ತನ್ನ ಕೆಂಪು ಶರ್ಟಿನಿಂದ ರೈಲು ಹಳಿ ತಪ್ಪುವುದನ್ನು ತಪ್ಪುಸಿದ ಈ ಬಾಲಕನ ಸಮಯಪ್ರಜ್ಞೆಯನ್ನು ಎಲ್ಲರೂ ಮೆಚ್ಚಲೇಬೇಕು..

0
618

ಈಗಿನ ಕಾಲದಲ್ಲಿ ರಸ್ತೆಯಲ್ಲಿ ಅಪಘಾತಗಳು ಅಥವಾ ಪಕ್ಕದ ಮನೆಯಲ್ಲಿಯೇ ಅಪರಾಧಗಳು ನಡೆಯುತ್ತಿದ್ದರು ನಮಗ್ಯಾಕೆ ಇಲ್ಲದ ಕಿರಿಕಿರಿ ಅಂತ ಅನ್ನುವವರೇ ಜಾಸ್ತಿ ಇಂತಹ ಕಾಲದಲ್ಲಿ ಈ ಚಿಕ್ಕ ಹುಡುಗನ ಧೈರ್ಯ, ಸಾಹಸ ಹಾಗು ಸಮಯ ಪ್ರಜ್ಞೆಯಿಂದ ನೂರಾರು ಜನರ ಪ್ರಾಣ ಉಳಿದಿದೆ, ಅಷ್ಟಕ್ಕೂ ಆ ಹುಡುಗ ಏನು ಮಾಡಿದ ಅಂತ ನೀವೇ ನೋಡಿ.

ಈ ಹುಡುಗನ ಹೆಸರು ಭೀಮ್ ಯಾದವ್, ಐದನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಭೀಮ್ ಎಂದಿನಂತೆ ಬೆಳಗ್ಗೆ ಎದ್ದು ತಮ್ಮ ತೋಟದತ್ತ ನಡೆದುಕೊಂಡು ಹೋಗುತ್ತಿದ್ದನ್ನು ಆಗ ಅವನಿಗೆ ಪಕ್ಷಿಮ ಚಂಪಾರನ್ ಜಿಲ್ಲೆಯ, ಗೊರಖ್ಪುರ್-ನರ್ಕಟಿಯಾಗಂಜ್ ನಡುವೆ ಸಂಪರ್ಕ ಕಲ್ಪಿಸುವ ರೈಲಿನ ಹಳಿ ತುಂಡಾಗಿರುವುದು ಕಂಡಿದೆ.

ಭೀಮ್ ದೂರದಿಂದ ಅದೇ ಹಳಿಯ ಮೇಲೆ ಪ್ಯಾಸೆಂಜರ್ ರೈಲೊಂದನ್ನು ಬರುತ್ತಿರುವುದನ್ನು ಕಂಡ, ತಕ್ಷಣ ತನ್ನ ಕೆಂಪು ಬಣ್ಣದ ಟೀಶರ್ಟ್ ಅನ್ನು ತೆಗೆದು ರೈಲಿನತ್ತ ಕೈಬೀಸುತ್ತ ವೇಗವಾಗಿ ಓಡಿದ್ದಾನೆ. ಒಬ್ಬ ಚಿಕ್ಕ ಹುಡುಗ ಕೈಬೀಸುತ್ತ ರೈಲಿನ ಹಳಿಯ ಮೇಲೆ ಬರುತ್ತಿರುವುದನ್ನು ಗಮನಿಸಿದ ರೈಲಿನ ಲೋಕೋ-ಪೈಲಟ್ ಅಥವಾ ಚಾಲಕನಿಗೆ ಒಂದು ಕ್ಷಣ ಏನು ಅರ್ಥವಾಗಲಿಲ್ಲ.

ಚಾಲಕ ನಂತರ ಎಮರ್ಜೆನ್ಸಿ ಬ್ರೇಕ್ ಹಾಕಿದ್ದಾನೆ, ರೈಲು ತುಂಡಾದ ಹಳಿಯಿಂದ ಸ್ವಲ್ಪದೂರದಲ್ಲಿ ನಿಂತಿದೆ ನಂತರ ಹಳಿ ತುಂಡಾಗಿರುವುದನ್ನು ಪರಿಶೀಲಿಸಿ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸರಿಯಾದ ಸಮಯದಲ್ಲಿ ಆಪತ್ಭಾಂದವನಂತೆ ಬಂದು ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಭೀಮ್ ಯಾದವನ್ನನ್ನು ಜನರು, ಸಾರ್ವಜನಿಕ ಸಂಬಂಧ ಅಧಿಕಾರಿ ಹಾಗು ರೈಲ್ವೆ ಇಲಾಖೆ ಮನಸಾರೆ ಹೊಗಳಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಭೀಮ್ ಯಾದವನ ಈ ಸಾಹಸವನ್ನು ಪರಿಗಣಿಸಿ ರೈಲ್ವೆ ಇಲಾಖೆ ಇವನ ಸಾಹಸಕ್ಕೆ ನಗದು ಸಹಿತ ಬಹುಮಾನವನ್ನು ನೀಡಲು ತೀರ್ಮಾನಿಸಿದೆ. ಸಾರ್ವಜನಿಕ ಸಂಬಂಧ ಅಧಿಕಾರಿ ಇವನನ್ನು ಪ್ರೋತ್ಸಾಹಿಸಲು ಈಗಾಗಲೇ ಪ್ರಶಸ್ತಿಯನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಭೀಮ್ ಯಾದವನ ಈ ಸಾಹಸವನ್ನು ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸ್ಪೋಟಕ ಬ್ಯಾಟ್ಸಮನ್ ವಿರೇಂದರ್ ಸೆಹ್ವಾಗ್ ತಮ್ಮ ಸಾಮಾಜಿಕ ಜಾಲತಾಣ ಖಾತೆ ಟ್ವಿಟ್ಟರ್-ನ ಮೂಲಕ “ಮೈ ಹೀರೋ” ಎಂದು ಹೊಗಳಿದ್ದಾರೆ.