ಕೈಕಾಲು ಇಲ್ಲದ 17 ವರ್ಷದ ಯುವತಿ ಅಂಗವೈಕಲ್ಯವನ್ನು ಮೀರಿ ಸಾಧನೆ ಮಾಡುತ್ತಿರುವ ಸಾಧನೆ, ಪ್ರತಿಭೆ ಎಲ್ಲರಿಗೂ ಮಾದರಿಯಾಗಿದೆ..

0
351

ಕೈ ಕಾಲು ಎಲ್ಲವೂ ಸರಿ ಇದೆ. ಘಂಟೆ ಘಂಟೆಗೆ ಸರಿಯಾಗಿ ಎಲ್ಲವೂ ಆಗುತ್ತೆ, ಆದರೆ ಏನಾದರು ಒಂದು ಸಾಧನೆ ಅಥವಾ ತಮ್ಮ ಜೀವನಕ್ಕೆ ಉತ್ತಮ ಹೆಸರು ಬರುವಂತ ಕೆಲಸ ಮಾಡಲು ಮನಸ್ಸು ಮಾತ್ರ ಇಲ್ಲ ಎನ್ನುವ ಯುವಕ-ಯುವತಿಯರಿಗೆ ಕಡಿಮೆ ಏನ್ ಇಲ್ಲ, ಆದರೆ ಸರಿಯಾದ ದೇಹವನ್ನು ಹೊಂದದೆ ಅಂಗವೈಕಲ್ಯವುಳ್ಳ ಕೆಲವರು ಮಾಡುತ್ತಿರುವ ಸಾಧನೆ ಮತ್ತು ಜೀವನದಲ್ಲಿ ಇಟ್ಟಿಕೊಂಡಿರುವ ಕನಸ್ಸುಗಳನ್ನು ಕೇಳಿದರೆ ಎತ್ತವರಿಗೂ ಮಾದರಿಯಾಗುತ್ತೆ. ಇಂತವರ ಸಾಲಿನಲ್ಲಿ ಬರುವ 17 ವರ್ಷದ ಅಂಗವೈಕಲ್ಯ ಯುವತಿ ಸಾಧನೆ ಕೇಳಿದರೆ. ಇವಳು ಕನಸ್ಸನ್ನು ಕೇಳಿದರೆ ಎಂತವರಿಗೂ ಮಾದರಿಯಾಗುತ್ತೆ.

Also read: ಹಾಲು ಮಾರಿ ಜೀವನ ಮಾಡುವ ವ್ಯಕ್ತಿ ಇಂದು 54 ಸಾವಿರ ಕೋಟಿ ಒಡೆಯನಾಗಿ ಸಾವಿರಾರು ಜನರಿಗೆ ಉದ್ಯೋಗ ನೀಡುವ ಹಂತಕ್ಕೆ ಬೆಳೆದಿದ್ದು ಹೇಗೆ ಗೊತ್ತಾ??

ಹೌದು ಕೇರಳದ ಕೋಝಿಕೋಡ್ ಮೂಲದ 17 ವರ್ಷದ ಯುವತಿ ಸಾಧನೆ ಎನ್ನುವ ಪದಕ್ಕೆ ಸಾಕ್ಷಿಯಾಗಿದ್ದಾಳೆ. ಕೋಝಿಕೋಡ್ ಮೂಲದವರಾದ ನೂರ್ ಜಲೀಲಾ ಅಂಗವಿಕಲೆಯಾಗಿ ಜನಿಸಿದ್ದರೂ, ತನ್ನ ಹಾದಿಗೆ ಅಂಗವೈಕಲ್ಯ ಯಾವತ್ತೂ ಕೂಡ ಅಡ್ಡಿಯಾಗಲೇ ಇಲ್ಲ ಅನ್ನೋದಕ್ಕೆ ಸ್ಪಷ್ಟ ನಿದರ್ಶನವಾಗಿದ್ದಾಳೆ. ಜಲೀಲಾಗೆ ಹುಟ್ಟಿನಿಂದಲೂ ಅರ್ಧ ಕೈ ಇದ್ದು (ಮುಂದೋಳು) ಇಲ್ಲ ಮತ್ತು ಕಾಲುಗಳು ಕೂಡ ಇಲ್ಲ ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಲು ಸಾಧ್ಯ ಎನ್ನುಬಹುದು ಆದರೆ ಇವಳು ಮೈಕ್ ಹಿಡಿದು ಮಾತಿಗೆ ನಿಂತರೆ ಸಭೆಯಲ್ಲಿ ಇದ್ದವರು ಮಂತ್ರಮುಗ್ಧವಾಗುವಂತೆ ವಾಕ್ಚಾತುರ್ಯ ಹೊಂದಿದ್ದಾರೆ.

Also read: ಸಂಬಳದ ಹಣವನ್ನೆಲ್ಲಾ ಅನಾಥರಿಗೆ ದಾನ ಮಾಡಿದ ಪ್ರಪಂಚದ ಪ್ರಪ್ರಥಮ ಸಹಸ್ರಮಾನದ ವ್ಯಕ್ತಿ ಶ್ರೀ ಕಲ್ಯಾಣಸುಂದರಂ ಇಡಿ ಜಗ್ಗತಿಗೆ ಮಾದರಿ..

ಅಷ್ಟೇ ಅಲ್ಲದೆ ಸಾಮಾಜಿಕ ಹೋರಾಟಗಾರ್ತಿಯಾಗಿ ಸಾಮಾಜ ಸೇವೆ ಜೊತೆಗೆ ಪ್ರೇರಣಾ ಭಾಷಣಗಳನ್ನು ಮಾಡಿ, ಹಲವರಿಗೆ ಸ್ಪೂರ್ತಿ ಆಗಿದ್ದಾರೆ. ವಯೊಲಿನ್ ಹಿಡಿದು ನುಡಿಸಲು ನಿಂತರೆ ಕೇಳುಗರನ್ನು ಸಂಗೀತ ಸುಧೆಯಲ್ಲಿ ತೇಲುವಂತೆ ಮಾಡುತ್ತಾರೆ. ಹಾಡು, ಚಿತ್ರಕಲೆ, ಭಾಷಣ ಮಾಡುವುದು ಹೀಗೆ ಬಹುಮುಖ ಪ್ರತಿಭೆಯನ್ನು ಜಲೀಲಾ ಹೊಂದಿದ್ದಾರೆ. ಇದೆಲ್ಲ ಕಲೆ ಎಲ್ಲಿಂದ ಬಂತು ಎಂದರೆ ಚಿಕ್ಕ ವಯಸ್ಸಿನಲ್ಲಿದ್ದಾಗ ಒಂದು ದಿನ ಜಲೀಲಾ ಪುಸ್ತಕದಲ್ಲಿ ಬಣ್ಣ ಹಚ್ಚುತ್ತಿದ್ದರು. ಇದನ್ನು ನೋಡಿದ ಪೋಷಕರು ಮಗಳಿಗೆ ಪ್ರೋತ್ಸಾಹಿಸಿದರು. ಆಕೆಗೆ ಕಲೆಯನ್ನು ಮುಂದುವರಿಸಲು ಸಹಕರಿಸಿದರು. ಬಳಿಕ 7ನೇ ತರಗತಿಯಲ್ಲಿದ್ದಾಗ ವಯೊಲಿನ್ ನುಡಿಸುವುದನ್ನು ಕಲಿತು, ಚಿತ್ರಕಲೆ ಜೊತೆಗೆ ಸಂಗೀತವನ್ನು ಕರಗತ ಮಾಡಿಕೊಂಡು ಹಲವಾರು ಸ್ಪರ್ಧೆಗಳಲ್ಲಿ ಗೆದ್ದು ಜಲೀಲಾ ಕೀರ್ತಿ ಗಳಿಸಿದ್ದಾರೆ.

ಮೌಂಟ್ ಎವರೆಸ್ಟ್ ಹತ್ತುವ ಕನಸು?

Also read: ಮಳೆ ಕೈಕೊಟ್ಟರು ತಿಂಗಳವರೆಗೂ ನೀರಿನಂಶ ಹಿಡಿದಿಟ್ಟು ಬೆಳೆಯನ್ನು ಬದುಕಿಸುವ ಪುಡಿಯನ್ನು ಕಂಡು ಹಿಡಿದ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಸಂಶೋಧಕ..

ಜಲೀಲಾ ಸದ್ಯ ಎನ್‍ಜಿಓ ಜೊತೆಗೆ ಕೈಜೋಡಿಸಿ ತಮ್ಮಂತೆ ಅಂಗವಿಕಲರಾಗಿರುವ ಮಕ್ಕಳಿಗೆ ಆಶಾ ದಿಪವಾಗಿ ಕೆಲಸ ಮಾಡುತ್ತಿದ್ದಾಳೆ. ಎಲ್ಲಾ ಸರಿಯಿದ್ದರೂ ಕೂಡ ಕೆಲವರು ನಮ್ಮ ಕೈಯಲ್ಲಿ ಏನೂ ಆಗಲ್ಲ ಎಂದು ಸುಮ್ಮನಾಗಿ ಬಿಡುತ್ತಾರೆ. ಆದರೆ ಕೈಕಾಲು ಇಲ್ಲದಿದ್ದರೂ ಜೀವನದಲ್ಲಿ ಹತಾಶರಾಗದೆ ತಮ್ಮಗಿದ್ದ ಸಮಸ್ಯೆಯನ್ನು ಹಿಮ್ಮೆಟ್ಟಿ ಅನೇಕರಿಗೆ ಜಲೀಲಾ ಸ್ಪೂರ್ತಿಯಾಗಿ ಚಿಕ್ಕ ವಯಸ್ಸಿನಲ್ಲೇ ಸಾಧಕರ ಪಟ್ಟಿಗೆ ಸೇರಿದ್ದಾರೆ. ಅಲ್ಲದೆ ಅಮೆರಿಕದ ನಾಸಾಗೆ ಭೇಟಿ ನೀಡಬೇಕು, ಮೌಂಟ್ ಎವರೆಸ್ಟ್ ಹತ್ತುಬೇಕು ಎಂಬುದು ನನ್ನ ಕನಸು ಎಂದು ಜಲೀಲಾ ಹೇಳಿಕೊಂಡಿದ್ದಾರೆ.