ಭಾರೀ ದುರಂತ: ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ 11 ಮಂದಿ ಸಾವು; ಹಲವರು ನಾಪತ್ತೆ.!

0
273

ದೇಶದ ತುಂಬೆಲ್ಲ ಈ ವರ್ಷದ ಗಣೇಶ್ ಹಬ್ಬದಲ್ಲಿ ಯಾವುದೇ ದೊಡ್ಡ ಮಟ್ಟದ ಘಟನೆ ನಡೆಯಲಿಲ್ಲ ಎಲ್ಲವೂ ಒಳ್ಳೆಯದೆ ಆಯಿತೆಂದು ಸಂತಸದಲ್ಲಿದ ದೇಶಿಗರಿಗೆ ಆಘಾತಕಾರಿ ಸುದ್ದಿಯೊಂದು ತಿಳಿದಿದ್ದು, ಭೋಪಾಲ್ ನಲ್ಲಿ ಗಣೇಶ ವಿಸರ್ಜಿಸಲು ಕಟ್ಲಾಪುರ ನಾಲೆಗೆ ತೆರಳಿದ್ದ 11 ಮಂದಿ ಜಲ ಸಮಾಧಿಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ 11 ಶವ ಪತ್ತೆಯಾಗಿದ್ದು, 6 ಜನರನ್ನು ರಕ್ಷಿಸಲಾಗಿದೆ. ಇದು ಗಣೇಶನ ವಿಸರ್ಜನೆಯ ಕೊನೆಯ ದಿನವೇ ದುರ್ಘಟನೆ ನಡೆದಿದ್ದು ಮುಂಜಾನೆ 4.30ರ ಸುಮಾರಿನಲ್ಲಿ ಈ ದುರಂತ ಸಂಭವಿಸಿದೆ. ಮುಳುಗು ತಜ್ಞರೊಂದಿಗೆ 40 ಮಂದಿ ಪೊಲೀಸರು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಹೌದು ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬೋಪಾಲ್ ನಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿ ವಿವಿಧೆಡೆ ವಿನಾಯಕ ವಿಸರ್ಜನೆ ಸಂದರ್ಭದಲ್ಲಿ ಸಂಭವಿಸುತ್ತಿರುವ ಜಲ ದುರಂತಗಳು ಮುಂದುವರೆದಿವೆ. ಇತ್ತ ಕಟಡ್ಲಾಪುರ ಕೆರೆಯಲ್ಲೂ ನೀರಿನ ಪ್ರಮಾಣ ಹೆಚ್ಚಾಗಿತ್ತು. ಹೀಗಿದ್ದರೂ ತುಂಬಿದ ಕೆರೆ ಮಧ್ಯೆ ಗಣೇಶ ವಿಸರ್ಜನೆಗೆ ತೆರಳಿದ್ದಾರೆ. ಅದರೆ ನೀರಿನ ಪ್ರಮಾಣ ಹೆಚ್ಚಾಗಿದ್ದು ನಿಯಂತ್ರಣ ಕಳೆದುಕೊಂಡ ದೋಣಿ ಅರ್ಧದಲ್ಲೇ ಮಗುಚಿದೆ. ಗಣೇಶ ಮೂರ್ತಿ ಹಿಡಿದು ಕುಳಿತಿದ್ದವರೆಲ್ಲಾ ಕೆರೆಗೆ ಬಿದ್ದಿದ್ದಾರೆ. ದೋಣಿಯಲ್ಲಿ ಒಟ್ಟು 19 ಮಂದಿ ಇದ್ದು, ಇವರೆಲ್ಲಾ ಪಿಪ್ಲನಿ ಪ್ರದೆಶದವರೆಂಬ ಮಾಹಿತಿ ಲಭ್ಯವಾಗಿದೆ.

ಗಣೇಶ ಮೂರ್ತಿಯನ್ನು ಕ್ರೇನ್ ಸಹಾಯದಿಂದ ಕೆರೆಯಲ್ಲಿ ವಿಸರ್ಜಿಸಲು ಮುಂದಾಗಿದ್ದರು. ಈ ವೇಳೆ 19 ಮಂದಿ ದೋಣಿಯಲ್ಲಿ ಕುಳಿತು ಕ್ರೇನ್ ಮೂಲಕ ಮೂರ್ತಿಯನ್ನು ಕೆರೆ ಮಧ್ಯೆ ಕೊಂಡೊಯ್ಯುತ್ತಿದ್ದರು. ದುರಾದೃಷ್ಟವಶಾತ್ ವಿಘ್ನ ನಿವಾರಕನನ್ನು ವಿಸರ್ಜಿಸುವ ಮೊದಲೇ ಇಂತಹುದ್ದೊಂದು ಭಾರೀ ದುರಂತ ಸಂಭವಿಸಿದೆ. ಮಾಹಿತಿ ಪಡೆಯುತ್ತಿದ್ದಂತೆಯೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. 6 ಮಂದಿಯಲ್ಲಿ ರಕ್ಷಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಆದರೆ ಕೆರೆ ತುಂಬ ಆಳವಾಗಿದ್ದ ಪರಿಣಾಮ 11 ಮಂದಿ ಜಲ ಸಮಾಧಿಯಾಗಿದ್ದಾರೆ.

ಮುಳುಗು ತಜ್ಞರೊಂದಿಗೆ 40 ಮಂದಿ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡ ಕೂಡಾ ದುರ್ಘಟನಾ ಸ್ಥಳದಲ್ಲಿರುವುದಾಗಿ ಅವರು ತಿಳಿಸಿದ್ದಾರೆ. ದೋಣಿ ದುರಂತದಲ್ಲಿ ಮೃತಪಟ್ಟ ಕುಟುಂಬ ಸದಸ್ಯರಿಗೆ ತಲಾ 4 ಲಕ್ಷ ರೂ. ಪರಿಹಾರವನ್ನು ಮಧ್ಯ ಪ್ರದೇಶ ಸಚಿವ ಪಿ. ಸಿ. ಶರ್ಮಾ ಪ್ರಕಟಿಸಿದ್ದಾರೆ. ಇದೊಂದು ದುರದೃಷ್ಟಕರ ಸಂಗತಿಯಾಗಿದೆ. ಜಿಲ್ಲಾಧಿಕಾರಿಗಳಿಂದ ಪರಿಹಾರವನ್ನು ವಿತರಿಸಲಾಗುವುದು, ಈ ದುರಂತ ಸಂಭದ ತನಿಖೆ ನಡೆಸಲಾಗುವುದು ಎಂದು ಶರ್ಮಾ ಹೇಳಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಇಂತಹದೆ ಘಟನೆ ರಾಜ್ಯದಲ್ಲಿ ಸಂಭವಿಸಿದ್ದು, ಪುಟ್ಟ ಪುಟ್ಟ ಗಣೇಶ ಮೂರ್ತಿಗಳನ್ನು ತಯಾರಿಸಿ ವಿಸರ್ಜನೆ ಮಾಡಲು ಹೋಗಿದ್ದ 6 ಮಕ್ಕಳು ನೀರು ಪಾಲಾಗಿರುವ ದಾರುಣ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಕ್ಯಾಸಂಬಲ್ಲಿ ಹೋಬಳಿಯ ಮರದಕಟ್ಟ ಕೆರೆಯಲ್ಲಿ ನಡೆದಿತ್ತು, ಮೃತರಲ್ಲಿ ನಾಲ್ವರು ಬಾಲಕಿಯರು ಸೇರಿದಂತೆ ಇಬ್ಬರು ಬಾಲಕರು ನೀರು ಪಾಲಾಗಿದ್ದರು. ಈಗ ಮಹಾರಾಷ್ಟ್ರದಲ್ಲಿ ನಡೆದಿದೆ.

Also read: ಮೋದಿಯಿಂದಲೇ ಚಂದ್ರಯಾನ-2ಗೆ ಅಪಶಕುನವಾಯಿತು; ಎಚ್.ಡಿ.ಕೆ.ಯಿಂದ ಬೇಜವಾಬ್ದಾರಿ ಹೇಳಿಕೆ!!