ನಿಮ್ಮ ಮನೆಯಲ್ಲಿಯೇ ನೀವು ತಯಾರಿಸಬಹುದಾದ ಬ್ರೆಡ್ ಪಿಜ್ಜಾ ಹೇಗೆ ಮಾಡೋದು ಅನ್ನೋದು ಇಲ್ಲಿದೆ ನೋಡಿ..!

0
2484

ಹೌದು ಬ್ರೆಡ್ ಪಿಜ್ಜಾ ನಿಮ್ಮ ಮನೆಯಲ್ಲಿ ನೀವು ಸುಲಭವಾಗಿ ತಯಾರಿಸಿಕೊಂಡು ನೀವು ಸೆಚಿಸಬಹುದು ಹೇಗೆ ಅನ್ನೋದನ್ನ ನಾವು ಹೇಳ್ತಿವಿ ನೋಡಿ. ಬ್ರೆಡ್ ಅಂದ್ರೆ ರೋಗಿಗಳು ತಿನ್ನುವಂತದ್ದು ಎಂಬ ಭಾವನೆ ಕೆಲವರಲ್ಲಿದೆ. ಆದ್ರೆ ಬ್ರೆಡ್‍ನಿಂದ ಅನೇಕ ವಿಧವಾದ ಸ್ನ್ಯಾಕ್ಸ್ ತಯಾರಿಸಬಹುದು.

ಬೇಕಾಗುವ ಸಾಮಾಗ್ರಿಗಳು:

 • ಬ್ರೆಡ್- 3 ಸ್ಲೈಸ್
 • ಕಟ್ ಮಾಡಿದ ಈರುಳ್ಳಿ- 2 ಚಮಚ
 • ಕಟ್ ಮಾಡಿದ ಕ್ಯಾಪ್ಸಿಕಮ್- 2 ಚಮಚ
 • ಚೀಸ್- 3 ಚಮಚ
 • ಟೊಮೆಟೋ ಸಾಸ್ ಅಥವಾ ಪಿಜ್ಜಾ ಸಾಸ್- 2 ಚಮಚ
 • ಕಾಳುಮೆಣಸಿನಪುಡಿ ಅಥವಾ ಇಟಾಲಿಯನ್ ಮಸಾಲೆ- 1 ಚಿಟಿಕೆ
 • ಚಿಲ್ಲಿ ಫ್ಲೇಕ್ಸ್- ಸ್ವಲ್ಪ
 • ಕ್ಯಾರೆಟ್(ಬೇಕೆಂದಲ್ಲಿ)- 1
 • ಕ್ಯಾಬೇಜ್ (ಬೇಕೆಂದಲ್ಲಿ)- 3 ಚಮಚ

ಬ್ರೆಡ್ ಪಿಜ್ಜಾ  ಮಾಡೋ ವಿಧಾನ:

 • ಮೊದಲು ಬ್ರೆಡ್‍ನ ಒಂದು ಸೈಡಿಗೆ 1 ಚಮಚದಷ್ಟು ಟೊಮೆಟೋ ಸಾಸ್ ಸವರಿಡಬೇಕು.
 • ಅದರ ಮೇಲೆ ಸಣ್ಣಗೆ ಕಟ್ ಮಾಡಿದ ಈರುಳ್ಳಿಯನ್ನು ಹರಡಿ.
 • ಈ ಈರುಳ್ಳಿಯ ಮೇಲೆ ಸಣ್ಣಗೆ ತುಂಡರಿಸಿದ ಕ್ಯಾಪ್ಸಿಕಮ್ ಪೀಸ್‍ಗಳನ್ನು ಹಾಕಿ. ಹಾಗೆಯೇ ಪೆಪ್ಪರ್
 • ಪೌಡರ್ ಮತ್ತು ಚಿಲ್ಲಿ ಫ್ಲೇಕ್ಸ್ ಹರಡಿ.
 • ಬಳಿಕ ಚೀಸ್ ಕೂಡ ಅದರ ಮೇಲೆ ಹರಡಿ.

 • ಇದರ ಮೇಲೆ ನಿಮಗೆ ಬೇಕೆಂದಲ್ಲಿ ಸಣ್ಣಗೆ ಕಟ್ ಮಾಡಿದ ಟೊಮೆಟೋ, ಕ್ಯಾರೆಟ್, ಕ್ಯಾಬೇಜ್ ಗಳನ್ನು ಬಳಸಬಹುದು.
 • ನಂತ್ರ ಒಲೆಯ ಮೇಲೆ ತವಾ ಇಟ್ಟು ಬಿಸಿಯಾದ ಬಳಿಕ ಅದಕ್ಕೆ ಸ್ವಲ್ಪ ತುಪ್ಪ ಸವರಿ ಚೀಸ್ ಕರಗುವವರೆಗೆ ಅಂದ್ರೆ 5-7 ನಿಮಿಷಗಳ ಕಾಲ ಒಲೆಯಲ್ಲಿ ಬಿಸಿ ಮಾಡಿ. ಒಲೆಯಿಂದ ತೆಗೆದ ಬ್ರೆಡ್ ಪಿಜ್ಜಾವನ್ನು ಬಿಸಿಬಿಸಿ ಇರುವಾಗಲೇ ಸೇವಿಸಿ ತುಂಬ ರುಚಿಕರವಾಗಿರುತ್ತದೆ.