ಕಾಳಧನಿಕರ ‘ಬಿ.ಪಿ.’ ಏರಿಸಿದ ಮೋದಿ: 500, 1,000 ನೋಟುಗಳು ರದ್ದು !

0
911

ಮಹತ್ತರವಾದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ಮೋದಿ-ಯವರು ರಾತ್ರಿ 8 ಘಂಟೆಯ ವಿಶೇಷ ಭಾಷಣವೊಂದರಲ್ಲಿ DEC 8 ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ 500 ಮತ್ತು 1000 ರೂಪಾಯಿ ನೋಟುಗಳ ಚಲಾವಣೆಗಳನ್ನು ರದ್ದು ಗೊಳಿಸಿದ್ದಾರೆ.

ಭ್ರಷ್ಟಾಚಾರ, ಕಪ್ಪುಹಣ ಮತ್ತು ಖೋಟಾ ನೋಟು ತಡೆಗಟ್ಟುವಲ್ಲಿ ಈ ನಿರ್ಧಾರವನ್ನು ಮೋದಿ ರವರು ಕೈಗೊಳ್ಳಲಾಗಿದೆ ಎಂದು ತಮ್ಮ ಟಿ.ವಿ. ಭಾಷಣದಲ್ಲಿ ಹೇಳಿದ್ದಾರೆ. ತಮ್ಮ 40 ನಿಮಿಷದ ಭಾಷಣದಲ್ಲಿ ಕಪ್ಪು ಹಣದ ಹರಿವನ್ನು ತಡೆಯಬಲ್ಲ ಮಹತ್ವದ ಕ್ರಮಗಳನ್ನು ಪ್ರಧಾನಿಗಳು ಪ್ರಕಟಿಸಿದರು.

15049675_10154312051503025_1105303988_n

ಏಟಿಎಂ ಮತ್ತು ಬ್ಯಾಂಕಿನಿಂದ ಪಡೆದಿರುವ 500 ಮತ್ತು 1000 ರೂ ನೋಟುಗಳನ್ನು ನವೆಂಬರ್ 10 ರಿಂದ ಡಿಸೆಂಬರ್ 30 ರವರೆಗೆ ಬ್ಯಾಂಕ್ಗಳಲ್ಲಿ, ಅಂಚೆ ಕಚೇರಿಗಳಲ್ಲಿ ಆಧಾರ್, ಪ್ಯಾನ್ ಕಾರ್ಡನಂಥ ಅಧಿಕೃತ ದಾಖಲೆ ಗುರುತು ಪತ್ರ ತೋರಿಸಿ – 100 ಅಥವಾ ನಿಷೇದಿತವಲ್ಲದ ಮೌಲ್ಯದ ಕರೆನ್ಸಿ ನೋಟುಗಳನ್ನು ಪಡೆಯಬಹುದು.

ಅಷ್ಟೇ ಅಲ್ಲದೆ, ಏಟಿಎಂ ವ್ಯವಹಾರದ ಮಿತಿಯನ್ನು ಸದ್ಯದ ಮಟ್ಟಿಗೆ ದಿನಕ್ಕೆ 2,000 ರೂ.ನಂತೆ ಮಿತಿಗೊಳಿಸಲಾಗಿದೆ. ಆದರೆ, 500 ಮತ್ತು 100 ರೂ ನೋಟುಗಳನ್ನು ಏರ್ ಟಿಕೆಟ್, ರೈಲ್ವೆ ಟಿಕೆಟ್, ಸರ್ಕಾರಿ ಬಸ್ ಟಿಕೆಟ್, ಹಾಲಿನ ಡೈರಿ, ಪೆಟ್ರೋಲ್ ಬಂಕ್ ನಲ್ಲಿ ನೀಡಬಹುದು. ಅಷ್ಟೇ ಅಲ್ಲದೆ, ಈ ಆಸ್ಪತ್ರೆಗಳಲ್ಲಿ ಬಿಲ್ ಪಾವತಿಸಲು ನವೆಂಬರ್ 11 ರ ಮಧ್ಯರಾತ್ರಿ 12 ಗಣೆಯವರೆಗೆ 500 ರೂ ಮತ್ತು 1000 ನೋಟುಗಳನ್ನು ಸ್ವೀಕರಿಸಲಾಗುತ್ತದೆ.

ಡಿಸೆಂಬರ್ 30 ರ ಗಡುವು ಮುಗಿದರೂ ಚಿಂತಸಬೇಡಿ !

ಇನ್ನು ಡಿಸೆಂಬರ್ 30 ರ ಗಡುವು ಮುಗಿದರೂ ಚಿಂತಿಸುವ ಅವಶ್ಯತೆ ಇಲ್ಲ; ಯಾಕೆಂದರೆ, 2017 ಮಾರ್ಚ್ 31ra ವರೆಗೆ ನಿಮ್ಮ ಹಳೆಯ ನಿಷೇಧಿತ ನೋಟುಗಳನ್ನು ಆರ್.ಬಿ.ಐ ನಲ್ಲಿ ಘೋಷಣಾ ಪತ್ರ, [ಅಫಿಡವಿಟ್] ಮತ್ತು ಗುರುತಿನ ಚೀಟಿ ನೀಡುವ ಮತ್ತು ಸೂಕ್ತ ಕಾರಣದೊಂದಿಗೆ ಬದಲಿಸಿಕೊಳ್ಳಲು ಅವಕಾಶವಿದೆ.