ಮಲ್ಟಿಪ್ಲೆಕ್ಸ್ ಥಿಯೇಟರ್-ನಲ್ಲಿನ ದುಬಾರಿ ತಿಂಡಿ-ತಿನಿಸುಗಳಿಗೆ ಬೀಳಲಿದೆಯೇ ಬ್ರೇಕ್?? ಹೊರಗಿನ ತಿಂಡಿಗಳನ್ನು ಇನ್ಮೇಲೆ ಒಳಗಡೆ ಬಿಡುತ್ತಾರ?

0
482

ಹೊರಗಿನ ಆಹಾರವನ್ನು ಚಲನಚಿತ್ರ ಥಿಯೇಟರ್ಗಳಲ್ಲಿ ಮತ್ತು ರಾಜ್ಯದಾದ್ಯಂತ ಮಲ್ಟಿಪ್ಲೆಕ್ಸ್ಗಳಲ್ಲಿ ಹೊರಗಿನ ಆಹಾರದ ನಿಷೇಧವನ್ನು ಪ್ರಶ್ನಿಸುವ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಬಗ್ಗೆ ಉತ್ತರಿಸಲು ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರಕಾರವನ್ನು ಪ್ರಶ್ನಿಸಿದೆ. ಏನಿದೆ ಈ ಪಿಐಎಲ್ ನಲ್ಲಿ ಎಂದು ತಿಳಿಯಲು ಮುಂದೆ ಓದಿ.

ಥಿಯೇಟರ್ ಒಳಗೆ ಹೋಗುವ ಮೊದಲು ಒಬ್ಬ ವ್ಯಕ್ತಿಯನ್ನು ಪರಿಶೀಲಿಸಿದಾಗ, ಆಹಾರದ ವಸ್ತುಗಳನ್ನು ಒಳಗೆ ಅನುಮತಿಸಲಾಗುವುದಿಲ್ಲ ಮತ್ತು ನಂತರ ಥಿಯೇಟರ್ನಲ್ಲಿ ದೊರೆಯುವ ಆಹಾರವನ್ನು ಖರೀದಿಸಲು ಪ್ರೋತ್ಸಾಹ ನೀಡುತ್ತೀರ ಈ ರೀತಿ ಮಾಡುವ ಹಿಂದಿನ ಉದ್ದೇಶ ಏನು ಎಂದು ನ್ಯಾಯಾಲಯ ಪ್ರಶ್ನಿಸಿದೆ. ನ್ಯಾಯಮೂರ್ತಿಗಳಾದ ಆರ್. ಎಂ. ಬೋರ್ಡೆ ಮತ್ತು ರಾಜೇಶ್ ಕೇಟ್ಕರ್ ಅವರ ಪೀಠವು ಮೂರು ವಾರಗಳೊಳಗೆ ನ್ಯಾಯಾಲಯಕ್ಕೆ ಅಂತಹ ನಡೆಯ ಅಥವಾ ನಿಯಮದ ಹಿಂದಿನ ಕಾರಣವನ್ನು ತಿಳಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತು. ಈ ರೀತಿ ಮಾಡಲು ಏನಾದರು ಕಾನೂನು ಇದೆಯೇ ಎಂದು ಅವರು ಕೇಳಿದರು.

ನೀವು ಥೀಯೇಟರ್ ಗೆ ಬರುವ ಎಲ್ಲರನ್ನು ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲಿಸುತ್ತೀರ, ನಂತರ ಅವರ ಬಳಿ ಇರುವ ಎಲ್ಲ ಆಹಾರವನ್ನು ಕಸಿದುಕೊಂಡು ಥಿಯೇಟರ್ನಲ್ಲಿ ದೊರಕುವ ಜಂಕ್ ಫುಡ್ ಖರೀದಿಸಲು ಪ್ರೋತ್ಸಾಹಿಸುತ್ತೀರ, ಈ ನಿಯಮದಿಂದ ಹಿರಿಯ ನಾಗರಿಕರಿಗೆ, ಕಾಯಿಲೆ ಇರುವವರಿಗೆ ಮತ್ತು ಚಿಕ್ಕ ಮಕ್ಕಳಿಗೆ ತುಂಬ ತೊಂದರೆಯಾಗಿದೆ. ಥಿಯೇಟರ್ ನಲ್ಲಿ ಬಹುತೇಕ ಸಿಗುವ ಜಂಕ್ ಫುಡ್ನಿಂದ ಅವರ ಆರೋಗ್ಯ ಹಾಳಾಗುತ್ತದೆ ಎಂದು ಜೈನೇಂದ್ರ ಬಕ್ಷಿ ಎಂಬುವವರು ತಮ್ಮ ವಕೀಲರಾದ ಆದಿತ್ಯ ಪ್ರಕಾಶ್ ಅವರ ಮೂಲಕ ಬಾಂಬೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ಒಟ್ಟಾರೆ ಹೆಚ್ಚಾಗಿ ಜಂಕ್ ಫುಡ್ ಮಾರುವ ಥಿಯೇಟರ್ಗಳ ವಿರುದ್ಧ ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ ಕಾದು ನೋಡಬೇಕು.