ಅತಿ ಶೀಘ್ರದಲ್ಲೇ ಬೆಂಗಳೂರಿನ ರಸ್ತೆಗಿಳಿಯಲಿವೆ 3 ಸಾವಿರ BMTC ಎಲೆಕ್ಟ್ರಿಕ್ ಬಸ್‌ಗಳು, ಇದರಿಂದ ಮಾಲಿನ್ಯ ನಿಯಂತ್ರಣಕ್ಕೆ ಬರುತ್ತಾ??

0
440

ಜನಸಂಖ್ಯೆ ಹೆಚ್ಚಾದಂತೆ ವಾಯುಮಾಲಿನ್ಯ ಹೆಚ್ಚುತ್ತಿದ್ದು ಅದನ್ನು ನಿಯಂತ್ರಣಕ್ಕೆ ತರಲು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವ ಸರ್ಕಾರ ಈಗಾಗಲೇ ಹಲವು ಮಾದರಿಯ ವಿದ್ಯುತ್ ಚಾಲಿತ ವಾಹನಗಳನ್ನು ಚಲಾವಣೆಗೆ ತಂದಿದೆ. ಅದರಂತೆ ಬೆಂಗಳೂರಿನ BMTC ಸಂಸ್ಥೆಯು ಎಲೆಕ್ಟ್ರಿಕ್ ಬಸ್ ಗಳನ್ನು ರಸ್ತೆಗೆ ಇಳಿಸಲಿದೆ ಇದರಿಂದ ಅಲ್ಪ ಪ್ರಮಾಣದ ಮಾಲಿನ್ಯವನ್ನು ತಡೆಗಟ್ಟಬಹುದು ಎನ್ನುವ ವಿಚಾರದ ಹಿನ್ನೆಯಲ್ಲಿ ಎಲೆಕ್ಟ್ರಿಕ್ ಬಸ್ -ಗಳನ್ನು ಚಲಾವಣೆಗೆ ತರುತ್ತಿದೆ.

ಹೌದು ದೇಶಾದ್ಯಂತ ಸಾರ್ವಜನಿಕ ಸಾರಿಗೆ ಇಲಾಖೆಯಲ್ಲಿ ಭಾರೀ ಬದಲಾವಣೆ ತರಲಾಗುತ್ತಿದ್ದು, ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಬೆಂಗಳೂರಿನ ರಸ್ತೆಗಳು ಎಲೆಕ್ಟ್ರಿಕ್ ಬಸ್‌-ಗಳಿಂದ ತುಂಬಲಿವೆ, ಇದರಿಂದ ಈಗಾಗಲೇ ಹೆಚ್ಚು ಮನ್ನಣೆ ಪಡೆದು ಮಾಲಿನ್ಯಕ್ಕೆ ಕಾರಣಮವಾದ ಡೀಸೆಲ್ ಬಳಕೆಯಲ್ಲಿ ಬಹುತೇಕ ಬಳಕೆ ಕಡಿಮೆಯಾಗಲಿದೆ. ಇದೆಲ್ಲ ಬೆಳವಣಿಗೆಯಿಂದ ಎಲೆಕ್ಟ್ರಿಕ್ ಬಸ್‌ಗಳು ವಿಶ್ವದರ್ಜೆ ಸೇವೆಗಳನ್ನು ನೀಡಲು ಸಜ್ಜಾಗುತ್ತಿವೆ. ಈ ಸಂಬಂಧ ಕರ್ನಾಟಕ ಸರ್ಕಾರವು ಇ-ವಾಹನ ಉತ್ತೇಜನ ನೀತಿಯನ್ನು ಸಹ ಜಾರಿಗೊಳಿಸಿದ್ದು, ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಪ್ರಮಾಣವನ್ನು ಹೆಚ್ಚಳ ಮಾಡುವುದಕ್ಕಾಗಿ ಆಟೋ ಸಂಸ್ಥೆಗಳಿಗೆ ಭರ್ಜರಿ ಆಫರ್ ನೀಡುತ್ತಿದೆ.

ಈ ವಿಷಯವಾಗಿ ಮಾದ್ಯಮದವರೊಂದಿಗೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್ ಅವರು, ಸಿಲಿಕಾನ್ ಬೆಂಗಳೂರು ದೇಶದ ಐಟಿ ರಾಜಧಾನಿಯಾಗಿದ್ದು, ಮುಂದಿನ ದಿನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಗೂ ದೇಶದ ರಾಜಧಾನಿಯಾಗಲಿದೆ. ಆದಕಾರಣಕ್ಕೆ ಕರ್ನಾಟಕದ ಯಾವುದೇ ಭಾಗದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಘಟಕಗಳನ್ನು ತೆರೆಯುವ ಆಟೋ ಸಂಸ್ಥೆಗಳಿಗೆ ಇಂತಿಷ್ಟು ವರ್ಷಗಳ ತನಕ ತೆರಿಗೆ ವಿನಾಯ್ತಿ ಮತ್ತು ಕಡಿಮೆ ಅವಧಿಯಲ್ಲಿ ಪೂರ್ಣಪ್ರಮಾಣದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ನಿನ್ನೆ ನಡೆದ ‘ವಿದ್ಯುತ್ ವಾಹನಗಳ ಶೃಂಗಸಭೆ’ ಉದ್ಘಾಟಿಸಿ ಮಾತನಾಡಿದ ಅವರು ಈ ವಿನಾಯತಿಯನ್ನು ಘೋಷಣೆ ಮಾಡಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೆಷನ್:

ಬೆಂಗಳೂರಿನ ಉತ್ತಮ ವಾತಾವರಣ ಹಾಗೂ ಉತ್ತಮ ಪರಿಸರ ನಿರ್ಮಾಣಕ್ಕೆ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆ ಅತ್ಯಂತ ಮುಖ್ಯವಾಗಿದ್ದು, ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಕಾದ ಚಾರ್ಜಿಂಗ್ ಸ್ಟೆಷನ್ ನಿರ್ಮಾಣಕ್ಕೂ ಹೆಚ್ಚಿನ ಒತ್ತುನೀಡಲಾಗುತ್ತಿದೆ. ಇದರಲ್ಲಿ ವಿಶ್ವದ ಮೂರು ಪ್ರಮುಖ ದೇಶಗಳ ಪೈಕಿ ಭಾರತ ಕೂಡ ಒಂದಾಗಿದ್ದು ಸದ್ಯ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರಕ್ಕೆ ಸುಮಾರು ರೂ.2 ಲಕ್ಷ ಕೋಟಿ ಹೂಡಿಕೆಯಾಗಿದೆ ಎಂದು ಮಧ್ಯಮ ಮತ್ತು ಭಾರೀ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ವಸತಿ ಪ್ರದೇಶಗಳಲ್ಲಿ ಚಾರ್ಜಿಂಗ್ ಪಾಯಿಂಟ್:

ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಪಾಯಿಂಟ್ ತೆರೆಯಲು ಅರ್ಪಾಟ್‌ಮೆಂಟ್‌ ಮತ್ತು ವಸತಿ ಸಮುಚ್ಚಯಗಳಲ್ಲಿ ಶೇ.10ರಷ್ಟು ಜಾಗವನ್ನು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ತೆರೆಯಲು ಮೀಸಲು ಇರಿಸಬೇಕೆಂಬ ಹೊಸ ನಿಯಮಗಳನ್ನು ಜಾರಿ ಮಾಡಲು ಚಿಂತಿಸಲಾಗಿದ್ದು, ಇದಕ್ಕೆ ಸಂಬಧಪಟ್ಟಂತೆ ಸದ್ಯದಲ್ಲೇ ನಿಯಮ ಜಾರಿಯಾಗಲಿದೆ. ಎಂದು ತಿಳಿಸಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಶಿಖಾ ಅವರು, ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲದೇ ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಚೆನ್ನೈ ನಡುವೆಯು ಅಗತ್ಯ ಚಾರ್ಜಿಂಗ್ ಸ್ಟೆಷನ್‌ಗಳನ್ನು ನಿರ್ಮಾಣ ಮಾಡುವ ಯೋಜನೆ ಕುರಿತು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವ ರಾಜ್ಯಸರ್ಕಾರ ಈ ಮೂಲಕ ಸರಿ ಸುಮಾರು 55 ಸಾವಿರ ಉದ್ಯೋಗ ಅವಕಾಶಗಳು ಸಹ ಸೃಷ್ಠಿಯಾಗಲಿವೆ ಎಂದು ತಿಳಿಸಿದ್ದಾರೆ.

Also read: ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಇದು ಮಥುರೆಯ ರೈಲ್ವೆ ನಿಲ್ದಾಣ, ಯಾವ ಏರ್ಪೋರ್ಟ್-ಗೇನೂ ಕಮ್ಮಿಯಿಲ್ಲ!! ಇದೇ ಅಲ್ಲವಾ “ಅಚ್ಛೇ ದಿನ್” ಅಂದ್ರೆ..