ಬದನೆಕಾಯಿ ಅಂದ ತಕ್ಷಣ ನೆನಪಿಗೆ ಬರುವುದಿ ಜೋಳದ ರೊಟ್ಟಿ ಜೊತೆ ಬದನೆಕಾಯಿ ಎಣ್ಣೆಗಾಯಿ ಸವಿಯಲು ಬಲು ರುಚಿಯಾಗಿರುತ್ತದೆ. ಇದೆ ಬದನೆಕಾಯಿ ಇಂದ ಬದನೆಕಾಯಿ ರೋಸ್ಟ್ ಕೂಡ ಮಾಡಬಹುದು ಇದು ಸವಿಯಲು ಬಲು ರುಚಿಯಾಗಿರುತ್ತದೆ ಮತ್ತು ಸರಳವಾಗಿ ಕೂಡ ಮಾಡಬಹುದು.
ಬೇಕಾಗುವ ಸಾಮಗ್ರಿಗಳು
- 3 ಬದನೆಕಾಯಿ
- 5 ಹಸಿ ಮೆಣಸಿನಕಾಯಿ
- 5 ಬೆಳ್ಳುಳ್ಳಿ ಎಸಳು
- 1 ಚಮಚ ಅರಿಶಿಣ ಪುಡಿ
- 4 ಚಮಚ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
- ಮೊದಲಿಗೆ ಬದನೆಕಾಯಿಯನ್ನು ಚೆನ್ನಾಗಿ ತೊಳೆದು ನಂತರ ರೌಂಡ್-ರೌಂಡಾಗಿ ಕತ್ತರಿಸಿಕೊಂಡು ಇಟ್ಟುಕೊಳ್ಳಿ.
- ಹಸಿ ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿ, ಅದಕ್ಕೆ ಉಪ್ಪು, ಅರಿಶಿಣ ಹಾಕಿ ಮಿಕ್ಸ್ ಮಾಡಿ, ಅದರಲ್ಲಿ ಬದನೆಕಾಯಿ ಹಾಕಿ ಮಿಕ್ಸ್ ಮಾಡಿ 15 ನಿಮಿಷ ನೆನೆಯಲು ಬಿಡಿ.
3. ಈಗ ಪ್ಯಾನ್ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ ಬದನೆಕಾಯಿ ಹಾಕಿ ಎರಡೂ ಕಡೆ ಚೆನ್ನಾಗಿ ರೋಸ್ಟ್ ಮಾಡಿದರೆ ಬಿಸಿ ಬಿಸಿ ಸ್ಪೆಷಲ್ ಬದನೆಕಾಯಿ ರೋಸ್ಟ್ ಸವಿಯಲು ಸಿದ್ಧ.