ಬ್ರಾಂಡ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಒಳ್ಳೊಳ್ಳೆ ಉದ್ಯೋಗಾವಕಾಶಗಳು!!!

0
680

ಬ್ರಾಂಡ್ ಮ್ಯಾನೇಜ್‍ಮೆಂಟ್ ಜೀವನಕ್ಕೆ ಬೆಳಕು
ಬ್ರಾಂಡ್ ಮ್ಯಾನೇಜ್‍ಮೆಂಟ್ ಎಂಬುದು ಒಂದು ಸವಾಲಿನ ಕೆಲಸವಾಗಿದ್ದು ಈ ಕ್ಷೇತ್ರದಲ್ಲಿ ಅವಕಾಶಗಳಿಗೇನೂ ಕಮ್ಮಿಯಿಲ್ಲ. ಈ ಕ್ಷೇತ್ರದಲ್ಲಿ ಜೀವನ ಕಟ್ಟಿಕೊಳ್ಳಬೇಕು ಎನ್ನುವವರಿಗೆ ಬೇಕಿರುವುದು ಸೌಂದರ್ಯಪ್ರಜ್ಞೆ ಮತ್ತು ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂಬ ಹಂಬಲ. ಸೌಂದರ್ಯಪ್ರಜ್ಞೆ ಮತ್ತು ಸೌಂದರ್ಯದ ಹಂಬಲ ಇರುವವರು ಐಶಾರಾಮಿ ಬ್ರಾಂಡ್ ವ್ಯವಸ್ಥಾಪನ ಕ್ಷೇತ್ರದಲ್ಲಿ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯವಿದೆ. ಭಾರತದಲ್ಲಿ ಮೊದಲಿನಿಂದಲೂ ಸೌಂದರ್ಯಪ್ರಜ್ಞೆ ಇದ್ದೇ ಇತ್ತು, ಆದರೆ ಅದು ಇದ್ದುದು ಮಹಿಳೆಯರಲ್ಲಿ ಅಧಿಕ.

ಇತ್ತೀಚಿನ ವರ್ಷಗಳಲ್ಲಿ ಪುರುಷರಲ್ಲಿಯೂ ಸೌಂದರ್ಯಪ್ರಜ್ಞೆ ಮತ್ತು ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂಬ ಹಂಬಲ ಹೆಚ್ಚುತ್ತಲಿದೆ. ಹಾಗಾಗಿಯೇ ಐಶಾರಾಮಿ ವಸ್ತುಗಳ ಮಾರುಕಟ್ಟೆ ದಿನದಿನಕ್ಕೂ ವರ್ಧಿಸುತ್ತಲೇ ಇದೆ. ಮಾರುಕಟ್ಟೆಯಲ್ಲಿನ ಬೇಡಿಕೆ ಅನುಸರಿಸಿ ವಸ್ತುಗಳನ್ನು ಮಾರುಕಟ್ಟೆಯ ಸಂವೇದನೆಗೆ ತಕ್ಕಂತೆ ಮಾರಾಟ ಮಾಡಬಲ್ಲ ಮತ್ತು ಸೇವೆ ಒದಗಿಸಬಲ್ಲ ತರಬೇತಿ ಹೊಂದಿದ ವ್ಯಕ್ತಿಗಳಿಗೆ ಬೇಡಿಕೆಯೂ ಹೆಚ್ಚುತ್ತಲಿದೆ.

ಇಂದಿನ ಸಮಯ ಹೇಗಿದೆ ಎಂದರೆ `ಯಾವುದು ದೃಷ್ಟಿಗೆ ಗೋಚರಿಸುತ್ತದೋ ಅದೇ ಮಾರಾಟವಾಗುತ್ತದೆ’ ಎಂಬಂತೆ. ಹಾಗಾಗಿಯೇ ಹೆಸರಾಂತ ದೊಡ್ಡ ಕಂಪನಿಗಳು ಮಾತ್ರವಲ್ಲ ಉತ್ಪಾದನಾ ಕ್ಷೇತ್ರದಲ್ಲಿರುವ ಚಿಕ್ಕ ಚಿಕ್ಕ ಕಂಪನಿಗಳೂ ತಮ್ಮ ಐಶಾರಾಮಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಸ್ಪರ್ಧೆಗೆ ಇಳಿಯುತ್ತಿವೆ. ಇದಕ್ಕಾಗಿ ಬ್ರಾಂಡ್ ವ್ಯವಸ್ಥಾಪನೆಯಲ್ಲಿ ತರಬೇತಿ ಪಡೆದವರನ್ನು ತಮ್ಮ ಬ್ರಾಂಡ್ ಮಾರ್ಕೆಟಿಂಗ್‍ಗಾಗಿ ನಿಯೋಜಿಸಿಕೊಳ್ಳುವುದಕ್ಕೆ ಉತ್ಸುಕವಾಗಿವೆ.

ಕಂಪನಿಗಳು ತಮ್ಮ ಬ್ರಾಂಡ್ ಸ್ಥಾಪನೆಗಾಗಿ ಬ್ರಾಂಡ್ ಮ್ಯಾನೇಜ್‍ಮೆಂಟ್ ತಂಡಗಳನ್ನೇ ಕಂಪನಿಗಳಲ್ಲಿ ರೂಪಿಸಿಕೊಳ್ಳಲು ಸತತ ಸ್ಪರ್ಧೆಗೆ ಇಳಿಯುತ್ತಿವೆ. ಇಂತಹ ಬ್ರಾಂಡ್ ಮ್ಯಾನೇಜ್‍ಮೆಂಟ್ ಕ್ಷೇತ್ರದಲ್ಲಿ ದುಡಿಯಲು ಇಚ್ಛಿಸುವವರಿಗಾಗಿ ಇಲ್ಲಿವೆ ಕೆಲವು ಮಾಹಿತಿ.ಯಾವ್ಯಾವ ಕೋರ್ಸ್‍ಗಳಿವೆ..?ಬ್ರಾಂಡ್ ಮ್ಯಾನೇಜ್‍ಮೆಂಟ್‍ನಲ್ಲಿ ಹಲವು ವಿಧದ ಕೋರ್ಸ್‍ಗಳು ಇವೆ.

ಅವುಗಳಲ್ಲಿ ಒಂದು ಪಿಜಿ ಡಿಪ್ಲೋಮಾ ಇನ್ ಲಗ್ಝುರಿ ಬ್ರಾಂಡ್ ಮ್ಯಾನೇಜ್‍ಮೆಂಟ್. ಪೋಸ್ಟ್ ಗ್ರಾಜ್ಯುಯೇಟ್ ಡಿಪ್ಲೋಮಾ ಇನ್ ಲಗ್ಝುರಿ ಬ್ರಾಂಡ್ ಮ್ಯಾನೇಜ್‍ಮೆಂಟ್. ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಬ್ರಾಂಡ್ ಅಡ್ವೈಜರ್, ವಿಜುವಲ್ ಮರ್ಚೆಂಡೈಸರ್, ಲಗ್ಝುರಿ ಈವೆಂಟ್ ಪ್ಲಾನರ್, ಬ್ರಾಂಡ್ ಹೆಡ್, ಬ್ರಾಂಡ್ ಮ್ಯಾನೇಜರ್‍ಗಳಾಗುವ ಅವಕಾಶಗಳು ಲಭಿಸುತ್ತವೆ.ಹಲವು ಸಾಧ್ಯತೆಗಳುಪೋಸ್ಟ್ ಗ್ರಾಜ್ಯುಯೇಟ್ ಡಿಪ್ಲೋಮಾ ಇನ್ ಲಗ್ಝುರಿ ಬ್ರಾಂಡ್ ಮ್ಯಾನೇಜ್‍ಮೆಂಟ್ ತರಬೇತಿ ವಿಶೇಷವೂ ಮತ್ತು ಅತ್ಯಂತ ಭಿನ್ನವಾದ ತರಬೇತಿಯಾಗಿದೆ. ಗ್ರಾಹಕರ ಬೇಡಿಕೆಗಳು ದಿನದಿನಕ್ಕೂ ಹೆಚ್ಚುತ್ತಲೇ ಇದ್ದರೂ ಅವರ ಬೇಡಿಕೆಗಳಿಗೆ ಹೊಂದಬಹುದಾದ ವಸ್ತುಗಳು ಎಲ್ಲಿ ಸಿಕ್ಕುತ್ತವೆ, ಕೈಗೆಟುಕುವ ದರ ಎಲ್ಲಿರುತ್ತದೆ, ಎಷ್ಟು ವಿಧದ ವಸ್ತುಗಳನ್ನು ಯಾವ್ಯಾವ ಕಂಪನಿ ತಯಾರಿಸುತ್ತಿದೆ, ಮಾರುಕಟ್ಟೆಯಲ್ಲಿ ಕಂಪನಿಯ ಸ್ಥಾನಮಾನ ಏನು ಎಂಬುದನ್ನು ಸರಳವಾಗಿ ಗ್ರಾಹಕರಿಗೆ ತಿಳಿಸುವ ನೈಪುಣ್ಯ ಇರುವವರ ಕೊರತೆ ಅಧಿಕವಾಗಿದೆ. ಹಾಗಾಗಿಯೇ ಈ ಕ್ಷೇತ್ರ ಹಲವು ಸಂಭವನೀಯತೆಗಳ ಕ್ಷೇತ್ರವಾಗಿದ್ದು, ಉದ್ಯೋಗದ ಹೇರಳ ಅವಕಾಶಗಳು ಇಲ್ಲಿವೆ.ಸದ್ಯದ ವಿಶ್ವದ ಗ್ರಾಹಕೋಪಯೋಗಿ ವಸ್ತುಗಳ ಮಾರುಕಟ್ಟೆ ಅಂದಾಜಿನ ಪ್ರಕಾರ ಈ ಕ್ಷೇತ್ರದಲ್ಲಿ ಮುಂಬರುವ ಸಮಯದಲ್ಲಿ ಹೇರಳ ಔದ್ಯೋಗಿಕ ಅವಕಾಶಗಳು ಸೃಷ್ಟಿಯಾಗುವ ಎಲ್ಲ ಲಕ್ಷಣಗಳಿವೆ.

ಉತ್ಸಾಹಿ ಯುವ ಸಮೂಹಕ್ಕೆ ಇದು ಲಾಂಚಿಂಗ್ ಪ್ಯಾಡ್ ರೂಪದಲ್ಲಿ ಗೋಚರಿಸಲಿದೆ. ಅರ್ಹತೆಯೇನುಪೋಸ್ಟ್ ಗ್ರಾಜ್ಯುಯೇಟ್ ಡಿಪ್ಲೋಮಾ ಇನ್ ಲಗ್ಝುರಿ ಬ್ರಾಂಡ್ ಮ್ಯಾನೇಜ್‍ಮೆಂಟ್ ತರಬೇತಿ ಪಡೆಯಲು ಪದವೀಧರರಾಗಿರುವುದು ಅಗತ್ಯ.

ಇದಲ್ಲದೇ ವಿದ್ಯಾರ್ಥಿಗೆ ಐಶಾರಾಮಿ ವಸ್ತುಗಳನ್ನು ಬಳಸುವ ಆಸೆ ಮತ್ತು ಇಚ್ಛೆ ಇರುವುದು ಅವಶ್ಯ. ಯಾವ ವಿದ್ಯಾರ್ಥಿಯಲ್ಲಿ ಸಂವಹನ ಸಾಮಥ್ರ್ಯ ಮತ್ತು ವ್ಯಕ್ತಿತ್ವ ಚೆನ್ನಾಗಿರುತ್ತದೋ ಅಂಥವರು ಈ ಕ್ಷೇತ್ರದಲ್ಲಿ ಸಫಲರಾಗುವ ಸಂಭವ ಹೆಚ್ಚು.

ಇದರೊಂದಿಗೆ ವಿದೇಶಿ ಭಾಷೆ ಗೊತ್ತಿರುವವರಿಗೆ ಲಾಭದಾಯಕ. ವಿಭಿನ್ನ ಕ್ಷೇತ್ರಐಶಾರಾಮಿ ವಸ್ತುಗಳ ಮಾರುಕಟ್ಟೆ ಪ್ರತಿವರ್ಷ ಶೇ. 20ರ ದರದಲ್ಲಿ ವರ್ಧಿಸುತ್ತಿದೆ. 2020ರ ವೇಳೆಗೆ ಐಶಾರಾಮಿ ವಸ್ತುಗಳ ಮಾರುಕಟ್ಟೆ ಕ್ಷೇತ್ರದಲ್ಲಿ 28 ಲಕ್ಷ ಜನರಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ವಾಹನ, ಆಭರಣ, ರಿಯಲ್ ಎಸ್ಟೇಟ್, ಪ್ರವಾಸ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಉದ್ಯಮಗಳಲ್ಲಿ ಅವಕಾಶಗಳು ಹೆಚ್ಚಾಗಿ ಸಿಕ್ಕುತ್ತವೆ. ಹೀಗಿದ್ದೂ ಈ ಕ್ಷೇತ್ರದಲ್ಲಿನ ಸಮಸ್ಯೆ ಏನೆಂದರೆ ಕುಶಲರಾದ ಉದ್ಯೋಗಿಗಳು ಸಿಕ್ಕದಿರುವುದು.ವೇತನ ಪ್ರಮಾಣಪೋಸ್ಟ್ ಗ್ರಾಜ್ಯುಯೇಟ್ ಡಿಪ್ಲೋಮಾ ಇನ್ ಲಗ್ಝುರಿ ಬ್ರಾಂಡ್ ಮ್ಯಾನೇಜ್‍ಮೆಂಟ್ ತರಬೇತಿ ಪೂರ್ಣಗೊಂಡ ನಂತರ ವಿವಿಧ ಕಂಪನಿಗಳಲ್ಲಿ ಉದ್ಯೋಗಗಳು ಲಭಿಸುತ್ತವೆ. ತರಬೇತಿ ಪಡೆಯುತ್ತಿರುವಾಗಲೇ ಇಂಟರ್ನ್‍ಷಿಪ್‍ಗೆ ತೆರಳುವ ವಿದ್ಯಾರ್ಥಿಗಳಿಗೆ ಅವರವರ ಸಾಮಥ್ರ್ಯಕ್ಕೆ ಅನುಸಾರವಾಗಿ ತಿಂಗಳಿಗೆ ಸದ್ಯ 15 ರಿಂದ 25 ಸಾವಿರ ರೂಪಾಯಿಗಳವರೆಗೆ ಸ್ಟೈಪೆಂಡ್ ದೊರೆಯುತ್ತದೆÀ. ತರಬೇತಿಯನ್ನು ಪೂರ್ಣಗೊಳಿಸಿದ ನಂತರವೇ ಉದ್ಯೋಗಕ್ಕೆ ಸೇರುವುದಾದಲ್ಲಿ ಕನಿಷ್ಠ 40ರಿಂದ 50 ಸಾವಿರ ರೂಗಳವರೆಗೆ ವೇತನ ಶ್ರೇಣಿಯಿದೆ.
ತರಬೇತಿ ಎಲ್ಲೆಲ್ಲಿ..?
ಇಂಡಿಯನ್ ರೀಟೇಲ್ ಸ್ಕೂಲ್, ನವದೆಹಲಿ www.indianretailschool.com
ಲಗ್ಝುರಿ ಕನೆಕ್ಟ್ ಬಿಝನೆಸ್ ಸ್ಕೂಲ್, ಗುಡಗಾಂವ್, ಹರಿಯಾಣ www.icbs.edu.in
ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅ್ಯಂಡ್ ಸ್ಟಡೀಸ್, ಮುಂಬಯಿ www.ismsedu.com
ಸಿಂಬಯೋಸಿಸ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸ್ಟಡೀಸ್, ಪುಣೆ www.sims.edu
ಝೇವಿಯರ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅ್ಯಂಡ್ ರಿಸರ್ಚ್ ಅ್ಯಂಡ್ ಎಂಟರ್‍ಪ್ರಿನರ್ಸಿಪ್, ಬೆಂಗಳೂರು, ಕರ್ನಾಟಕ www.xime.org