ಭಾರತ ಗಡಿಯಲ್ಲಿ ಮತ್ತೆ ಬಾಂಬ್ ಸ್ಪೋಟ; ಉಗ್ರರ ಗುಂಡಿನ ದಾಳಿಯಲ್ಲಿ ಒಬ್ಬ ನಾಗರಿಕ ಸೇರಿದಂತೆ ನಾಲ್ವರು ಸೈನಿಕರು ಬಲಿ..

0
439

ಪಾಕಿಸ್ತಾನದ ವಶದಲ್ಲಿದ್ದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ತಮಾನ್​ ಅವರನ್ನು ಭಾರತಕ್ಕೆ ಒಪ್ಪಿಸಿ ಮಾನವಿತೆ ಮೆರೆದ ಪಾಕ್ ಮತ್ತೆ ತನ್ನ ಯೋಗ್ಯತೆಯನ್ನು ತೋರಿಸಿದೆ. ನಾಯಿಯ ಬಾಲ ಯಾವತ್ತು ಡೊಂಕು ಎನ್ನುವ ರೀತಿಯಲ್ಲಿ ಪಾಕ್ ಮತ್ತೆ ಉಗ್ರರನ್ನು ಚೂ ಬಿಟ್ಟಿದ್ದು ಗಡಿಯಲ್ಲಿ ಇಂದು ಮತ್ತೆ ಬಾಂಬ್ ಸ್ಪೋಟ ಗೊಂಡಿದೆ, ಅಷ್ಟೇಅಲ್ಲದೆ ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿರುವ ಬಬಾಗುಂದ್ ಲಾಂಗೇಟ್​​ ಪ್ರದೇಶದಲ್ಲಿ ಇಂದು ಭಾರತೀಯ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಓರ್ವ ಸ್ಥಳೀಯ ಕೂಡ ಸಾವನ್ನಪ್ಪಿದ್ದು, ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

Also read: ಅಭಿನಂದನ್ ಪಾಕ್ ಕೈಯಲ್ಲಿ ಬಂಧಿಯಾಗುವ ಮೊದಲು ಮುಖ್ಯ ರಹಸ್ಯ ದಾಖಲೆಗಳನ್ನು ನುಂಗಿ ಅದನ್ನು ನಾಶ ಪಡಿಸಿದ್ದರು, ಅವರಿಗೆ ಹ್ಯಾಟ್ಸ್ ಆಫ್!!

ಮತ್ತೆ ಬಾಂಬ್ ಸ್ಪೋಟ?

ಜಮ್ಮು ಕಾಶ್ಮೀರದ ಟ್ರಾಲ್ ನಲ್ಲಿ ಮತ್ತೆ ಬಾಂಬ್​ ಸ್ಟೋಟ ಮಾಡಲಾಗಿದೆ. ಭಾರತೀಯ ಸೇನಾ ಪಡೆಯನ್ನು ಗುರಿಯಾಗಿಸಿಕೊಂಡು ಐಇಡಿ ಸ್ಪೋಟಿಸಲಾಗಿದೆ. ಇಂದು ಶನಿವಾರ ಮುಂಜಾನೆ ಸುಮರು 3 ಗಂಟೆಗೆ ಟ್ರಾಲ್​ ಬಳಿ ಸ್ಪೋಟ ನಡೆದಿದ್ದು, ಓರ್ವ ನಾಗರೀಕ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಮತ್ತೆ ಉಗ್ರರ ದಾಳಿ?

ಕುಪ್ವಾರಾದ ಬಾಬಾಗುಂಡ್‌ ಪ್ರದೇಶದಲ್ಲಿ ಉಗ್ರರು ಅಡಗಿರುವ ಮಾಹಿತಿ ದೊರೆತ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದರಿಂದ ಎರಡೂ ಕಡೆಯಿಂದ ಗುಂಡಿನ ಚಕಮಕಿ ಆರಂಭಗೊಂಡಿತ್ತು. ಒಂದು ಹಂತದಲ್ಲಿ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದ್ದವು. ಕೆಲ ಹೊತ್ತು ಗುಂಡಿನ ಚಕಮಕಿಗೆ ವಿರಾಮ ಬಿದ್ದಿತ್ತು. ಉಗ್ರರು ಸಾವನ್ನಪ್ಪಿರುವ ಶಂಕೆಯ ಮೆರೆಗೆ ಉಗ್ರರ ಅಡಗುದಾಣದತ್ತ ಭದ್ರತಾ ಪಡೆಗಳು ಮುನ್ನುಗ್ಗಿದ ಸಂದರ್ಭದಲ್ಲಿ, ಭದ್ರತಾ ಪಡೆಗಳ ಮೇಲೆ ಉಗ್ರರು ಏಕಾಏಕಿ ಗುಂಡು ಹಾರಿಸಿದ್ದಾರೆ. ಈ ಅನಿರೀಕ್ಷಿತ ದಾಳಿಯಲ್ಲಿ 9 ಮಂದಿ ಭದ್ರತಾ ಸಿಬ್ಬಂದಿ ಉಗ್ರರ ಗುಂಡು ತಗುಲಿ ಗಾಯಗೊಂಡಿದ್ದು, ಅವರಲ್ಲಿ ಐದು ಮಂದಿ ಸಾವಿಗೀಡಾಗಿದ್ದಾರೆ. ಮೃತರಲ್ಲಿ ಓರ್ವ ಸಿಆರ್‌ಪಿಎಫ್‌ ಇನ್ಸ್‌ಪೆಕ್ಟರ್‌, ಓರ್ವ ಯೋಧ, ಇಬ್ಬರು ಸೇನಾ ಸಿಬ್ಬಂದಿ ಹಾಗೂ ಓರ್ವ ಪೊಲೀಸ್‌ ಸಿಬ್ಬಂದಿ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಗ್ರರ ಪರ ಪಾಕ್ ಬ್ಯಾಟಿಂಗ್;

ಒಂದೆಡೆ ಪಾಕಿಸ್ತಾನದ ವಶದಲ್ಲಿದ್ದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ತಮಾನ್​ ಅವರನ್ನು ಇಡೀ ದೇಶವೇ ಹರ್ಷದಿಂದ ಬರಮಾಡಿಕೊಂಡಿದ್ದರೆ ಇನ್ನೊಂದೆಡೆ ಜಮ್ಮು ಕಾಶ್ಮೀರದಲ್ಲಿ ಮತ್ತೆ ರಕ್ತಪಾತವಾಗಿದೆ. ಇಲ್ಲಿನ ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿರುವ ಬಬಾಗುಂದ್ ಲಾಂಗೇಟ್​​ ಪ್ರದೇಶದಲ್ಲಿ ಇಂದು ಭಾರತೀಯ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ದಾಳಿ ನಡೆದಿದೆ. ಇದನ್ನು ಮಾಡಿರುವುದು ಜೈಷ್ ಸಂಘಟನೆ ಎಂದು ಒಪ್ಪಲು ಪಾಕ್ ನಿರಾಕರಿಸಿದ್ದು ಮತ್ತೆ ಉಗ್ರ ಸಂಘಟನೆ ಪರ ಪಾಕ್ ಸರ್ಕಾರ ಮಾತನಾಡಿದೆ. ಸಿಆರ್ ಪಿಎಫ್ ಯೋಧರ ಮೇಲೆ ಉಗ್ರರ ದಾಳಿ ಪ್ರಕರಣ ಜೈಷ್-ಇ- ಮೊಹಮ್ಮದ್ ಸಂಘಟನೆಯನ್ನ ಸಮರ್ಥಿಸಿಕೊಂಡ ಪಾಕ್, ಪುಲ್ವಾಮಾ ದಾಳಿಯಲ್ಲಿ ಜೈಷ್ ಕೈವಾಡವಿಲ್ಲ, ಪಾಕ್ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಶಿ ಹೇಳಿಕೆ ನೀಡಿದ್ದಾರೆ. ಇದರ ವಿರುದ್ದ ಭಾರತದಲ್ಲಿ ವಿರೋಧ ವ್ಯಕ್ತವಾಗಿದೆ.

ಪಾಕ್ ಪೈಲಟ್ ನನ್ನೇ ಕೊಂದ ಪಾಕಿಗಳು

ಭಾರತದ ಮೇಲೆ ದಾಳಿ ನಡೆಸಲು ಬಂದಿದ್ದ ಪಾಕ್ ನ ಎಫ್ 16 ವಿಮಾನವೊಂದನ್ನು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದರು. ಧ್ವಂಸಗೊಂಡ ಎಫ್ 16ನಿಂದ ಹೊರ ಹಾರಿದ್ದ ಪಾಕ್ ಪೈಲಟ್ ಪ್ಯಾರಾಚೂಟ್ ನಿಂದ ಅರೆಪ್ರಜ್ಞಾವಸ್ಥೆಯಲ್ಲಿ ಕೆಳಕ್ಕೆ ಬಿದ್ದಿದ್ದ ಎಂದು ವರದಿ ತಿಳಿಸಿದೆ. ಈ ವೇಳೆ ಗುಂಪುಗೂಡಿ ಬಂದ ಪಾಕಿಸ್ತಾನದ ಸ್ಥಳೀಯರು ಮಾರಣಾಂತಿಕವಾಗಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದ. ಆತ ಪಾಕಿಸ್ತಾನಿ ಎಂಬ ಸತ್ಯ ತಿಳಿಯುಷ್ಟರಲ್ಲಿ ಪೈಲಟ್ ಕೊನೆಯುಸಿರೆಳೆದಿದ್ದ. ಎನ್ನುವುದು ತಡವಾಗಿ ಬೆಳಕಿಗೆ ಬಂದಿದೆ.

Also read: ಅಭಿನಂದನ್ ಬರಮಾಡಿಕೊಳ್ಳಲು ದೆಹಲಿಗೆ ತಲುಪಿದ ತಂದೆ ತಾಯಿಗೆ ಸಿಕ್ಕ ಗೌರವ; ಪ್ರತಿಯೊಂದು ಪಾಲಕರು ತಮ್ಮ ಮಕ್ಕಳನ್ನು ಬೆಳೆಸಲು ಮಾದರಿಯಾಗಿದೆ..