ಬ್ರಿಟನ್ ಸಂಸತ್ ಮೇಲೆ ಉಗ್ರ ದಾಳಿ 2 ಸಾವು,12 ಮಂದಿಗೆ ಗಾಯ

0
512

ಲಂಡನ್:  ಬ್ರಿಟನ್ ಸಂಸತ್ ಮೇಲೆ ಉಗ್ರ ದಾಳಿ ಯತ್ನ ನಡೆದಿದೆ. ಈ ಘಟನೆಯಲ್ಲಿ ಮಹಿಳೆ ಸೇರಿ ಇಬ್ಬರು ಸಾವನ್ನಪಿದ್ದು 12 ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಅಸ್ಪತ್ರೆ ದಾಖಲಿಸಿದ್ದಾರೆ.

ಮೂಲಗಳ ಪ್ರಕಾರ, ಅಜ್ಞಾತ ವ್ಯಕ್ತಿಯೊಬ್ಬ ಸಂಸತ್ ಆವರಣವನ್ನು ಪ್ರವೇಶಿಸಿದ್ದ. ಒಳಗೆ ಅಧಿವೇಶನ ನಡೆಯುತ್ತಿತ್ತು. ಆ ವೇಳೆಯೇ ಆತ ಆವರಣದಲ್ಲಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಇವರಲ್ಲೊಬ್ಬರು ಮಹಿಳೆ ಎಂದು ತಿಳಿದುಬಂದಿದೆ. ಮತ್ತೊಬ್ಬ ವ್ಯಕ್ತಿ ವೆಸ್ಟ್ ಮಿನಿಸ್ಟರ್ ಬಿಡ್ಜ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.

ದಾಳಿ ಯತ್ನವನ್ನು ಪೊಲೀಸರು ತಡೆದಿದ್ದು, ದಾಳಿಕೋರನ ಮೇಲೆ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 400 ಮಂದಿ ಸಂಸದರು ಸಂಸತ್ ಭವನದ ಒಳಗಿದ್ದರು ಅವರು ಸುರಕ್ಷಿತರಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸಂಸತ್ತು ಪ್ಯಾಲೇಸ್ ಆಫ್ ವೆಸ್ಟ್ ಮಿನಿಸ್ಟರ್ ಹೊರಗಿನ ಸೇತುವೆಯಲ್ಲಿ ವ್ಯಕ್ತಿಯೊಬ್ಬ ಕಾರನ್ನು ಹಿಗ್ಗಾಮುಗ್ಗಾ ಚಲಾಯಿಸಿದ್ದು, ಪಾದಚಾರಿಗಳಿಗೆ ಮೇಲೆ ಏರಿ ಹೋಗಿದ್ದಾನೆ. ಬಳಿಕ ಅಲ್ಲಿನ ಗೇಟೊಂದಕ್ಕೆ ಗುದ್ದಿಸಿದ್ದು ಅಲ್ಲೇ ಇದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ಚೂರಿಯಿಂದ ಇರಿದಿದ್ದಾನೆ.

ಬಳಿಕ ಸಂಸತ್ ಗೇಟಿನೊಳಕ್ಕೆ ನುಗ್ಗಲು ಯತ್ನಿಸುತ್ತಿದ್ದಂತೆ ಶಸ್ತ್ರಸಜ್ಜಿತ ಪೊಲೀಸರು ದಾಳಿಕೋರನ ಮೇಲೆ ಗುಂಡು ಹಾರಿಸಿದ್ದಾರೆ. ಸಂಸತ್ತಿನ ಹೊರಭಾಗ ಮೂರು ಗುಂಡಿನ ದಾಳಿ ಸದ್ದು ಕೇಳುತ್ತಿದ್ದಂತೆ, ಲಂಡನ್ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.