತಿಹಾಸವೇ ಇರಲಿಲ್ಲ. ಇವುಗಳನ್ನು ನೋಡುವುದೇ ಒಂದೇ ಹುಚ್ಚು ಆಗೀತ್ತು ಇಷ್ಟೊಂದು ಆಕರ್ಷಣೆ ಹೊಂದಿರುವ ಡಬಲ್ ಡೆಕರ್ ಬಸ್-ಗಳು ಬರು ಬರುತ್ತ ತನ್ನ ಸಂಚಾರವನ್ನು ಕಳೆದುಕೊಂಡು ಅವುಗಳ ತಯಾರಿಕ ಕಂಪನಿಗಳು ಕೂಡ ಈ ಬಸ್ ಗಳ ತಯಾರಿಕೆಯನ್ನು ನಿಲ್ಲಿಸಿದವು. ಈಗ ಡಬಲ್ ಡೆಕ್ಕರ್ ಬಸ್‌ಗಳ ಅವಶ್ಯಕತೆ ಇದ್ದು ಅವುಗಳಿಗೆ ಮರು ಜೀವ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

Also read: ಕರ್ನಾಟಕ ಲೋಕಸೇವಾ ಆಯೋಗ 713 ಪ್ರಥಮ, ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹೌದು ರಾಜ್ಯ ಸರ್ಕಾರ ಪ್ರಸ್ತುತ ದಿನಗಳಲ್ಲಿ ಡಬಲ್ ಡೆಕ್ಕರ್ ಬಸ್ ಸೇವೆಗಳು ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಬೃಹತ್ ಯೋಜನೆ ರೂಪಿಸಿದೆ. ಪ್ರಾಮುಖ್ಯವಾಗಿ ಇವುಗಳು ಕಳೆದ ಮೂರು ದಶಕಗಳ ಹಿಂದೆ ನಗರ ದರ್ಶನಕ್ಕೆ ಮಾತ್ರ ಸೀಮಿತವಾಗಿದ್ದ ಡಬಲ್ ಡೆಕ್ಕರ್ ಬಸ್‌ಗಳು ಕ್ರಮೇಣ ಮೂಲೆ ಸೇರಿದ್ದವು. ಇದನ್ನು ಮತ್ತೆ ಪ್ರಾರಂಬಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಹು ನಿರೀಕ್ಷೆಯ ಇಟ್ಟುಕೊಂಡಿತ್ತು ಆದರೆ ಕಳೆದ ಸ್ವಲ್ಪ ದಿನಗಳ ಹಿಂದೆ ಡಬಲ್‌ ಡೆಕ್ಕರ್‌ ಬಸ್‌’ ಕಾರ್ಯಾಚರಣೆ ಕನಸು ಸದ್ಯಕ್ಕೆ ಈಡೇರುವುದು ಅನುಮಾನ ವಿದೆ ಎಂದು ಸುದ್ದಿ ಹಬ್ಬಿತ್ತು.

ಡಬಲ್‌ ಡೆಕ್ಕರ್‌ ಬಸ್-ಗಳಿಗೆ ಮರು ಜೀವ?

ಡಬಲ್ ಡೆಕ್ಕರ್ ಬಸ್ ಸೇವೆಗಳಿಗೆ ಮರುಜೀವ ನೀಡಲು ಮುಂದಾಗಿರುವ ರಾಜ್ಯ ಸರ್ಕಾರವು ಮಂಡಿಸಲಾದ 2019-20ರ ಅವಧಿಯ ಬಜೆಟ್‌ನಲ್ಲಿ ರೂ.6 ಕೋಟಿ ಅನುದಾನಕ್ಕೆ ಒಪ್ಪಿಗೆ ಸೂಚಿಸಿದ್ದು, ಮೊದಲ ಹಂತವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಒಟ್ಟು 6 ಡಬ್ಬರ್ ಡೆಕ್ಕರ್ ಬಸ್‌ಗಳು ಸೇವೆ ಆರಂಭಿಸಲಿವೆ. ಮೊದಲ ಹಂತವಾಗಿ ಮೈಸೂರಿನಲ್ಲಿ ಡಬಲ್ ಡೆಕ್ಕರ್ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಲಿರುವ ಕರ್ನಾಟಕ ಸಾರಿಗೆ ಇಲಾಖೆಯು ಪ್ರವಾಸಿಗರ ಓಡಾಟಕ್ಕೆ ಹೊಸ ಸಂಚಾರ ವ್ಯವಸ್ಥೆ ಕಲ್ಪಿಸಲಿದ್ದು, ತದನಂತರವಷ್ಟೇ ರಾಜಧಾನಿ ಬೆಂಗಳೂರಿನಲ್ಲಿಯೂ ಸಹ ಡಬಲ್ ಡೆಕ್ಕರ್ ಬಸ್‌ಗಳು ಆರಂಭಿಸುವ ಚಿಂತನೆಯಲ್ಲಿದೆ.

ಈ ಯೋಜನೆಯ ಉದ್ದೇಶವೇನು?

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲವು ದೇಶದ ಆಯ್ದ 70 ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಬಸ್ ಕಾರ್ಯಾಚರಣೆಗೆ ಉತ್ಸುಕವಾಗಿತ್ತು. ಸಾರ್ವಜನಿಕ ಸಾರಿಗೆ ಪ್ರೋತ್ಸಾಹಿಸುವ ವಾಹನಗಳ ಸಂಚಾರ ದಟ್ಟಣೆ ತಗ್ಗಿಸುವ ಹಾಗೂ ಪ್ರಯಾಣಿಕರಿಗೆ ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸುವುದು ಈ ಡಬಲ್ ಡೆಕ್ಕರ್ ಬಸ್ ಯೋಜನೆಯ ಉದ್ದೇಶವಾಗಿತ್ತು. ಕೆಎಸ್‌ಆರ್‌ಸಿಯ ಈ ಬಸ್‌ಗಳನ್ನು ಐದು ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿತ್ತು. ಅದರಂತೆ ಬೆಂಗಳೂರು-ಮಂಗಳೂರು, ಬೆಂಗಳೂರು-ಮೈಸೂರು, ಬೆಂಗಳೂರು-ಹೈದರಾಬಾದ್, ಬೆಂಗಳೂರು-ಚೆನ್ನೈ ಹಾಗೂ ಬೆಂಗಳೂರು ಹುಬ್ಬಳ್ಳಿ ಮಾರ್ಗ ಗುರುತಿಸಲಾಗಿತ್ತು. ಈ ಮಾದರಿಯ ಬಸ್‌ಗಳ ದರ ಕೂಡ ದುಬಾರಿಯಾಗುತ್ತದೆ, ಏಕಾಏಕಿ ದೊಡ್ಡ ಸಂಖ್ಯೆಯ ಬಸ್‌ಗಳನ್ನು ಖರೀದಿಸುವುದು ಕಷ್ಟವಾಗುತ್ತದೆ ಎನ್ನುವ ಮಾತು ಕೂಡ ಕೇಳಿಬಂದಿದೆ.

ಡಬಲ್ ಡೆಕ್ಕರ್ ಬಸ್‌ ಬರುವುದು ಅನುಮಾನ?

ಕೆಎಸ್‌ಆರ್‌ಟಿಸಿಯು ಒಟ್ಟು 6 ಡಬಲ್ ಡೆಕ್ಕರ್ ಬಸ್‌ಗಳನ್ನು ಕಾಯಾಚರಣೆ ಮಾಡಲು ನಿರ್ಧರಿಸಿತ್ತು. ಬಸ್ ತಯಾರಿಸುವ ವೋಲ್ವೊ, ಲೈಲ್ಯಾಂಡ್, ಐಷರ್, ಟಾಟಾ ಸೇರಿದಂತೆ ಇತರೆ ಕಂಪನಿಗಳೊಂದಿಗೆ ಮಾತುಕತೆಯೂ ನಡೆದಿತ್ತು.ಆದರೆ ಯಾವ ಕಂಪನಿಗಳು ಡಬ್ಬಲ್ ಡೆಕ್ಕರ್ ಬಸ್‌ ತಯಾರಿಸಲು ಯಾವ ಕಂಪನಿಗಳೂ ಮುಂದೆ ಬರುತ್ತಿಲ್ಲ ಎನ್ನುವ ವಿಷಯ ಕೇಳಿ ಬಂದಿತು. ಈಗ ಸರ್ಕಾರ ಬಜೆಟ್‌ನಲ್ಲಿ ರಾಜ್ಯದ ವಿವಿಧಡೆ 44 ಹೊಸ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಒಪ್ಪಿಗೆ ಸೂಚಿಸಿದ್ದು, ಇದರ ಜೊತೆಗೆ 10 ಹೊಸ ಬಸ್ ಡಿಪೋಗಳಿಗೆ ಚಾಲನೆ ನೀಡಲಿದೆ. ಈ ಮೂಲಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಗೊಳಿಸಲು ಪ್ರಯತ್ನಿಸಿರುವುದಲ್ಲದೇ ಗ್ರಾಮಿಣ ಭಾಗದ ರಸ್ತೆಗಳ ನಿರ್ಮಾಣಕ್ಕೂ ಹೆಚ್ಚುವರಿ ಅನುದಾನವನ್ನು ಮೀಸಲು ಇರಿಸಲಾಗಿದೆ. ಎಂದು ತಿಳಿಸಿದೆ.

Also read: SBI ನಿಂದ ಗ್ರಾಹಕರಿಗೆ ಎಚ್ಚರಿಕೆ; ಹಣ ವಂಚನೆಯಾದರೆ ಬ್ಯಾಂಕ್-ನಿಂದ ನೇರವಾಗಿ ಮೂರೇ ದಿನಗಳಲ್ಲಿ ಹಣ ವಾಪಸ್..