ಉಸೇನ್ ಬೋಲ್ಟ್ ಕೊನೆಯ ಬಾರಿಯ ರೇಸ್ ಎಲ್ಲಿ ಗೊತ್ತಾ?

0
903

ಒಲಿಂಪಿಕ್ಸ್‌ನ ಟ್ರಿಪಲ್ ಟ್ರಿಪಲ್ ಚಾಂಪಿಯನ್ ಜಮೈಕಾದ ಮಿಂಚಿನ ಓಟಗಾರ ಉಸೇನ್ ಬೋಲ್ಟ್ ಈಗಾಗಲೇ ವೃತ್ತಿ ಪರ ಘೋಷಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಅವರ ಅಂತಿಮ ರೇಸ್ ಎಲ್ಲಿ ಎಂಬ ರಹಸ್ಯ ಇದೀಗ ಬಹಿರಂಗವಾಗಿದೆ.

ಹೌದು, ಬೋಲ್ಟ್ ರಿಯೋ ಒಲಿಂಪಿಕ್ಸ್ ತಮ್ಮ ಕೊನೆಯ ಒಲಿಂಪಿಕ್ಸ್ ಎಂದು ಪ್ರಕಟಿಸಿದ್ದಾರೆ. ಅಬ್ಬಬ್ಬಾ ಅಂದರೆ ಇನ್ನೊಂದು ವರ್ಷ ಕಣದಲ್ಲಿರುವೆ ಎಂದಿದ್ದರು. ಮುಂದಿನ ವರ್ಷ ಆಗಸ್ಟ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ ಶಿಪ್ ಕೊನೆಯದಾಗಿದೆ. ಆದರೆ ಅದಕ್ಕೂ ಮುನ್ನ ಅವರು ತವರಿನಲ್ಲಿ ಕೊನೆಯ ಬಾರಿ ರೇಸ್‌ನಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ.

ಮುಂದಿನ ವರ್ಷ ಜೂನ್‌ನಲ್ಲಿ ತಮ್ಮ ತವರು ಜಮೈಕಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊ ಳ್ಳುವುದನ್ನು ಖಚಿತಪಡಿಸಿದ್ದಾರೆ. ಈ ಮೂಲಕ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಕೊನೆಯ ಬಾರಿ ಸ್ಪರ್ಧಿಸಲಿ ರುವುದು ದೃಢಪಟ್ಟಂತಾಗಿದೆ.

೩೦ ವರ್ಷದ ಬೋಲ್ಟ್ ಜಮೈಕಾದಲ್ಲಿ ನಡೆಯುವ ಜೂನ್ಸ್ ರೇಸರ‍್ಸ್ ಗ್ರ್ಯಾಂಡ್ ಪ್ರೀನಲ್ಲಿ ಸ್ಪರ್ಧಿಸಲಿದ್ದಾರೆ. ಇದೇ ವರ್ಷ ನಡೆದ ಈ ರೇಸ್‌ನ ೧೦೦ಮೀ. ವಿಭಾಗದಲ್ಲಿ ಬೋಲ್ಟ್ ಚಿನ್ನದ ಪದಕ ಗೆದ್ದಿದ್ದರು.

ಆಗಸ್ಟ್‌ನಲ್ಲಿ ಅಂತಿಮ ರೇಸ್‌ನಲ್ಲಿ ಭಾಗವಹಿಸಲಿದ್ದೇನೆ. ಆದರೆ ತವರಿನಲ್ಲಿ ಕೊನೆಯ ಬಾರಿ ಸ್ಪರ್ಧಿಸಲಿರುವುದು ನಾನು ತವರಿನ ಅಭಿಮಾನಿಗಳಿಗಾರಿ. ಇದು ನಾನು ಅವರಿಗೆ ನೀಡುವ ಕಾಣಿಕೆ ಎಂದು ಬೋಲ್ಟ್ ನುಡಿದಿದ್ದಾರೆ.