ಚುನಾವಣೆಯಲ್ಲಿ ಗೆಲುವು ಸಾಧಿಸಿದ ಈ ಸಂಸದ ತಮಗೆ ಹೂವಿನ ಬುಕ್ಕೆ, ಸಿಹಿತಿಂಡಿ ಬದಲು ನೋಟ್ಸ್ ಬುಕ್ಸ್ ನೀಡಿ ಎಂದು ಮನವಿ ಮಾಡಿದ್ದಾರೆ..

0
366

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶವು ಅಭಿವೃದ್ದಿಯತ್ತ, ಬಡ ಮಕ್ಕಳಿಗೆ ಶಿಕ್ಷಣ ಕೊಡಿಸುವತ್ತ ಸಾಗುತ್ತಿದೆ ಎನ್ನುವುದಕ್ಕೆ ಇತ್ತೀಚಿಗೆ ನಡೆದ ಈ ಘಟನೆಯೇ ಸಾಕ್ಷಿಯಾಗಿದ್ದು, ಚುನಾವಣೆಯಲ್ಲಿ ಗೆದ್ದ ಯಾವುದೇ ಅಭ್ಯರ್ಥಿಗಳು ಈ ರೀತಿಯ ಯೋಚನೆಯನ್ನು ಮಾಡುವುದು ಬಹಳಷ್ಟು ಕಡಿಮೆ ಏಕೆಂದರೆ ದೇಶದಲ್ಲಿ ಬಿಜೆಪಿ ಸರ್ಕಾರ ಎಲ್ಲ ಕಡೆಗಳಲ್ಲಿ ಗೆಲುವು ಸಾಧಿಸಿದೆ, ಅದರಂತೆ ಬಿಜೆಪಿ ಪಕ್ಷದಿಂದ ಗೆಲುವು ಕಂಡ ಇಲ್ಲೊಬ್ಬ ಸಂಸದರು ಅಭಿಮಾನಿಗಳಿಗೆ ಹೂವಿನ ಬುಕ್ಕೆ ಕೊಡವ ಬದಲು ನೋಟ್ ಬುಕ್ಸ್ ಕೊಡಿ ಎಂದು ಮನವಿ ಮಾಡಿದ್ದಾರೆ.

ಹೌದು ಮೇ 27 ರಂದು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸಿಕಂದರಾಬಾದ್ ಎಂಪಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಕಿಶನ್ ರೆಡ್ಡಿ, ತಮಗೆ ಅಭಿಮಾನಿಗಳು ಮತ್ತು ಪಕ್ಷದವರು ಸನ್ಮಾನ ಮಾಡಲು ಶುಭಾಶಯಗಳನ್ನು ತಿಳಿಸಲು ತಮ್ಮ ಆಫೀಸ್-ಗೆ ಬರುವವರಿಗೆ ಹೂವಿನ ಹೂಗುಚ್ಛಗಳನ್ನು, ಶಾಲುಗಳು ಅಥವಾ ಸಿಹಿತಿನಿಸುಗಳು ತರುವ ಬದಲು ನೋಟ್ ಬುಕ್ ಮತ್ತೆ ಪುಸ್ತಕಗಳನ್ನು ತರಲು ತಿಳಿಸಿದ್ದಾರೆ. ಹೀಗೆ ಬಂದ ಬುಕ್ಸ್ -ಗಳನ್ನೂ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ನೀಡುತ್ತಾರೆ ಅಂತೆ. ಈಗಾಗಲೇ ತೆಲಂಗಾಣದಲ್ಲಿ ಮತ್ತೆ ಶಾಲೆಗಳು ಪ್ರಾರಂಭವಾಗುತ್ತಿವೆ ಆದರಿಂದ ಶಾಲೆಗಳ ಮಕ್ಕಳಿಗೆ ದಾನ ನೀಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

Also read: ಗುಡಿಸಲ್ಲಿ ಸನ್ಯಾಸಿ ಜೀವನ ಸೈಕಲ್ ಮೇಲೆ ಚುನಾವಣೆ ಪ್ರಚಾರ; ಈಗ ಮೋದಿ ಸರ್ಕಾರದ ಮಂತ್ರಿಯಾದ ಸರಳ ವ್ಯಕ್ತಿಯ ರಾಜಕೀಯ ಬೆಳೆವಣಿಗೆಗೆ ಏನು ಕಾರಣ ಗೊತ್ತಾ??

ಈ ಒಳ್ಳೆಯ ಸಂದೇಶವನ್ನು ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಮೆಚ್ಚಿ ಶುಭಾಶಯಗಳನ್ನು ತಿಳಿಸಲು ಬಂದು ನೋಟ್ಸ್ ಬುಕ್ಸ್ ನೀಡುತ್ತಿದ್ದಾರೆ. ತಮ್ಮ ಮನವಿಯನ್ನು ಅರಿತ ಜನರಿಗೆ ಕಿಶನ್ ರೆಡ್ಡಿಯವರು ಅಭಿನಂದನೆ ತಿಳಿಸಿದ್ದಾರೆ. ಅದರಂತೆ ಗ್ರೇಟರ್ ಹೈದರಾಬಾದ್ ಭಾರತ್ ಜನತಾ ಯುವ ಮೋರ್ಚಾ (ಬಿಜೆವೈಎಂ) ಅಧ್ಯಕ್ಷ ರಾಜೇಶ್ ಕುಮಾರ್ ನೋಟ್ಸ್ ಬುಕ್ಸ್-ಗಳನ್ನು ದೇಣಿಗೆ ನೀಡಲು ಕಿಶನ್ ರೆಡ್ಡೀ ಅವರ ಮನೆಗೆ ಭೇಟಿ ನೀಡಿದರು. ಈ ಸಮಯದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ರಾಜೇಶ್, ಕಿಶನ್ ರೆಡ್ಡಿಯಂತಹ ಕೆಲವು ನಾಯಕರು ಮಾತ್ರ ಇಂತಹ ಶ್ರೇಷ್ಠ ವಿಚಾರಗಳೊಂದಿಗೆ ಬರಲು ಸಾಧ್ಯ ಪ್ರತಿ ಮುಖಂಡರು ಇವರ ಯೋಚನೆಯನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು. ಅದರ ಜೊತೆಗೆ ಬಡವರಿಗೆ ಸಹಾಯ ಮಾಡಲು ಇಂತಹ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು. ಎಂದು ಹೇಳಿದರು.

ಹೀಗೆಯೇ ಸ್ವಯಂ ಸಹಾಯ ಗುಂಪುಗಳ ಸದಸ್ಯರು (ಎಸ್.ಹೆಚ್.ಜಿ.ಗಳು) ಸೇರಿದಂತೆ ಹಲವಾರು ಮಹಿಳಾ ಕಾರ್ಯಕರ್ತರು ಕಿಶನ್ ರೆಡ್ಡಿ ಕಚೇರಿಗೆ ಭೇಟಿ ನೀಡಿ ಮಕ್ಕಳಿಗೆ ನೋಟ್ಸ್ ಬುಕ್ಸ್ ಮತ್ತು ಕಥೆಪುಸ್ತಕಗಳನ್ನು ದಾನ ಮಾಡಿದರು. ಈ ಎಲ್ಲ ಪ್ರತಿಕ್ರಿಯೆಯಿಂದ ವಿನೀತರಾದ ಕಿಶನ್ ರೆಡ್ಡಿ ಅವರು ಟ್ವೀಟ್-ನಲ್ಲಿ ತಮ್ಮ ಹಿತೈಷಿಗಳಿಗೆ ಧನ್ಯವಾದ ತಿಳಿಸಿ ತಮ್ಮ ಊರುಗಳಲ್ಲಿ ಶಾಲೆಬಿಟ್ಟ ಮಕ್ಕಳಿಗೆ ಸಹಾಯ ಮಾಡಿ ಮತ್ತೆ ಶಾಲೆಗೆ ಹೋಗುವಂತೆ ಪ್ರೋತ್ಸಾಹ ನೀಡಬೇಕು ಎಂದು ನಿಮ್ಮ ಕೈಯಿಂದ ಆದಷ್ಟು ದಾನವನ್ನು ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಇದೆ ಮನೋಭಾವನೆಯನ್ನು ದೇಶದ ಎಲ್ಲ ಮುಖಂಡರು, ರಾಜಕೀಯ ನಾಯಕರು ಶ್ರೀಮಂತರು ಬೆಳೆಸಿಕೊಂಡರೆ ಇಡಿ ದೇಶ ಸಾಕ್ಷರತೆ ಹೊಂದಿ ಅಭಿವೃದ್ದಿಯತ್ತ ಸಾಗುವುದರಲ್ಲಿ ಅನುಮಾನವಿಲ್ಲ.