ಕೂದಲು ಇಲ್ಲ ಎಂದು ಡಾಕ್ಟಾರ್ ವರನ ಜೊತೆ ಮದುವೆ ಮುರಿದ ವಧು, ಹುಡುಗ ಏನು ಮಾಡಿದನು ಗೊತ್ತೇ?

0
766

ಮದುವೆಯ ಸಮಯದಲ್ಲಿ ವಧುವಿನ ಅಥವಾ ಹುಡುಗಿಯ ಕಡೆಯವರು ವರದಕ್ಷಿಣೆ ಕೊಟ್ಟಿಲವೆಂದು, ಕಡಿಮೆ ವರದಕ್ಷಿಣೆ ಕೊಟ್ಟರೆಂದು, ವಧು ಸರಿಯಾಗಿಲ್ಲ, ಮಾಡುವೆ ವ್ಯವಸ್ಥೆಯಲ್ಲಿ ಏನಾದರು ಕಡಿಮೆ ಆಗಿದೆ ಎಂದು ವರನ ಅಥವಾ ಹುಡುಗನ ಕಡೆಯವರು ಮದುವೆ ಮುರಿದಿರುವವುದನ್ನು ಕೇಳಿರುತ್ತೀರಾ. ಆದರೆ, ಇಲ್ಲಿ ಹುಡುಗಿ ಮದುವೆ ಮುರಿದಿದ್ದಾಳೆ ಯಾಕೆ ಗೊತ್ತೇ?

ಬಿಹಾರದ ಪಾಟ್ನಾದಲ್ಲಿ ನಡೆದ ಘಟನೆ ಇದು, ವರ ರವಿ ಕುಮಾರ್ ವೃತ್ತಿಯಲ್ಲಿ ವೈದ್ಯರಾಗಿದ್ದು, ತಾನು ಭೇಟಿಯೇ ಆಗದ ಯುವತಿಯೊಂದಿಗೆ ಮದುವೆಯಾಗಲು ದೆಹಲಿಯಿಂದ 1 ಸಾವಿರ ಕಿ.ಮೀ ದೂರದಲ್ಲಿರುವ ಬಿಹಾರದ ಸುಗೌಲಿ ಗ್ರಾಮಕ್ಕೆ ಬಂದಿದ್ದರು.

ಇದಕ್ಕೂ ಮುನ್ನ ವಧುವಿನ ತಂದೆ ವರ ರವಿಕುಮಾರ್ ಅವರ ತಂದೆಯ ಮನೆಯಲ್ಲಿ ಮೂರು ಬಾರಿ ಉಳಿದುಕೊಂಡು ಮಾತುಕತೆ ನಡೆಸಿದ ಬಳಿಕ 1 ವರ್ಷ ಮುಂಚಿತವಾಗಿಯೇ ಕುಟುಂಬಸ್ಥರು ಇವರಿಬ್ಬರ ಮದುವೆಯನ್ನು ನಿಶ್ಚಯಿಸಿದ್ದರು. ಎಲ್ಲರು ನಿಶ್ಚಯ ಮಾಡಿದಂತೆ ಮದುವೆಯ ಎಲ್ಲ ಕಾರ್ಯಗಳು ಸಾಗಿದ್ದವು.

ಮದುವೆಗೆ ಎಲ್ಲಾ ಸಿದ್ಧತೆ ಮಾಡಲಾಗಿತ್ತು, ಅತಿಥಿಗಳು ಮದುವೆ ತಯಾರಿಯಲ್ಲಿ ತೊಡಗಿ, ಊಟೋಪಚಾರವೂ ನಡೆದಿತ್ತು. ವಧು ವರ ಹೂಮಾಲೆ ಬದಲಾಯಿಸಿಕೊಳ್ಳುವ ಶಾಸ್ತ್ರವನ್ನೂ ಮುಗಿಸಿದ್ದರು. ಆದರೆ, ಮತ್ತೊಂದು ಶಾಸ್ತ್ರ ಮಾಡುವಾಗ ವರ ರವಿಕುಮಾರ್ ತನ್ನ ಪೇಟವನ್ನು ತೆಗೆದರು ಆಗ ಮುಂದೆ ನಿಂತಿದ್ದ ವಧುಗೆ ಅಚ್ಚರಿಯಾಗಿದೆ.

Also read: ಬೋಡು ತಲೆ ಇದೆ ಅಂತ ಚಿಂತಿಸಬೇಡಿ ಈರುಳ್ಳಿ ರಸ ಬಳಸಿ ಕೂದಲು ಬೆಳಸಿ…!

ವಧು ತಾನು ಮಾಡುವೆಯಾಗುತ್ತಿರುವ ಹುಡುಗ ಬಾಲ್ಡ್ ಆಗ್ತಿದ್ದಾನೆ ಎಂದು ತಿಳಿಯಿತು. ಅಲ್ಲಿಯವರೆಗೆ ಆಕೆ ರವಿಕುಮಾರ್ ಅವರನ್ನು ಫೋಟೋಗಳಲ್ಲಿ ಮಾತ್ರ ನೋಡಿದ್ದಳು. ಇದನ್ನು ನೋಡಿದ ತಕ್ಷಣ ವಧು ಸ್ಥಳದಲ್ಲೇ ಮದುವೆ ಕ್ಯಾನ್ಸಲ್ ಮಾಡಿದ್ದಾಳೆ. ಯಾರು ಎಷ್ಟುಹೇಳಿದರು ಕೇಳಲೇ ಇಲ್ಲ, ಇದನ್ನು ನೋಡಿ ವರ ಏನು ಮಾಡಿದನು ಎಂದು ಮುಂದೆ ಓದಿ.

ಮದುವೆಯಾಗಿಯೇ ಮನೆಗೆ ಹಿಂದಿರುಗಬೇಕು ಎಂದು ಸಂಕಲ್ಪ ಮಾಡಿದ್ದರು. ಹೀಗಾಗಿ ರವಿಕುಮಾರ್ ಕುಟುಂಬದವರು ಗ್ರಾಮ ಪಂಚಾಯ್ತಿಯ ಮೊರೆ ಹೋದ್ರು. ಅವರು ಗ್ರಾಮದ ಬಡ ತರಕಾರಿ ವ್ಯಾಪಾರಿಯ ಮಗಳಾದ ನೇಹಾ ಕುಮಾರಿಯನ್ನು ಮದುವೆಯಾಗುವಂತೆ ಸಲಹೆ ನೀಡಿದರು.

ರವಿಕುಮಾರ್ ಮೊದಲ ಮದುವೆ ಮುರಿದು ಬಿದ್ದ ಎರಡು ದಿನಗಳ ಬಳಿಕ ದೇವಸ್ಥಾನವೊಂದರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ತರಕಾರಿ ವ್ಯಾಪಾರಿಯ ಮಗಳಾದ ನೇಹಾ ಕುಮಾರಿ ಜೊತೆ ಮದುವೆ ಆಗಿದ್ದಾರೆ. ವರನ ಕೂದಲ ಉದುರುವಿಕೆಯನ್ನೇ ದೊಡ್ಡದಾಗಿ ಪರಿಗಣಿಸಿದ ವಧುವಿನ ನಿರ್ಧಾರ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

Also read: ಅನಗತ್ಯ ಕೂದಲು ನಿವಾರಣೆಗೆ ಈ 4 ಟಿಪ್ಸ್ ಗಳ ಬಗ್ಗೆ ತಿಳಿದರೆ ನೀವು ಖಂಡಿತ ಇದನ್ನು ಪಾಲಿಸ್ತೀರ…!