ನಿಮ್ಮ ಬಳಿ ರೇಷೆನ್ ಕಾರ್ಡ್ ಇದೆಯೇ? ಹಾಗಿದ್ದರೆ ಈ ಹೊಸ ನಿಯಮಗಳನ್ನು ಖಂಡಿತ ಓದಲೇಬೇಕು…!

0
956

Kannada News | Karnataka News

ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯುತ್ತಿರುವ ಮೋಸದಿಂದ ಫಲಾನುಭವಿಗಳು ಒದ್ದಾಡುವಂತಾಗಿದೆ. ಸರಿಯಾದ ಸಮಯಕ್ಕೆ ಪಡಿತರ ಸಿಗದೇ, ಇನ್ನು ಕೆಲವು ಸರಿ ಪಡಿತರವೇ ಸಿಗದೇ ಪರದಾಡುವ ಸ್ಥಿತಿ ಎದುರಿಸುತ್ತಿದ್ದಾರೆ. ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಲು ಸರ್ಕಾರ ಹೊಸ ದಾರಿ ಹುಡುಕಿದೆ.

ಹೌದು, ಬಡವರಿಗೆ ನೆರವಾಗಲೆಂದು ಸರ್ಕಾರ ಅತ್ಯಂತ ಕಡಿಮೆ ಬೆಲೆಯಲ್ಲಿ ದಿನಸಿ ವಸ್ತುಗಳನ್ನು ಅಥವಾ ಆಹಾರವನ್ನು ಸರ್ಕಾರಿ ರೇಷೆನ್ ಶಾಪ್ ಅಥವಾ ನ್ಯಾಯ ಬೆಲೆ ಅಂಗಡಿಯ ಮೂಲಕ ವಿತರಿಸುತ್ತಾರೆ. ಆದರೆ, ಇದರಲ್ಲಿ ಸಾಕಷ್ಟು ಮೋಸ ನಡೆಯುತ್ತಿದೆ ಹಾಗು ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪುತ್ತಿಲ ಎಂದು ತಿಳಿದು ಸರ್ಕಾರ ಈಗ ಹೊಸ ಯೋಜನೆಯನ್ನು ಜಾರಿ ಮಾಡಲು ಚಿಂತನೆ ನಡೆಸಿದೆ.

ಇದಕ್ಕೂ ಮುನ್ನ ಪಡಿತರ ವಿತರಣೆ ವ್ಯವಸ್ಥೆ ರದ್ದುಪಡಿಸಿ ನೇರವಾಗಿ ಫಲಾನುಭವಿಯ ಖಾತೆಗೆ ನಗದು ವರ್ಗಾವಣೆ ಮಾಡುವ ವ್ಯವಸ್ಥೆ ಜಾರಿ ಬಗ್ಗೆ ಪ್ರಧಾನಿ ಮೋದಿ ಚಿಂತನೆ ನಡೆಸಿದ್ದರು. ಈ ಹೊಸ ಯೋಜನೆಯ ಅಡಿಯಲ್ಲಿ ಫಲಾನುಭವಿಗಳು ಪಡಿತರ ಪಡೆಯಲು, ಪಡಿತರ ಅಂಗಡಿಗಳಲ್ಲಿ ಬೆರಳಚ್ಚು ನೀಡಬೇಕು ಇದಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ.

ಈಗ ಜಾರಿ ಇರುವ ನಿಯಮದ ಪ್ರಕಾರ ಫಲಾನುಭವಿಯು ರೇಷನ್ ಕಾರ್ಡ್ ತೋರಿಸಿದರೆ ಪಡಿತರ ದೊರಕುತ್ತಿತ್ತು, ಇದರಿಂದ ಕಾಳಸಂತೆಯಲ್ಲಿ ದಿನಸಿ ಮಾರುವುದು ಸುಲಭವಾಗಿತ್ತು. ಆದರೆ, ಈಗ ಬೆರಳಚ್ಚು ನೀಡಿದವರಿಗೆ ಮಾತ್ರ ಪಡಿತರ ನೀಡುವುದರಿಂದ, ದಿನಸಿಯ ಸರಿಯಾದ ಲೆಕ್ಕ ಸಿಗುವುದಲ್ಲದೆ, ಫಲಾನುಭವಿಗೆ ಪಡಿತರ ದೊರಕಲಿದೆ.

ಇನ್ನು ಹೊಸ ಯೋಜನೆ ಫೆಬ್ರವರಿ 9 ರಿಂದ ಜಾರಿಗೆ ಬಂದಿದೆ. ಈಗಾಗಲೇ ಡೆಹ್ರಾಡೂನ್ ಜಿಲ್ಲೆಯ 1043 ರೇಷನ್ ಅಂಗಡಿಗಳಲ್ಲಿ ಯೋಜನೆ ಜಾರಿಗೆ ಬರುತ್ತಿದೆ. ನ್ಯಾಯಬೆಲೆ ಪಡಿತರ ಅಂಗಡಿಗಳಿಗೆ ಬಯೋಮೆಟ್ರಿಕ್ ಯಂತ್ರವನ್ನು ನೀಡಲಾಗುತ್ತಿದೆ. ಸದ್ಯದಲ್ಲಿಯೇ ಎಲ್ಲ ಅಂಗಡಿಗಳಿಗೂ ಬಯೋಮೆಟ್ರಿಕ್ ಯಂತ್ರ ಲಭ್ಯವಾಗಲಿದೆ.

ರೇಷೆನ್ ಕಾರ್ಡುದಾರನ ಪರವಾಗಿ ಅವರ ಕುಟುಂಬದ ಯಾವುದೇ ಸದಸ್ಯರು (ಕಾರ್ಡನ್ನು ಮಾಡಿಸುವಾಗ ಬೆರಳಚ್ಚು ನೀಡಿದ ಸದಸ್ಯರು) ಬಯೋಮೆಟ್ರಿಕ್ ಗಣಕದಲ್ಲಿ ಹೆಬ್ಬೆಟ್ಟನ್ನು ಒತ್ತಿದ ನಂತರ ರೇಷನ್ ನೀಡಲಾಗುವುದು. ಈ ಮೂಲಕ ಅಕ್ರಮ ತಡೆಗೆ ಸರ್ಕಾರ ಮುಂದಾಗಿದೆ.

ಒಟ್ಟಿನಲ್ಲಿ ಈ ಯೋಜನೆ ದೇಶದ ಎಲ್ಲ ನ್ಯಾಯ ಬೆಲೆ ಅಂಗಡಿಗಳಿಗೆ ತಲುಪಿ, ಅಕ್ರಮಕ್ಕೆ ಬ್ರೇಕ್ ಬೀಳಲಿ ಎಂಬುವುದು ನಮ್ಮ ಆಶಯ…!

Also read: ಆಧಾರ್-ನಲ್ಲಿರೋ ಬೆರಳಚ್ಚು ಸರಿಯಾಗಿ ಹೊಂದಾಣಿಕೆ ಆಗಿಲ್ಲವೆಂದು ನೂರಾರು ಕುಟುಂಬಗಳಿಗೆ ಆಹಾರ ನಿರಾಕರಿಸುತ್ತಿರುವ ಸರ್ಕಾರ!!