ನಮ್ಮ ದೇಹದ ಮೂಳೆಗಳ ಬಗ್ಗೆ ನಿಮಗೆಷ್ಟು ಗೊತ್ತು?? ನಿಮಗೇ ಗೊತ್ತಿಲ್ಲದ ಕುತೂಹಲಕಾರಿ ವಿಷಯ ಇಲ್ಲಿದೆ ನೋಡಿ.

0
1449

ಮಾನವ ದೇಹವು ಮೂಳೆ ಮಾಂಸದ ತಡಿಕೆ… ಅಂತ ಹಾಡಿ ನಾವು ಸುಮ್ಮನಾಗಿ ಬಿಡುತ್ತೇವೆ. ನಮ್ಮ ದೇಹದಲ್ಲಿ ಮೂಳೆಗಳು ಇವೆ, ಅದರ ಕಡೆ ಗಮನ ಹರಿಸಬೇಕು ಎಂಬುದಾಗಲಿ ನಾವು ಯೋಚಿಸುವುದಿಲ್ಲ. ಅಷ್ಟಕ್ಕೂ ಎಷ್ಟೋ ಜನಕ್ಕೆ ಮೂಳೆ ಇದೆ ಅನ್ನೋದೆ ಅಪಘಾತವೂ ಅಥವಾ ಇನ್ನಾವುದರಿಂದಲೋ ಸಮಸ್ಯೆ ಕಂಡು ಬಂದಾಗಲೇ ಗೊತ್ತಾಗುವುದು. ಅಲ್ಲಿಯವರೆಗೆ ನಾವು ಮೂಳೆಗಳ ಬಗ್ಗೆಯಾಗಲಿ, ಅದನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕೆಂದಾಲಿ ಯೋಚಿಸುವುದೇ ಇಲ್ಲ.

ನಿಜ ವಿಷಯ ಏನೆಂದರೆ ನಮ್ಮ ಮೂಳೆಗಳಿಗೆ ಜೀವನ ಪರ್ಯಂತ ಆರೈಕೆ ಮತ್ತು ರಕ್ಷಣೆಯ ಅಗತ್ಯವಿದೆ. ಅಸ್ಥಿ ಪಂಜರ ವ್ಯವಸ್ಥೆಯಲ್ಲಿ, ಮೂಳೆಗಳು, ಸ್ನಾಯುಗಳು, ಮೂಳೆ ಕಟ್ಟುಗಳು ಮತ್ತು ಕಾರ್ಟಿಲೇಜ್ ಸೇರಿರುತ್ತದೆ. ಇವುಗಳೆಲ್ಲವು ಕೂಡಿ ಅತ್ಯಂತ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತವೆ.

ಬನ್ನಿ, ಈ ಅಸ್ಥಿಪಂಜರದ ವ್ಯವಸ್ಥೆಯ ಅದ್ಭುತ ಸಂಗತಿಗಳನ್ನು ತಿಳಿದುಕೊಳ್ಳೋಣ.

ಕೈ ಮತ್ತು ಕಾಲು ಮೂಳೆಗಳು:

ಕೈಗಳು ಮತ್ತು ಕಾಲುಗಳಲ್ಲಿನ ಮೂಳೆಗಳು ನಮ್ಮ ಇಡೀ ದೇಹದಲ್ಲಿ ಸಮ ಪ್ರಮಾಣದಲ್ಲಿ ವಿತರಣೆಯಾಗಿರುತ್ತವೆ. ಕೆಲವೊಂದು ಭಾಗಗಳಲ್ಲಿ ಮಾತ್ರ ಇತರೆ ಭಾಗಗಳಿಗಿಂತ ಹೆಚ್ಚಿನ ಮೂಳೆಗಳು ಇರುತ್ತವೆ. ನಿಮ್ಮ ಕೈಗಳಲ್ಲಿ 27 ಮೂಳೆಗಳು ಮತ್ತು ಪ್ರತಿ ಕಾಲಿನಲ್ಲಿ 26 ಮೂಳೆಗಳು ಇರುತ್ತವೆ. ಇದರರ್ಥ ನಿಮ್ಮ ಕೈ-ಕಾಲು ಎರಡು ಸೇರಿ 106 ಮೂಳೆಗಳು ಇರುತ್ತವೆ. ಹೀಗೆ ನಿಮ್ಮ ಕೈ ಮತ್ತು ಕಾಲು ಎರಡು ಸೇರಿ ನಿಮ್ಮ ದೇಹದ ಅರ್ಧ ಭಾಗದಷ್ಟು ಮೂಳೆಗಳನ್ನು ಹೊಂದಿರುತ್ತವೆ.

ದೇಹದಲ್ಲಿ ಮೂಳೆಗಳು ಅತ್ಯಂತ ಗಟ್ಟಿಯಾದ ಭಾಗವಲ್ಲ ನಿಮ್ಮ ಇಡೀ ದೇಹದಲ್ಲಿರುವ ಅತ್ಯಂತ ಬಲಿಷ್ಟ ಭಾಗವೆಂದರೆ ಅದು ಹಲ್ಲುಗಳ ಎನಾಮೆಲ್ ಹೊರತು ಮೂಳೆಗಳಲ್ಲ. ಹಲ್ಲುಗಳ ಎನಾಮೆಲ್ ನಿಮ್ಮ ಹಲ್ಲುಗಳ ಮೇಲ್ಭಾಗವನ್ನು ಕಾಪಾಡುತ್ತವೆ. ಕ್ಯಾಲ್ಸಿಯಂ ಸಾಲ್ಟ್‌‌ ಸೇರಿ ಈ ಎನಾಮೆಲ್ ಅನ್ನು ಸದೃಢಗೊಳಿಸಿರುತ್ತವೆ.

ಮೂಳೆ ಸ್ಟೀಲ್‍ಗಿಂತ ಸದೃಢ

ಒಂದು ವೇಳೆ ನಾವು ನಮ್ಮ ತೂಕವನ್ನು ಮತ್ತು ಮೂಳೆಗಳನ್ನು ಮತ್ತು ಮೂಳೆಗಳು ಹಾಗು ಸ್ಟೀಲ್ ಅನ್ನು ಪರಿಗಣನೆಗೆ ತೆಗೆದುಕೊಂಡರೆ, ನಮ್ಮ ಮೂಳೆಗಳು ಸ್ಟೀಲ್‍ಗಿಂತ ಸದೃಢವಾಗಿರುತ್ತವೆ.

ಮೂಳೆಗಳಲ್ಲೂ ಜೀವವಿದೆ!

ನಮ್ಮಲ್ಲಿ ಬಹುತೇಕ ಮಂದಿ ಅಂದುಕೊಂಡಿದ್ದೇವೆ ಮೂಳೆಗಳು ನಿರ್ಜೀವ ಕೋಶಗಳೆಂದು. ಆದರೆ ಮೂಳೆಗಳು ಮಾನವನ ದೇಹದಲ್ಲಿರುವವರೆಗೆ ಜೀವಂತವಾಗಿರುತ್ತವೆ. ಇವುಗಳು ಕ್ಯಾಲ್ಸಿಯಂ ಮತ್ತು ಸಜೀವ ಕೋಶಗಳನ್ನು ಹೊಂದಿರುತ್ತವೆ.

ಮಕ್ಕಳಲ್ಲಿ ವಯಸ್ಕರಿಗಿಂತ ಹೆಚ್ಚಿನ ಮೂಳೆಗಳಿವೆ

ವಯಸ್ಕರು 206 ಮೂಳೆಗಳನ್ನು ಹೊಂದಿದ್ದರೆ, ಎಳೆ ಮಕ್ಕಳ ದೇಹದಲ್ಲಿ 300 ಮೂಳೆಗಳು ಇರುತ್ತವೆ. ಇದರಲ್ಲಿ ಮೂಳೆಗಳು ಮತ್ತು ಕಾರ್ಟಿಲೇಜ್ ಎರಡು ಸೇರಿರುತ್ತವೆ. ಈ ಕಾರ್ಟೀಲೇಜ್‌ಗಳು ಕೊನೆಗೆ ಆಸಿಫಿಕೇಶನ್ ಎಂಬ ಪ್ರಕ್ರಿಯೆಯ ಮೂಲಕ ಮೂಳೆ ಗಳಾಗಿ ಪರಿವರ್ತನೆಗೊಳ್ಳುತ್ತದೆ. ಕಾಲಾನಂತರ ಈ ಮಗುವಿನ ಮೂಳೆಗಳು, ದೊಡ್ಡ ಮೂಳೆಗಳಾಗಿ ಪರಿವರ್ತನೆ ಹೊಂದಿ ಒಟ್ಟಾರೆ 206 ಮೂಳೆಗಳಾಗುತ್ತವೆ.

ಕಾಲ್ಬೆರಳ ಮೂಳೆ ಅತ್ಯಂತ ನಾಜೂಕು

ನಾವು ಪ್ರತಿಯೊಬ್ಬರು ಒಂದು ಸಾರಿಯಾದ್ರೂ ನಮ್ಮ ಕಾಲಿನ ಬೆರಳುಗಳಿಗೆ ಪೆಟ್ಟು ಮಾಡಿಕೊಂಡಿರುತ್ತೇವೆ, ಮೂಳೆ ಮುರಿದಿರುತ್ತದೆ. ಆದರೆ ಇದೇನು ದೊಡ್ಡ ಸಮಸ್ಯೆಯಲ್ಲ. ಯಾಕೆಂದರೆ ಕಾಲಿನ ಮೂಳೆಗಳು ಅಷ್ಟು ನಾಜೂಕು. ಅದರ ಪಾಡಿಗೆ ಅದು ಗುಣ ಮುಖವಾಗಲು ಬಿಡುವುದನ್ನು ಹೊರತು ಪಡಿಸಿ ನೀವು ಇನ್ನೇನು ಮಾಡುವ ಅಗತ್ಯವಿರುವುದಿಲ್ಲ.