ನೇತಾಜಿ ಕಣ್ಮರೆ ರಹಸ್ಯ ಕಡತದಲ್ಲೇನಿದೆ?

0
640

ಭಾರತದಲ್ಲಷ್ಟೇ ಅಲ್ಲದೆ ಇಂಗ್ಲೆಂಡ್ ಮೊದಲಾದೆಡೆ ಹೋಗಿ ಹೆಚ್ಚಿನ ವಿದ್ಯಾಭ್ಯಾಸವನ್ನು ಪೂರೈಸಿಕೊಂಡು ಉತ್ತಮ ಉದ್ಯೋಗಕ್ಕೆ ಸೇರಿಕೊಂಡ ವ್ಯಕ್ತಿ ಈ ದೇಶ ಬ್ರಿಟಿಷರ ಕಪಿಮುಷ್ಠಿಯಲ್ಲಿರುವುದನ್ನು ಮನಗಂಡು, ಉದ್ಯೋಗಕ್ಕೆ ರಾಜೀನಾಮೆ ಬಿಸಾಕಿ, ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿ ಗಾಂಧೀಜಿಯೆಡೆಗೆ ಬಂದರು. ಗಾಂಧೀಜಿಯ ಯೋಚನೆ ಯೋಜನೆಗಳನ್ನು ಅರಿತುಕೊಂಡು ಒಂದಷ್ಟು ದಿನ ಅವರೊಡನೆಯೇ ಇದ್ದರು. ಗಾಂಧೀಜಿಯನ್ನು “ರಾಷ್ಟ್ರಪಿತ” ಎಂದು ಪ್ರಥಮವಾಗಿ ಕರೆದವರು ನೇತಾಜಿ ಸುಭಾಷ್ ಚಂದ್ರ ಬೋಸ್.! ಯಾವಾಗ ಗಾಂಧೀಜಿಯ ಅಹಿಂಸಾ ಮಾರ್ಗದಿಂದಲೇ ಬ್ರಿಟಿಷರು ದೇಶ ಬಿಟ್ಟು ಹೋಗಲಾರರು ಅನಿಸಿತೋ ಆಗಲೇ ಕ್ರಾಂತಿಗಾಗಿ ಕರೆಕೊಟ್ಟು ಕ್ರಾಂತಿಮಾರ್ಗವನ್ನು ಆರಂಭಿಸಿದವರು ನೇತಾಜಿ. ಭಾರತೀಯರಿಗೆ ಅವರದ್ದಾದ ಸೈನ್ಯವೊಂದು ಬೇಕು ಮತ್ತು ಅದಕ್ಕೆ ಕೆಚ್ಚೆದೆಯ ಯುವಕರು ಬೇಕು ಎಂಬುದನ್ನರಿತು ಭಾರತೀಯ ದೇಶೀಯ ಸೈನ್ಯ [ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಸ್ಥಾಪಿಸಿದರು.

Image result for subhash chandra bose death secret
ಕೇವಲ ದೇಶದಲ್ಲಿದ್ದೇ ಕೆಲಸ ಮಾಡಿದರೆ ಬ್ರಿಟಿಷರನ್ನು ಓಡಿಸುವುದು ಕಷ್ಟವೆಂದರಿತ ನೇತಾಜಿಗೆ ತನ್ನ ಕಾರ್ಯಚಟುವಟಿಕೆಗಳ ವಿರುದ್ಧ ಬ್ರಿಟಿಷರು ತಿರುಗೇಟು ನೀಡಬಹುದೆಂಬ ಭಾವನೆಯೂ ಇತ್ತು. ತನ್ನ ಸೈನ್ಯ ಶಕ್ತಿಯನ್ನು ಸಬಲಗೊಳಿಸಿಕೊಳ್ಳಲು ವಿದೇಶಗಳಿಗೆ ತೆರಳಿ ಹಿಟ್ಲರ್ ಮತ್ತು ಮುಸೋಲಿನಿಯಂತಹ ಜಾಗತಿಕ ಮಟ್ಟದಲ್ಲಿ ಸುದ್ದಿಮಾಡಿದ ವ್ಯಕ್ತಿಗಳನ್ನು ಭೇಟಿಯಾಗಿ ಸಹಾಯ ಯಾಚಿಸಿದರು. ಹಾಗಂತ ಹಿಟ್ಲರ್ ಮತ್ತು ಮುಸೋಲಿನಿಯಂಥವರು ಇಟ್ಟುಕೊಂಡಿದ್ದ ಆಶಯಗಳನ್ನೋ ಯೋಜನೆಗಳನ್ನೋ ಸಮರ್ಥಿಸಿದವರಲ್ಲ ನೇತಾಜಿ. ಕೊನೆಗೊಮ್ಮೆ ಜಪಾನ್ ಮತ್ತು ಜರ್ಮನಿಯೆಡೆಗೆ ತೆರಳಿ ಅಲ್ಲೆಲ್ಲ ತನ್ನ ಸೈನ್ಯಕ್ಕೆ ಬೇಕಾದ ತರಬೇತಿಯನ್ನು ನೀಡಿ ಸಜ್ಜುಗೊಳಿಸಲು ಹವಣಿಸಿದರು. ತನ್ನ ಕ್ರಾಂತಿಕಾರೀ ನಡವಳಿಕೆಗಳ ಮೂಲಕ ನೇತಾಜಿ ಬ್ರಿಟಿಷರಿಗೆ ಸಿಂಹಸ್ವಪ್ನದಂತಾಗಿದ್ದರು.

Image result for subhash chandra bose death secret
1945ರಲ್ಲಿ ಇಂದಿನ ತೈವಾನ್‍ನ ಟೈಪೆ ಎಂಬಲ್ಲಿ ವಿಮಾನ ದುರಂತದಲ್ಲಿ ನೇತಾಜಿ ಸತ್ತರು ಎಂದು ಭಾರತೀಯರಿಗೆ ಅಂದು ಆಳುತ್ತಿದ್ದ ಬ್ರಿಟಿಷ್ ಸರಕಾರ ತಿಳಿಸಿತು. ದುರಂತಕ್ಕೀಡಾಗಿದೆ ಎಂದು ಹೇಳಲಾದ ವಿಮಾನದಲ್ಲಿ ಮುಖ ಅಪ್ಪಚ್ಚಿಯಾಗಿದ್ದ ಓರ್ವವ್ಯಕ್ತಿಯ ದೇಹವನ್ನು ಅಲ್ಲಿನ ಆಸ್ಪತ್ರೆಗೆ ತರಲಾಗಿತ್ತಂತೆ. ಡೆತ್ ಸರ್ಟಿಫಿಕೇಟ್‍ನಲ್ಲಿ ಆ ವ್ಯಕ್ತಿಯ ಹೆಸರಿದ್ದುದು “ಇಚಿನೋ ಓಕುಡ”-ಇದು ಜಪಾನೀ ಹೆಸರು. ಆ ದೇಹವನ್ನೇ ನೇತಾಜಿಯ ದೇಹವೆಂದವರು ಅಂದಿನ ರಾಜಕೀಯ ಧುರೀಣರು. 1946ರಲ್ಲಿ ಆಲ್‍ಫ್ರೆಡ್ ವ್ಯಾಗ್ ಎಂಬುವರು ನೇತಾಜಿಯ ಸೋದರನನ್ನು ಭೇಟಿಯಾಗಿ, “ಸುಭಾಶ್ಚಂದ್ರ ಬೋಸ್ ವಿಮಾನ ದುರಂತದಲ್ಲಿ ಮಡಿದಿಲ್ಲ. ಅದು ಸುಳ್ಳು ಸುದ್ದಿ” ಎಂದು ತಿಳಿಸಿದ್ದರು.

Image result for subhash chandra bose death secret
ಕಾಲಾನಂತರ ಭಾರತದ ಫೈಜಾಬಾದ್‍ನಲ್ಲಿ ಗುಮ್ನಾನಿ ಬಾಬಾ ಎಂಬೊಬ್ಬ ಸಂತನನ್ನು ಕಂಡ ಜನ ನೇತಾಜಿ ಆ ವೇಷದಲ್ಲಿದ್ದಾರೆಂದು ಹೇಳುತ್ತಾರೆ. ತಜ್ಞರ ಪ್ರಕಾರ ಜಗತ್ತಿನಲ್ಲಿ ಒಬ್ಬರ ಹಸ್ತಾಕ್ಷರದಂತೆ ಇನ್ನೊಬ್ಬರದು ಇರಲು ಸಾಧ್ಯವೇ ಇಲ್ಲ. ಅದು ಎಲ್ಲೆಲ್ಲೋ ವ್ಯತ್ಯಾಸಗಳನ್ನು ಹೊಂದಿರಬಹುದು. ಆದರೆ ಗುಮ್ನಾನಿ ಬಾಬಾ ಅವರ ಹಸ್ತಾಕ್ಷರ ಮತ್ತು ನೇತಾಜಿಯವರ ಹಸ್ತಾಕ್ಷರ ಸಕಲವಿಧದಲ್ಲೂ ನೂರಕ್ಕೆ ನೂರು ಹೋಲುತ್ತಿತ್ತು! ಗುಮ್ನಾನಿ ಬಾಬಾ ಹೊರಗಿನ ಜನರೊಟ್ಟಿಗೆ ಹೆಚ್ಚಿನ ಸಂಪರ್ಕ ಇರಿಸಿಕೊಂಡಿರಲಿಲ್ಲ. ಅವರಿಗೆ ಮೊದಲಿನಿಂದ ಪರಿಚಿತರಂತಿರುವ ಕೆಲವರು ಅವರಿದ್ದಲ್ಲಿಗೆ ಆಗಾಗ ಬಂದುಹೋಗುತ್ತಿದ್ದರು. 1985ರಲ್ಲಿ ಗುಮ್ನಾನಿ ಬಾಬಾ ಮೃತರಾದರು. ಬಹಳಕಾಲ ಈ ವಿಷಯ ನೇತಾಜಿಯವರ ಮಗಳಾದ ಅನಿತಾ ಬೋಸ್ ಫಫ್ ಅವರಿಗೂ ಗೊತ್ತೇ ಆಗಲಿಲ್ಲ. ಹಾಗಾದರೆ ನೇತಾಜಿಯವರೇ ಬದುಕಿದ್ದು ಮಾರುವೇಷದಲ್ಲಿ ತನ್ನ ದೇಶಕ್ಕೆ ಮರಳಿಬಂದು ವಿರಕ್ತರಾಗಿ ಅಲ್ಲಿ ನೆಲೆಸಿದ್ದರೇ? ಗೊತ್ತಿಲ್ಲ.