ಬಾಲ್ಯದಲ್ಲೇ ದೇಶವೇ ಮೆಚ್ಚುವಂತಹ ಸಾಧನೆ; ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೆರವಾಗುವ ಆಪ್‌ವೊಂದನ್ನು ಅಭಿವೃದ್ದಿ ಪಡಿಸಿದ ಬೆಂಗಳೂರಿನ ಬಾಲಕ..

0
481

ಈಗಿನ ಕಾಲದಲ್ಲಿ ಮಕ್ಕಳು ಬರಿ ಆಟವಾಡುವ ಮನೋಭಾವನೆ ಹೊಂದಿರುತ್ತಾರೆ ಎನ್ನುವುದು ದೂರದ ಮಾತು. ಏಕೆಂದರೆ ಸಣ್ಣ ವಯಸ್ಸಿನಲ್ಲಿ ಇಡಿ ದೇಶವೇ ಮೆಚ್ಚುವಂತ ತಂತ್ರಜ್ಞಾನವನ್ನು, ಮತ್ತು ದೇಶಕ್ಕೆ ಉಪಯೋಗವಾಗುವ ಹಲವು ಯೋಜನೆಗಳನ್ನು ಆಟವಾಡುವ ವಯಸ್ಸಿನಲ್ಲಿ ಕಂಡು ಹಿಡಿಯುತ್ತಿದ್ದಾರೆ. ಇದೆಲ್ಲವೂ ಹೆಮ್ಮೆಯ ವಿಷಯದ ಜೊತೆಗೆ ಮುಂದೊಂದು ದಿನ ಭಾರತವು ಎಲ್ಲ ದೇಶಕ್ಕೆ ಮಾದರಿಯಾಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದಕ್ಕೆ ಸಾಕ್ಷಿ 9 ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೆರವಾಗುವಂತಹ ಎಮ್‌ನ್ಯೂಟ್ರಿಷಿಯನ್‌(mNutrition) ಆಪ್‌ವೊಂದನ್ನು ತಯಾರಿಸಿದ್ದಾನೆ.

Also read: ಹಳ್ಳಿಯಿಂದ ಬಂದು ಕಂಪನಿ ಸ್ಥಾಪಿಸಿ; ದೇಶದ ಮೊದಲ ಕನ್ನಡದ ಯುವ ಉದ್ಯಮಿ ಪಟ್ಟಿಯಲ್ಲಿ ಸ್ನೇಹಾ ರಾಕೇಶ್..

ಹೌದು ಶಾಲೆ ರಜೆ ಇದ್ದರೆ ಸಾಮಾನ್ಯವಾಗಿ ಮಕ್ಕಳು ಯೋಚನೆ ಆಟದ ಕಡೆಗೆ ಇಲ್ಲ, ಅಜ್ಜಿ ಅಜ್ಜನ ಮನೆಯ ಕಡೆಗೆ ಸಾಗುತ್ತೆ. ಆದರೆ ಬೆಂಗಳೂರಿನ ಹುಡುಗನ ಯೋಚನೆ ಎಲ್ಲಿಗೆ ಜಾರಿದೆ ಎನ್ನುವುದು ಇಡಿ ದೇಶವೇ ತಿರುಗಿ ನೋಡುವಂತಿದೆ.

ಏನಿದು ಬಾಲಕನ ಸಾಧನೆ?

ಬೆಂಗಳೂರಿನ ಹೆಡ್ ಸ್ಟಾರ್ಟ್ ಎಜುಕೇಶನಲ್ ಅಕಾಡೆಮಿಯ ಇಂಡಿಯನ್ ವಿದ್ಯಾರ್ಥಿ ‘ಅಯುಷ್ ಘರತ್’ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೆರವಾಗುವಂತಹ ಎಮ್‌ನ್ಯೂಟ್ರಿಷಿಯನ್‌(mNutrition) ಆಪ್‌ವೊಂದನ್ನು ತಯಾರಿಸಿದ್ದಾನೆ. ಒಂಬತ್ತನೇ ತರಗತಿಯಲ್ಲಿ ಓದಿತ್ತಿರುವ ಆಯೂಷ್‌ ದೇಶದಲ್ಲಿನ ಅಪೌಷ್ಠಿಕತೆಯ ಸಮಸ್ಯೆಯನ್ನು ಅರಿತು ಅದಕ್ಕೆ ಪರಿಹಾರ ಕಂಡುಕೊಳ್ಳಲು ಆಪ್‌ ಅಭಿವೃದ್ಧಿ ಮಾಡಿ ದೇಶವೆ ಮೆಚ್ಚುವಂತಹ ಸಾಧನೆ ಮಾಡಿ ಗಮನ ಸೆಳೆದಿದ್ದಾನೆ.

Also read: ಸಾವಿರಾರು ಕಿ.ಲೋ ಮೀ ದೂರದಿಂದಲೇ ಮಕ್ಕಳ, ವಯಸ್ಸಾದವರ ಕಾಳಜಿ ವಹಿಸಬಹುದಾದ ಸ್ಮಾರ್ಟ್​ ಟಿ-ಶರ್ಟ್​ ಕಂಡು ಹಿಡಿದ 17ರ ಯುವಕ, ಇದರ ವಿಶೇಷತೆ ಹೇಗಿದೆ ಗೊತ್ತಾ??

ಏನಿದು ಎಮ್‌ನ್ಯೂಟ್ರಿಷಿಯನ್‌ ಆಪ್‌?

ಸ್ಮಾರ್ಟ್‌ಫೋನ್‌ನಲ್ಲಿ ಎಮ್‌ನ್ಯೂಟ್ರಿಷಿಯನ್ ಆಪ್‌ ಅನ್ನು ಡೌನಲೊಡ್‌ ಮಾಡಿಕೊಳ್ಳಬಹುದಾಗಿದ್ದು, ಈ ಆಪ್‌ನ ಬಳಕೆಯು ಸರಳವಾಗಿದೆ. ಆರೋಗ್ಯ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಈ ಆಪ್‌ನಲ್ಲಿ ಅಪೌಷ್ಠಿಕತೆ ಸಮಸ್ಯೆಯಿರುವ ಮಕ್ಕಳ ವಯಸ್ಸು, ಲಿಂಗ, ಎತ್ತರ, ತೂಕ ಮತ್ತು ಸ್ಥಳ ಹೀಗೆ ಅಗತ್ಯವಾದ ಎಲ್ಲ ಬೇಸಿಕ ಮಾಹಿತಿಗಳನ್ನು ನೋಂದಣಿಮಾಡಬೇಕು. ವರ್ಲ್ಡ್‌ ಹೆಲ್ತ್ ಆರ್ಗನೈಝೇಶನ್(WHO) ಸಂಸ್ಥೆ 2006 ಅಂಕಿ ಅಂಶ ಪ್ರಕಾರ ಮಕ್ಕಳ ಬೆಳವಣಿಗೆ ಕಂಡುಬಂದಿದೆಯಾ ಎಂಬುದನ್ನು ತಿಳಿಸಬಹುದು.
ಅದರಲ್ಲಿ ಹೆಚ್ಚಾನು ಹೆಚ್ಚು ಗ್ರಾಮೀಣ ಭಾಗದಲ್ಲಿರುವ ಸರಿಯಾಗಿ ಆರೋಗ್ಯ ಕಾರ್ಯಕರ್ತೆಯರು ಇರುವುದಿಲ್ಲ ಮತ್ತು ಅಲ್ಲಿನ ಅಪೌಷ್ಠಿಕ ಮಕ್ಕಳ ನೆರವಿಗೆ ಈ ಆಪ್ ಹೆಚ್ಚು ಪರಿಣಾಮಕಾರಿಯಾಗಲಿದೆ. ಅಪೌಷ್ಟಿಕ ಕೊರತೆಯನ್ನು ಹೊಗಲಾಡಿಸಲು ಸರ್ಕಾರದ ಬಹುತೇಕ ಕಾರ್ಯಕ್ರಮಗಳು ಯಶಸ್ವಿಯಾಗಲು ಹೆಲ್ತ್ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದ್ದು ಇದರೊಂದಿಗೆ ಆಪ್‌ ತಂತ್ರಜ್ಞಾನವು ಮಾಹಿತಿಗೆ ನೆರವಾಗಲಿದೆ ಎಂದು ಅಯೂಷ್‌ ಹೇಳಿದ್ದಾರೆ.

ಈ ಆಪ್‌ ಪ್ರಯೋಜನವೇನು?

Also read: ನೊಬೆಲ್‌ ಶಾಂತಿ ಪುರಸ್ಕಾರಕ್ಕೆ 16 ವರ್ಷದ ಬಾಲಕಿ ‘ಗ್ರೇಟಾ ಥನ್ಬರ್ಗ್‌’ ಹೆಸರು ಶಿಫಾರಸು..

ಭಾರತದಲ್ಲಿ ಅಪೌಷ್ಟಿಕತೆ ಸಮಸ್ಯೆಯ ತೀವ್ರತೆ ಹೆಚ್ಚಾಗಿದ್ದು, ಅಂದಾಜು 5 ವರ್ಷದ ಮಕ್ಕಳ ಜನಸಂಖ್ಯೆಯಲ್ಲಿ ಶೇ 44 ಪ್ರತಿ ಶತದಷ್ಟು “ಅಪೌಷ್ಟಿಕತೆ” ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ವರದಿ ನೀಡಿದೆ. ಅಂಥ ಅಪೌಷ್ಠಿಕ ಮಕ್ಕಳಿಗೆ ಸರಿಯಾದ ಪೌಷ್ಠಿಕ ಆಹಾರ ಸೀಗಬೇಕು ಎನ್ನುವ ಸಲುವಾಗಿ ಆಯೂಷ್ ಎಮ್‌ನ್ಯೂಟ್ರಿಷಿಯನ್ ಆಪ್‌ ತಯಾರಿಸಿದ್ದಾನೆ. ಈ ಎಮ್‌ನ್ಯೂಟ್ರಿಷಿಯನ್ ಆಪ್‌ ಅನ್ನು ಅನಕ್ಷರಸ್ಥರು ಸಹ ಬಳಕೆಮಾಡಬಹುದಾಗಿದೆ. ಹಾಗೂ ಹೆಲ್ತ್ ಕಾರ್ಯಕರ್ತರು ಹೊರತುಪಡಿಸಿ ಸಾಮಾನ್ಯ ಕಾರ್ಯಕರ್ತರು ಸಹ ಆಪ್‌ ಬಳಸಬಹುದಾಗಿದೆ. ಪ್ರತಿ ಮಗುವಿನ ಆರೋಗ್ಯದ ಮಾಹಿತಿ, ಅಗತ್ಯ ಚಿಕಿತ್ಸೆ, ಅಗತ್ಯ ಆಂಯಟಿ ಬಯೋಟಿಕ್ ಮತ್ತು ಪೌಷ್ಠಿಕ್ ಆಹಾರಗಳ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ಆಪ್‌ ಒಳಗೊಂಡಿರುತ್ತದೆ.