ಭಾರತೀಯ ದಂಪತಿಗಳಿಗೆ Bloody Indians ಎಂದು ಕರೆದು ಅವಮಾನ ಮಾಡಿ, ವಿಮಾನದಿಂದ ಹೊರದಬ್ಬಿ ದರ್ಪ ಮೆರೆದ ಬ್ರಿಟಿಶ್ ಏರ್ವೇಸ್!!

1
474

ಭಾರತೀಯ ನಾಗರಿಕರೆ ಬ್ರಿಟಿಶ್ ಏರ್ವೇಸ್ ವಿಮಾನದಲ್ಲಿ ಪ್ರಯಾಣಿಸಬೇಕು ಅಂದ್ರೆ ಕೊಂಚ ಯೋಚನೆ ಮಾಡ್ಲೆಬೇಕು ಯಾಕೆಂದ್ರೆ ನಡುದಾರಿಯಲ್ಲೇ ಬಿಟ್ಟು ಹೋಗುವ ಕಟುಕರು ಈ ಬ್ರಿಟಿಷರು. ಹಾಗೇನಾದ್ರೂ ಹೋಗುವ ಅನಿವಾರ್ಯೆತೆ ಬಂದ್ರೆ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಲೇಬೇಡಿ.
ಭಾರತೀಯರು ಸ್ವತಂತ್ರಕಾಗಿ ಬ್ರಿಟಿಷರ ವಿರುದ್ದ ಹೋರಾಡಿ ಅವರ ಪಕ್ಕೆಲಬು ಮುರಿದು ಓಡಿಸಿ ಸುಮಾರು ವರ್ಷಗಳಾದರೂ ಅವ್ರು ಮಾತ್ರ ಭಾರತೀಯರ ಮೇಲೆ ಹಗೆಯನ್ನು ಬಿಟ್ಟಿಲ್ಲ ಅವ್ರು ಬಿಡೋದು ಇಲ್ಲ ಅನ್ಸುತೆ, ಇದರಿಂದ ಮೃದು ಸ್ವಭಾವದ ಭಾರತೀಯರು, ಮೃಗ ಸ್ವಭಾವದ ಬ್ರಿಟಿಷರಿಂದ ಅವಮಾನ, ಜನಾಂಗೀಯ ತಾರತಮ್ಯ ಹಾಗೂ ದುರ್ವರ್ತನೆಗೆ ತುತ್ತಾಗುತ್ತಾನೆ ಇದ್ದಾರೆ.

ಇಂತಹದೆ ಒಂದು ಪ್ರಕರಣ ಜುಲೈ 23 ಅಂದು ನಡೆದಿದ್ದು ಸ್ವಲ್ಪ ವಿಳಂಬದ ನಂತರ ಬೆಳೆಕಿಗೆ ಬಂದಿದೆ. ಭಾರತೀಯರಾದ ಹಿರಿಯ ಐಎಎಸ್ ಅಧಿಕಾರಿ ಒಬ್ಬರು ಕುಟುಂಬ ಸಮೇತವಾಗಿ ಲಂಡನ್- ಬರ್ಲಿನ್‍ಗೆ ಪ್ರಯಾಣ ಬೆಳೆಸಿದ್ದರು ಈ ವಿಮಾನ ಹೊರಡುವ ವೇಳೆಯಲ್ಲಿ ಸೇಪ್ಟಿಗಾಗಿ ಹಾಕ್ಕಿಕೊಳುವ ಬೆಲ್ಟ್ ಕೀರಿ ಕೀರಿಯಾಗಿ ಉಸಿರಾಟದ ತೊಂದರೆಯಿಂದ 3 ವರ್ಷದ ಮಗು ಅಳಲು ಪ್ರಾರಂಭಿಸಿದೆ ಎಷ್ಟೇ ಸಮಾಧಾನ ಮಾಡಿದರು ಮಗು ಅಳುವುದ್ದನ್ನು ನೀಲ್ಲಿಸಲೆಇಲ್ಲ ಇದನ್ನು ಕಂಡ ಭಾರತಿಯ ಮೂಲದ ಇನ್ನೊಂದು ಕುಟುಂಬ ಸಹಾಯಕ್ಕೆ ಬಂದು ಬೆಸ್ಕೆತ್ ನೀಡಿ ಸಮಾಧಾನ ಪಡಿಸಲ್ಲು ಯತ್ನಿಸಿದ್ದಾರೆ ಇದನ್ನೆಲ್ಲ ಕಂಡ ಕೆಂಪುಮೋತಿಯ ಕೋತಿಗಳು ಬಂದು Bloody Indians ಅಂತ ಬೈದು ಕಿಟಕಿಯಿಂದ ಹೊರಹಾಕುತೇವೆ ಅಂತಾ ಅವಾಜ್ ಹಾಕಿ ವಿಮಾನವನ್ನು ಟರ್ಮಿನಲ್‍ಗೆ ತಂದು ಭಾರತೀಯ ಎರಡು ಕುಟುಂಬವನ್ನು ವಿಮಾನದಿಂದಲೇ ಕೆಳಗೆಇಳಿಸಿದ ಭದ್ರತಾ ಸಿಬ್ಬಂದಿಗಳು ಅವರ ಬೋರ್ಡಿಂಗ್ ಪಾಸ್ ಕಿತ್ತುಕೊಂಡು ಗ್ರಾಹಕರ ಸೇವೆಯ ವಿಭಾಗದವರಿಗೂ ಯಾವುದೇ ಕಾರಣವನ್ನು ತಿಳಿಸಿಲ್ಲ, ಇದರ ವಿರುದ್ದ ದೂರು ನೀಡಿದ್ದರೂ ಆಡಳಿತ ವರ್ಗ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ.
ಈ ಪ್ರಕರಣದ ಕುರಿತು ಮಗುವಿನ ತಂದೆ ಪತ್ರದ ಮೂಲಕ ಸಚಿವ ಸುರೇಶ್ ಪ್ರಭು ಅವರಿಗೆ ಬ್ರಿಟಿಷ್ ಏರ್‍ವೇಸ್ ಸಿಬ್ಬಂದಿ ವಿರುದ್ಧ ತನಿಖೆ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಬ್ರಿಟಿಷ್ ಏರ್‌ವೇಸ್ ಇಂತಹ ಯಡವಟ್ಟುಗಳನ್ನು ಮಾಡಿರುವುದು ಇದೇ ಮೊದಲೇನಲ್ಲ ಭಾರತೀಯ ಹಲವಾರು ನಾಗರಿಕರಿಗೆ ಇಂತಹ ಅನುಭವಗಳು ಆಗಿವೆ ಸಚಿನ್ ತೆಂಡೂಲ್ಕರ್ ಅವರ ಹೆಸರು ಕೇಳಿದ್ದ ಬ್ರಿಟಿಷ್ ಏರ್‌ವೇಸ್ ಸಂಸ್ಥೆ ಸೀಟು ಖಾಲಿ ಇದ್ದರೂ ತಮ್ಮ ಕುಟುಂಬಕ್ಕೆ ಟಿಕೆಟ್ ನೀಡಲು ನಿರಾಕರಿಸಿತ್ತು. ಅಲ್ಲದೆ, ತಮ್ಮ ಲಗೇಜ್‌ಅನ್ನು ಬೇರೆ ಸ್ಥಳಕ್ಕೆ ತಲುಪಿಸಿದ್ದರು. ಲಗೇಜ್ ಮರಳಿಸಲು ತಮ್ಮ ಪೂರ್ಣ ಹೆಸರು, ವಿಳಾಸದ ಮಾಹಿತಿ ನಿಡುವಂತೆ ಬ್ರಿಟಿಷ್ ಏರ್‌ವೇಸ್ ಮರು ಟ್ವೀಟ್ ಮಾಡಿದ್ದಕ್ಕೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು ಇನ್ನೆಂದೂ ಆ ವಿಮಾನ ಹತ್ತುವುದಿಲ್ಲ ಎಂದು ಕ್ರಿಕೆಟ್ ದಿಗ್ಗಜ ಸಚಿನ್ ಟ್ವೀಟ್ ಮಾಡಿದ್ದರು. ಅನಿಲ್ ಕ್ಕುಂಬ್ಳೆಅವರು  ಅದೇ ಅನುಭವವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಭಾರತದ ತುಂಬೆಲ್ಲ ಬ್ರಿಟಿಷ್ ಏರ್‌ವೇಸ್‌ನ ಈ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ವಿಮಾನ ಸಂಸ್ಥೆಯನ್ನು ಭಾರತದಿಂದ ಹೊರಕ್ಕೆ ಹಾಕುವಂತೆ ಒತ್ತಾಯಿಸಿದ್ದಾರೆ. ಈ ಪ್ರಕರಣಕ್ಕೆ ಮರುಉತ್ತರವಾಗಿ ಬ್ರಿಟಿಷ್ ಏರ್‌ವೇಸ್ ಇಂತಹ ಆರೋಪಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಯಾವುದೇ ರೀತಿಯ ತಾರತಮ್ಯವನ್ನು ಸಹಿಸುವುದಿಲ್ಲ. ಪೂರ್ಣ ಪ್ರಮಾಣದ ತನಿಖೆಯನ್ನು ಆರಂಭಿಸಿದ್ದು, ಗ್ರಾಹಕರೊಂದಿಗೆ ಸಂಪರ್ಕದಲ್ಲಿ ಇರುವುದಾಗಿ ಬ್ರಿಟಿಷ್ ಏರ್‌ವೇಸ್ ವಕ್ತಾರರು ತಿಳಿಸಿದ್ದಾರೆ.